ನವದೆಹಲಿ/ಬೆಂಗಳೂರು:ಭಾರತೀಯ ಚಿನಿವಾರ ಮಾರುಕಟ್ಟೆ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಪ್ರತಿದಿನ ಪರಿಷ್ಕರಿಸುತ್ತದೆ. ಹಿಂದಿನ ದಿನದ ಅಂಕಿಅಂಶಗಳಿಗೆ ಹೋಲಿಸಿದರೆ ಸೋಮವಾರದಂದು ಭಾರತದಾದ್ಯಂತ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಯಥಾಸ್ಥಿತಿಯಲ್ಲಿವೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನ ₹ 50,130 ಕ್ಕೆ ಲಭ್ಯವಿದ್ದರೆ, 22 ಕ್ಯಾರೆಟ್ ಚಿನ್ನದ ದರ ₹ 45,950 ಇದೆ.
ಚೆನ್ನೈ, ಕೊಯಮತ್ತೂರು ಮತ್ತು ಮಧುರೈನಲ್ಲಿ 10 ಗ್ರಾಂನಲ್ಲಿ 24 ಕ್ಯಾರೆಟ್ ಚಿನ್ನ ₹50,620 ಇದೆ. ದೆಹಲಿ, ಜೈಪುರ, ಚಂಡೀಗಢ ಮತ್ತು ಲಕ್ನೋದಲ್ಲಿ ₹50,280 ಆಗಿದೆ. ನಾಸಿಕ್, ನಾಗ್ಪುರ, ಪಾಟ್ನಾ, ಪುಣೆ, ಮತ್ತು ವಡೋದಲ್ಲಿ ಇದರ ಬೆಲೆ ₹50,160. ಮುಂಬೈ, ಕೋಲ್ಕತ್ತಾ, ಹೈದರಾಬಾದ್, ಕೇರಳ, ವಿಜಯವಾಡ, ಭುವನೇಶ್ವರ ಮತ್ತು ವಿಶಾಖಪಟ್ಟಣಂನಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ ₹50,130 ಆಗಿದೆ. ಇನ್ನು 1 ಕೆಜಿ ಬೆಳ್ಳಿಯ ಬೆಲೆ ₹56,700 ಆಗಿದೆ.