ಹೈದರಾಬಾದ್ :ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಗುರುವಾರ ಆಗಮಿಸಿದ ಮಹಿಳಾ ಪ್ರಯಾಣಿಕರೊಬ್ಬರಿಂದ 1 ಕೆಜಿಗೂ ಅಧಿಕ ತೂಕದ ಸುಮಾರು 86 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹೈದರಾಬಾದ್ ಏರ್ಪೋರ್ಟ್: ಮಹಿಳಾ ಪ್ರಯಾಣಿಕಳ ಗುದನಾಳದಲ್ಲಿ ಚಿನ್ನ ಪತ್ತೆ - Gold seized from female passengers
ಕುವೈತ್‌ನಿಂದ ಬಂದ ಮಹಿಳಾ ಪ್ರಯಾಣಿರೊಬ್ಬರ ಗುದನಾಳ ಹಾಗೂ ಸಾಕ್ಸ್ನಲ್ಲಿ ಚಿನ್ನ ಪತ್ತೆಯಾಗಿದ್ದು, ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಸುಮಾರು 86 ಲಕ್ಷ ರುಪಾಯಿ ಮೌಲ್ಯದ ಚಿನ್ನ ವಶ ಪಡಿಸಿಕೊಂಡಿದ್ದಾರೆ.
ಮಹಿಳಾ ಪ್ರಯಾಣಿಕರಿಂದ ವಶಪಡಿಸಿಕೊಂಡ ಚಿನ್ನ
ಆ ಮಹಿಳಾ ಪ್ರಯಾಣಿಕರು ಕುವೈತ್‌ನಿಂದ ಬಂದಿದ್ದು, ಗುದನಾಳದಲ್ಲಿ ಪೇಸ್ಟ್ ರೂಪದಲ್ಲಿ ಹಾಗೂ ಶೂ ಸಾಕ್ಸ್ನಲ್ಲಿ ಕಪ್ಪು ಪ್ಲಾಸ್ಟಿಕ್ ಕವರ್ನಲ್ಲಿ ಸುತ್ತಿ ಬಚ್ಚಿಟ್ಟುಕೊಂಡಿದ್ದ ಚಿನ್ನವನ್ನು ಹೈದರಾಬಾದ್ ಕಸ್ಟಮ್ಸ್‌ನ ಏರ್ ಇಂಟೆಲಿಜೆನ್ಸ್ ಘಟಕ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ :ಬೆಳಗಾವಿ: ಮೂವರು ನಕಲಿ ACB ಅಧಿಕಾರಿಗಳ ಬಂಧನ