ಕೊಚ್ಚಿ(ಕೇರಳ) :ಕೇರಳದ ಕೋಯಿಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಪ್ರಯಾಣಿಕರಿಂದ ಸುಮಾರು 81.2 ಲಕ್ಷ ರೂ. ಮೌಲ್ಯದ 1.6 ಕೆಜಿಯಷ್ಟು ಚಿನ್ನವನ್ನು ವಾಯು ಗುಪ್ತಚರ ಘಟಕ ವಶಪಡಿಸಿಕೊಂಡಿದೆ.
ಕೋಯಿಕೋಡ್ ಏರ್ಪೋರ್ಟ್ನಲ್ಲಿ ₹81 ಲಕ್ಷ ಮೌಲ್ಯದ ಚಿನ್ನ ಸೀಜ್ - ಕೇರಳದ ಕೋಯಿಕೋಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಸೀಜ್ ಸುದ್ದಿ
ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಕೋಯಿಕೋಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಏರ್ ಇಂಟೆಲಿಜೆನ್ಸ್ ಯುನಿಟ್ ಸುಮಾರು 81 ಲಕ್ಷ ರೂ. ಮೌಲ್ಯದ 106 ಕೆಜಿಯಷ್ಟು ಚಿನ್ನವನ್ನು ವಶಪಡಿಸಿಕೊಂಡಿದೆ..
ಚಿನ್ನ ಸೀಜ್
ಸೌದಿ ಅರೇಬಿಯಾದ ಜೆಡ್ಡಾದಿಂದ ಪ್ರಯಾಣಿಸುತ್ತಿದ್ದ ಪ್ರಯಾಣಿಕನೋರ್ವನಿಂದ 1.6 ಕೆಜಿ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಬ್ಲೂಟೂತ್ ಸ್ಪೀಕರ್‌ನ ಬ್ಯಾಟರಿ ಕೇಸ್ ಒಳಗಡೆ ಇಟ್ಟು ಅಕ್ರಮವಾಗಿ ಸಾಗಿಸುತ್ತಿದ್ದಾಗ ಚಿನ್ನ ಪತ್ತೆಯಾಗಿದ್ದು, ಇದರ ಮೌಲ್ಯ ಸುಮಾರು 77 ಲಕ್ಷ ರೂ. ಎಂದು ಕಸ್ಟಮ್ಸ್ ಕಮಿಷನರೇಟ್ ತಿಳಿಸಿದ್ದಾರೆ.
ಇನ್ನೊಂದು ಘಟನೆಯಲ್ಲಿ ದುಬೈನಿಂದ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ 4.2 ಲಕ್ಷ ರೂ.ಗಳ 87 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಚಿನ್ನವನ್ನು ರಾಸಾಯನಿಕಗಳೊಂದಿಗೆ ಬೆರೆಸಿ ದ್ರವ ರೂಪದಲ್ಲಿ ಸುಗಂಧ ದ್ರವ್ಯದ ಬಾಟಲಿಗಳಲ್ಲಿ ತುಂಬಿಸಿ ತರಲಾಗಿತ್ತು ಎಂದು ಹೇಳಲಾಗಿದೆ.