ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಮತ್ತೊಮ್ಮೆ 50 ಸಾವಿರ ಗಡಿ ದಾಟಿದ ಚಿನ್ನದ ದರ.. ಯಾವ ನಗರದಲ್ಲಿ ಎಷ್ಟು ಬೆಲೆ!? - ಆಭರಣದ ಬೆಲೆ

ಸತತವಾಗಿ ಕುಸಿತ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಮತ್ತೊಮ್ಮೆ ಏರಿಕೆ ಕಂಡು ಬಂದಿದ್ದು, ಸುಮಾರು ಮೂರು ತಿಂಗಳ ಬಳಿಕ ಇದೇ ಮೊದಲ ಸಲ 50 ಸಾವಿರ ರೂ. ಗಡಿ ದಾಟಿದೆ.

Gold rate
Gold rate

By

Published : Apr 20, 2021, 4:31 PM IST

ನವದೆಹಲಿ: ಕಳೆದ ಕೆಲ ದಿನಗಳ ಹಿಂದೆ ನಿರಂತರವಾಗಿ ಕುಸಿತ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಇದೀಗ ನಾಗಾಲೋಟ ಕಂಡು ಬಂದಿದ್ದು, ಮತ್ತೊಮ್ಮೆ 50 ಸಾವಿರ ಗಡಿ ದಾಟಿದೆ. ದೆಹಲಿಯಲ್ಲಿ 10 ಗ್ರಾಂ 24 ಕ್ಯಾರೆಟ್​ ಬಂಗಾರದ ಬೆಲೆ 50,620 ರೂ. ಆಗಿದ್ದು, 22 ಕ್ಯಾರೆಟ್​​ ಬಂಗಾರದ ಬೆಲೆ 46,400 ರೂ ಆಗಿದೆ. ಇದಕ್ಕೂ ಮೊದಲು ದೆಹಲಿಯಲ್ಲಿ 22 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ 44 ಸಾವಿರ ರೂ ಇತ್ತು.

ಹೈದರಾಬಾದ್​​ನಲ್ಲಿ 22 ಕ್ಯಾರೆಟ್​ ಗೋಲ್ಡ್​ ಬೆಲೆ 44,250 ರೂ ಆಗಿದ್ದು, ಮುಂಬೈನಲ್ಲಿ 45,070 ರೂ ಇದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಬಂಗಾರದ ಬೆಲೆ 44,250 ರೂ ಇದ್ದು, 24 ಕ್ಯಾರೆಟ್​ ಬಂಗಾರ 48,270 ರೂ ಆಗಿದೆ.

ಇದನ್ನೂ ಓದಿ:ಏ. 22ರಿಂದ 29ರವರೆಗೆ ಜಾರ್ಖಂಡ್​​ನಲ್ಲಿ ಲಾಕ್​ಡೌನ್​: ಸಿಎಂ ಮಹತ್ವದ ಘೋಷಣೆ

ಕೊರೊನಾ ಮಹಾಮಾರಿ ಕಾರಣ ಕಳೆದ ವರ್ಷ ಬಂಗಾರದ ಬೆಲೆ ಗಗನಕ್ಕೇರಿತ್ತು. ಇದಾದ ಬಳಿಕ ದಿಢೀರ್​ ಕುಸಿತ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಮತ್ತೊಮ್ಮೆ ಏರಿಕೆ ಕಂಡು ಬರುತ್ತಿರುವುದು ಆಭರಣ ಪ್ರೀಯರಲ್ಲಿ ಆತಂಕ ಮೂಡಿಸಿದೆ.

ABOUT THE AUTHOR

...view details