ಅಹಮದಾಬಾದ್(ಗುಜರಾತ್): ಅಹಮದಾಬಾದ್ನ ಸರ್ದಾರ್ ವಲ್ಲಾಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೌಸ್ ಕೀಪಿಂಗ್ ಕೆಲಸಗಾರರೊಬ್ಬರಿಗೆ ಶೌಚಾಲಯದಲ್ಲಿ ಸುಮಾರು 45 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಸಿಕ್ಕಿದ್ದು, ಅದನ್ನು ಕಸ್ಟಮ್ ಅಧಿಕಾರಿಗೆ ಹಸ್ತಾಂತರಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಹೌಸ್ ಕೀಪಿಂಗ್ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿರುವ ಹರ್ವಿಂದರ್ ನರುಕಾ ಅವರು ಟರ್ಮಿನಲ್ 2ನಲ್ಲಿ ಸಿಬ್ಬಂದಿಗಳು ಶೌಚಾಲಯವನ್ನು ಸರಿಯಾಗಿ ಸ್ವಚ್ಛಗೊಳಿಸಿದ್ದಾರೆಯೇ ಎಂದು ಪರಿಶೀಲಿಸುತ್ತಿದ್ದರು. ಇದೇ ವೇಳೆ, ಶೌಚಾಲಯದ ಫ್ಲಶ್ ಟ್ಯಾಂಕ್ ತೆರೆದಿರುವುದನ್ನು ಗಮನಿಸಿದರು. ಹೋಗಿ ಪರಿಶೀಲಿಸಿದಾಗ ತಲಾ 400 ಗ್ರಾಂ ತೂಕದ ಚಿನ್ನದ ಬಳೆಗಳಿರುವ ಎರಡು ಪ್ಲಾಸ್ಟಿಕ್ ಚೀಲಗಳು ಪತ್ತೆಯಾಗಿವೆ.