ನವದೆಹಲಿ:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈಲ್ವೆ ಪೊಲೀಸರು ಅಂತಾರಾಜ್ಯ ಚಿನ್ನ ಸಾಗಾಣಿಕೆದಾರನನ್ನು ಬಂಧಿಸಿದ್ದು, 3.29 ಕೋಟಿ ಮೌಲ್ಯದ 6.292 ಕೆಜಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
3.29 ಕೋಟಿ ಮೌಲ್ಯದ ಚಿನ್ನ ಅಕ್ರಮ ಸಾಗಣೆ: ರೈಲ್ವೆ ನಿಲ್ದಾಣದಲ್ಲಿ ಆರೋಪಿ ಬಂಧನ - ದೆಹಲಿಯಲ್ಲಿ ಅಕ್ರಮ ಚಿನ್ನ ಸಾಗಣೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅಂತಾರಾಜ್ಯ ಚಿನ್ನ ಸಾಗಾಟ ಮಾಡುತ್ತಿದ್ದವನನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
![3.29 ಕೋಟಿ ಮೌಲ್ಯದ ಚಿನ್ನ ಅಕ್ರಮ ಸಾಗಣೆ: ರೈಲ್ವೆ ನಿಲ್ದಾಣದಲ್ಲಿ ಆರೋಪಿ ಬಂಧನ gold-worth-more-than-3-crore-seized-at-new-delhi-railway-station](https://etvbharatimages.akamaized.net/etvbharat/prod-images/768-512-9611057-thumbnail-3x2-news.jpg)
3.29 ಕೋಟಿ ಮೌಲ್ಯದ ಚಿನ್ನ ಅಕ್ರಮ ಸಾಗಣೆ
ಬಂಧಿತ ಆರೋಪಿ ಪ್ರವೀಣ್ ಕುಮಾರ್ ಎಂದು ಗುರುತಿಸಲಾಗಿದೆ. ನವದೆಹಲಿ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯನ್ನು ವಿಚಾರಿಸಿದಾಗ 6.292 ಕೆಜಿ ಚಿನ್ನ ಅಕ್ರಮ ಸಾಗಣೆ ಬೆಳಕಿಗೆ ಬಂದಿದೆ.
ಆರೋಪಿಯು ಪಶ್ಚಿಮ ಬಂಗಾಳದ ಅಸನ್ಸೋಲ್‌ನಿಂದ ಮುಂಬೈಗೆ ಚಿನ್ನ ಸಾಗಿಸುತ್ತಿದ್ದ. ಪೊಲೀಸರು ಚಿನ್ನ ಮತ್ತು ಆರೋಪಿಯನ್ನು ಕಸ್ಟಮ್ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.