ಹೈದರಾಬಾದ್:ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನಿಂದ ಸುಮಾರು 24.14 ಲಕ್ಷ ಮೌಲ್ಯದ 495 ಗ್ರಾಂ ಚಿನ್ನವನ್ನು ಜಪ್ತಿ ಮಾಡಿರುವುದಾಗಿ ಕಸ್ಟಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಫೇಸ್ಕ್ರೀಮ್, ಚಪ್ಪಲಿಗಳಲ್ಲಿ ಚಿನ್ನ ಸಾಗಾಟ; ವ್ಯಕ್ತಿಯಿಂದ 495 ಗ್ರಾಂ ಚಿನ್ನ ಜಪ್ತಿ - ಹೈದರಾಬಾದ್ ಅಪರಾಧ ಸುದ್ದಿ
ಫೇಸ್ ಕ್ರೀಮ್ ಬಾಕ್ಸ್, ಬ್ಲೆಂಡರ್ ಮತ್ತು ಚಪ್ಪಲಿಗಳಲ್ಲಿ ಚಿನ್ನವನ್ನು ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ.
ಫೇಸ್ಕ್ರೀಮ್, ಚಪ್ಪಲಿಗಳಲ್ಲಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯಿಂದ 495 ಗ್ರಾಮ್ ಚಿನ್ನ ಜಪ್ತಿ
ದುಬೈನಿಂದ ಹೈದರಾಬಾದ್ನ ಶಂಷಾಬಾದ್ನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕನನ್ನು ಪರಿಶೀಲನೆ ನಡೆಸಿದಾಗ ಚಿನ್ನವಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ
ಫೇಸ್ ಕ್ರಿಮ್ ಬಾಕ್ಸ್, ಬ್ಲೆಂಡರ್ ಮತ್ತು ಚಪ್ಪಲಿಗಳಲ್ಲಿ ಚಿನ್ನ ಸಾಗಿಸಿದ್ದು, ಸದ್ಯಕ್ಕೆ ಹೈದರಾಬಾದ್ನ ಕಸ್ಟಂ ಅಧಿಕಾರಿಗಳು ಆತನ ವಿರುದ್ಧ ದೂರು ದಾಖಲಿಸಿದ್ದಾರೆ.