ಹೈದರಾಬಾದ್: ಇಂದು ಚಿನ್ನಾಭರಣಗಳ ಬೆಲೆಯಲ್ಲಿ ಕೊಂಚ (Gold rate) ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಮೇಲೆ 250 ರೂಪಾಯಿ ಇಳಿಕೆಯಾಗಿ 45,900 ರೂಪಾಯಿ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಮೇಲೆ 280 ರೂಪಾಯಿ ಕಡಿಮೆಯಾಗಿ 50,070 ರೂಪಾಯಿಗೆ ಲಭ್ಯವಾಗುತ್ತಿದೆ.
ಹೈದರಾಬಾದ್ನಲ್ಲಿ 22 ಕ್ಯಾರೆಟ್‌ನ ಪ್ರತಿ 10 ಗ್ರಾಂ ಚಿನ್ನಕ್ಕೆ 45,900 ರೂಪಾಯಿ ಇದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನ 50,070 ರೂ. ಗೆ ಮಾರಾಟವಾಗುತ್ತಿದೆ. ವಿಶಾಖಪಟ್ಟಣಂನಲ್ಲಿ ಸಹ ಚಿನ್ನದ ದರ ಇದೇ ರೀತಿ ಇಳಿಕೆ ಕಂಡಿದೆ. 22 ಕ್ಯಾರೆಟ್‌ನ 10 ಗ್ರಾಂ ಗೆ 45,900 ಹಾಗೂ 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,070 ರೂಪಾಯಿ ಇದೆ. ನೆರೆಯ ಕೇರಳದಲ್ಲಿ ಪ್ರತಿ 10 ಗ್ರಾಂ 22- ಕ್ಯಾರೆಟ್ ಚಿನ್ನದ ದರ 45,900 ರೂ, ಇದೆ. ಜೊತೆಗೆ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 50,070 ರೂ. ಇದೆ.