ಕೊಚ್ಚಿ: ಕೊಝಿಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಬಂದ ಪ್ರಯಾಣಿಕರನ್ನು ತಪಾಸಣೆ ನಡೆಸುವಾಗ 18 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಕೊಝಿಕೋಡ್ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಣೆ: 18 ಲಕ್ಷ ರೂ. ಮೌಲ್ಯದ ಚಿನ್ನ ವಶ - ಕೊಝಿಕೋಡ್ ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಣೆ
ಕೊಚ್ಚಿಯ ಏರ್ ಇಂಟೆಲಿಜೆನ್ಸ್ ಯುನಿಟ್ ದುಬೈನಿಂದ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರ ಬಳಿ ಇದ್ದ 18 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
18 ಲಕ್ಷ ರೂ. ಮೌಲ್ಯದ ಚಿನ್ನ ವಶ
ಈ ಚಿನ್ನವನ್ನು FZ 4313 ನಲ್ಲಿ ಬಂದ ಪ್ರಯಾಣಿಕ ಪವರ್ ಬ್ಯಾಂಕ್ ಆಕಾರದಲ್ಲಿ ಚಿನ್ನ ಕಳ್ಳಸಾಗಣೆ ಮಾಡಿಕೊಂಡು ಬಂದಿದ್ದ. ಹಾಗೆಯೇ ಇನ್ನೋರ್ವ ವಿದ್ಯುತ್ ವಿಸ್ತರಣಾ ಸಾಧನಗಳಲ್ಲಿ ತಿರುಪು ಮೊಳೆಗಳ ಆಕಾರದಲ್ಲಿ ಚಿನ್ನವನ್ನು ತೆಗೆದುಕೊಂಡು ಬಂದಿದ್ದಾನೆ. ಮತ್ತೊಂದು ಘಟನೆಯಲ್ಲಿ 463 ಗ್ರಾಂ ಚಿನ್ನವನ್ನು ಕ್ಯಾಪ್ಸುಲ್ಳ ಆಕಾರದಲ್ಲಿ ತೆಗೆದುಕೊಂಡು ಬಂದಿದ್ದು, ಅಧಿಕಾರಿಗಳು ಈಗ ಈ ಎಲ್ಲಾ ಚಿನ್ನವನ್ನು ವಶಪಡಿಸಕೊಂಡಿದ್ದಾರೆ.
ಇನ್ನು ವಿಮಾನ ಸಂಖ್ಯೆ IX 1744ರಲ್ಲಿ ದುಬೈನಿಂದ ಆಗಮಿಸಿದ ಪ್ರಯಾಣಿಕರಿಂದ 463 ಗ್ರಾಂ ಚಿನ್ನವನ್ನು ವಶಪಡಿಸಿಳ್ಳಲಾಗಿದೆ.
Last Updated : Nov 27, 2020, 5:18 PM IST