ಕರ್ನಾಟಕ

karnataka

ETV Bharat / bharat

ಫೆಡ್‌ ಆಕ್ರಮಣಕಾರಿ ನೀತಿ : ಚಿನ್ನದ ಬೆಲೆಗಳು ಒತ್ತಡಕ್ಕೆ ಒಳಗಾಗುವ ಸಾಧ್ಯತೆ - ಉಕ್ರೇನ್ ಮೇಲೆ ರಷ್ಯಾ ಆಕ್ರಮಣದಿಂದ ಚಿನ್ನದ ಮೇಲೆ ಪರಿಣಾಮ

ಸಾಂಕ್ರಾಮಿಕ ರೋಗವು ಕಡಿಮೆಯಾಗಲು ಪ್ರಾರಂಭಿಸಿದಾಗ, ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ವಿಷಯ ಮುನ್ನೆಲೆಗೆ ಬಂದಿತು. ಇದು ಲೋಹದ ಬೆಲೆಗಳ ಮೇಲೆ ತ್ವರಿತ ಪರಿಣಾಮ ಬೀರಿದೆ ಎಂದೇ ಹೇಳಬಹುದು.

ಫೆಡ್‌ನ ಆಕ್ರಮಣಕಾರಿ ನೀತಿ : ಚಿನ್ನದ ಬೆಲೆಗಳು ಒತ್ತಡಕ್ಕೆ ಒಳಗಾಗುವ ಸಾಧ್ಯತೆ
ಫೆಡ್‌ನ ಆಕ್ರಮಣಕಾರಿ ನೀತಿ : ಚಿನ್ನದ ಬೆಲೆಗಳು ಒತ್ತಡಕ್ಕೆ ಒಳಗಾಗುವ ಸಾಧ್ಯತೆ

By

Published : May 2, 2022, 4:40 PM IST

ನವದೆಹಲಿ: ಭಾರತೀಯರಿಗೆ ಅಕ್ಷಯ ತೃತೀಯವು ಚಿನ್ನ ಖರೀದಿಗೆ ಅತ್ಯತ್ತಮ ಸಮಯ ಎಂದು ಭಾವಿಸಲಾಗುತ್ತದೆ. ಈ ನಡುವೆ ಕೊಂಚ ಮಟ್ಟಿಗೆ ಚಿನ್ನದ ಬೆಲೆಯಲ್ಲಿ ಪರಿಣಾಮ ಬೀರಬಹುದು. ಆದರೆ, ಈ ಬಾರಿ ಫೆಡ್‌ನ ಆಕ್ರಮಣಕಾರಿ ನೀತಿಯ ನಿಲುವಿನಿಂದ ಹೆಚ್ಚುತ್ತಿರುವ ನಿರೀಕ್ಷೆಯ ನಡುವೆ, ಹಳದಿ ಲೋಹದ ಬೆಲೆಯಲ್ಲಿ ಸ್ವಲ್ಪ ಏರಿಳಿತ ಕಾಣಬಹುದು ಎಂದು ಮೋತಿಲಾಲ್ ಓಸ್ವಾಲ್ ತಿಳಿಸಿದೆ.

ಕಳೆದ ಕೆಲವು ವರ್ಷಗಳಲ್ಲಿ ಚಿನ್ನದ ಚಲನೆಗೆ ಹಲವಾರು ಕಾರಣಗಳಿವೆ. ಅದರಲ್ಲಿ ಕೊರೊನಾ ಪ್ರಮುಖವಾದುದು. ಆದಾಗ್ಯೂ,ಚಿನ್ನದ ದಿಕ್ಕನ್ನು ಅಳೆಯಲು ಮೂರು ಪ್ರಮುಖ ಅಂಶಗಳೆಂದರೆ ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಹಣದುಬ್ಬರದ ಕಾಳಜಿ ಮತ್ತು ಕೇಂದ್ರ ಬ್ಯಾಂಕ್‌ನ ನೀತಿ.

ಸಾಂಕ್ರಾಮಿಕ ರೋಗವು ಕಡಿಮೆಯಾಗಲು ಪ್ರಾರಂಭಿಸಿದಾಗ, ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ವಿಷಯ ಮುನ್ನೆಲೆಗೆ ಬಂದಿತು. ಇದು ಲೋಹದ ಬೆಲೆಗಳ ಮೇಲೆ ತ್ವರಿತ ಪರಿಣಾಮ ಬೀರಿದೆ ಎಂದೇ ಹೇಳಬಹುದು. ಚೀನಾದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಭಯದ ಕುರಿತಾದ ಬೆಳವಣಿಗೆಗಳು ಇದರಲ್ಲಿ ಹೆಚ್ಚಿನ ಪರಿಣಾಮ ಬೀರಿವೆ.

ಇದನ್ನೂ ಓದಿ:ಚಿನ್ನ-ಬೆಳ್ಳಿ: ರಾಜ್ಯದ ಪ್ರಮುಖ ನಗರಗಳಲ್ಲಿ ದರ ಎಷ್ಟಿದೆ?

ಮಾರುಕಟ್ಟೆ ಪಾಲುದಾರರು(ಕೊಳ್ಳುವವರು,ಮಾರುವವರು) ತಮ್ಮ ಭವಿಷ್ಯದ ನಿರೀಕ್ಷೆಗಳನ್ನು ಕಡಿಮೆ ಮಾಡಲು ಒಲವು ತೋರುತ್ತಿದ್ದಾರೆ. ಮಾರುಕಟ್ಟೆ ಭಾಗಿದಾರರು ಮೇ ನಲ್ಲಿ 50bps ರಿಯಾಯಿತಿ ನೀಡಿದ್ದಾರೆ. ಆದರೂ ರಷ್ಯಾ-ಉಕ್ರೇನ್ ಉದ್ವಿಗ್ನತೆಗೆ ಸಂಬಂಧಿಸಿದ ಬೆಳವಣಿಗೆಗಳೊಂದಿಗೆ ಚಿನ್ನದ ಗೂಳಿ ಸಾಕಷ್ಟು ಶಕ್ತಿಯನ್ನು ಪಡೆದುಕೊಳ್ಳುತ್ತಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ABOUT THE AUTHOR

...view details