ಕರ್ನಾಟಕ

karnataka

ETV Bharat / bharat

16 ಕೆಜಿ ಬಂಗಾರದ ಸೀರೆಯಲ್ಲಿ ಮಿಂಚಿದ ಮಹಾತಾಯಿ.. 'ಸುವರ್ಣ'ಮಯ ಲಕ್ಷ್ಮಿ ದರ್ಶನ ಪಡೆದವರು ಪುನೀತ.. - ಮಹಾಲಕ್ಷ್ಮಿ ಬಂಗಾರದಿಂದ ಸೀರೆ

ಮಹಾರಾಷ್ಟ್ರದ ಪುಣೆಯಲ್ಲಿರುವ ಮಹಾಲಕ್ಷ್ಮೀಯ ಮೂರ್ತಿಗೆ ಬರೋಬ್ಬರಿ 16 ಕೆಜಿ ಬಂಗಾರದ ಸೀರೆಯಲ್ಲಿ ಅಲಂಕಾರ ಮಾಡಲಾಗಿತ್ತು. ಈ ಸೀರೆ ಶುದ್ಧ ಚಿನ್ನದಿಂದ ತಯಾರಾಗಿದೆ. ವರ್ಷದಲ್ಲಿ ಎರಡು ಸಲ ಅಂದ್ರೇ ದಸರಾ ಹಾಗೂ ಲಕ್ಷ್ಮಿ ಪೂಜೆ ಸಂದರ್ಭದಲ್ಲಿ ಮಾತ್ರ ಈ ಸೀರೆಯನ್ನ ದೇವಿಗೆ ಉಡಿಸಲಾಗುತ್ತದೆ..

Gold sari weighing 16 kg worn to Mahalakshmi
Gold sari weighing 16 kg worn to Mahalakshmi

By

Published : Oct 16, 2021, 7:11 PM IST

ಪುಣೆ(ಮಹಾರಾಷ್ಟ್ರ) :ನವರಾತ್ರಿ ಸಂಭ್ರಮದಲ್ಲಿ ದೇಶದ ಬಹುತೇಕ ಎಲ್ಲ ದೇವಸ್ಥಾನದ ಪ್ರತಿಮೆಗಳಿಗೆ ಬಗೆ ಬಗೆಯ ಅಲಂಕಾರ ಮಾಡಲಾಗಿತ್ತು. ಪ್ರಮುಖವಾಗಿ ದುರ್ಗೆ, ಕಾಳಿ, ಪಾರ್ವತಿ ಸೇರಿದಂತೆ ಮಹಿಳಾ ದೇವರ ಮೂರ್ತಿಗಳು ಇನ್ನಿಲ್ಲದ ರೀತಿಯಲ್ಲಿ ಅಲಂಕಾರಗೊಂಡಿದ್ದವು. ಮಹಾರಾಷ್ಟ್ರದ ಪುಣೆಯಲ್ಲಿರುವ ಮಹಾಲಕ್ಷ್ಮಿ ಬಂಗಾರದಿಂದ ಶೃಂಗಾರಗೊಂಡಿದ್ದಳು.

16 ಕೆಜಿ ಬಂಗಾರದ ಸೀರೆಯಲ್ಲಿ ಮಿಂಚಿದ ಮಹಾಲಕ್ಷ್ಮಿ ದೇವಿ..

ಇದನ್ನೂ ಓದಿರಿ:5.16 ಕೋಟಿ ರೂ. ಗರಿ ಗರಿ ಕರೆನ್ಸಿಯಿಂದ ಅಲಂಕೃತಗೊಂಡ ಪರಮೇಶ್ವರಿ.. ನೋಡಲೆರಡು ಕಣ್ಣು ಸಾಲದು!

ಮಹಾರಾಷ್ಟ್ರದ ಪುಣೆಯಲ್ಲಿರುವ ಮಹಾಲಕ್ಷ್ಮೀಯ ಮೂರ್ತಿಗೆ ಬರೋಬ್ಬರಿ 16 ಕೆಜಿ ಬಂಗಾರದ ಸೀರೆಯಲ್ಲಿ ಅಲಂಕಾರ ಮಾಡಲಾಗಿತ್ತು. ಈ ಸೀರೆ ಶುದ್ಧ ಚಿನ್ನದಿಂದ ತಯಾರಾಗಿದೆ. ವರ್ಷದಲ್ಲಿ ಎರಡು ಸಲ ಅಂದ್ರೇ ದಸರಾ ಹಾಗೂ ಲಕ್ಷ್ಮಿ ಪೂಜೆ ಸಂದರ್ಭದಲ್ಲಿ ಮಾತ್ರ ಈ ಸೀರೆಯನ್ನ ದೇವಿಗೆ ಉಡಿಸಲಾಗುತ್ತದೆ.

ಕಳೆದ 10 ವರ್ಷಗಳ ಹಿಂದೆ ಈ ಬಂಗಾರದ ಸೀರೆ ತಯಾರು ಮಾಡಲಾಗಿದೆ. ಅದಕ್ಕಾಗಿ ಸುಮಾರು 6 ತಿಂಗಳ ಕಾಲ ತೆಗೆದುಕೊಳ್ಳಲಾಗಿತ್ತಂತೆ. ಮಹಾಲಕ್ಷ್ಮಿ ದೇವಸ್ಥಾನದ ದೇವಿಯ ಪ್ರತಿಮೆಗೆ ವಿಜಯದಶಮಿಯ ಪ್ರಯುಕ್ತ ಚಿನ್ನದ ಸೀರೆ ಉಡಿಸಲಾಗಿತ್ತು. ಇನ್ನು, ಆಂಧ್ರಪ್ರದೇಶದ ನೆಲ್ಲೂರಿನಲ್ಲಿರುವ ಪರಮೇಶ್ವರಿ ದೇವಿಗೆ ಬರೋಬ್ಬರಿ 5.16 ಕೋಟಿ ರೂ. ಗರಿ ಗರಿ ಕರೆನ್ಸಿ ನೋಟ್​ನಿಂದ ಅಲಂಕಾರ ಮಾಡಲಾಗಿತ್ತು.

ABOUT THE AUTHOR

...view details