ನವದೆಹಲಿ: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆಗಸ್ಟ್ 12ರಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, ಸುಮಾರು 13 ದಿನಗಳಲ್ಲಿ 10 ಗ್ರಾಮ್ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ 1,100 ರೂಪಾಯಿಗಳಷ್ಟು ಏರಿಕೆಯಾಗಿದೆ.
ಈ ವರ್ಷ ಮಾರ್ಚ್ 31ರಂದು ಚಿನ್ನದ ಬೆಲೆ ಅತ್ಯಂತ ಕಡಿಮೆಯಿತ್ತು. ಅಂದರೆ ಮಾರ್ಚ್ 31ರಂದು 41,100 ರೂಪಾಯಿ ಇದ್ದ ಚಿನ್ನದ ಬೆಲೆ ಈಗ 44,450 ರೂಪಾಯಿಯಾಗಿದೆ. ಅಂದರೆ 146 ದಿನಗಳಲ್ಲಿ 3,350 ರೂಪಾಯಿ ಹೆಚ್ಚಾಗಿದೆ.
ಆಭರಣ ತಯಾರಿಕೆಯ ಚಿನ್ನದ ಬೆಲೆ ಇಂದು 10 ಗ್ರಾಮ್ಗೆ 390 ರೂಪಾಯಿ ಏರಿಕೆಯಾಗಿದ್ದು, ಈಗ ಅದರ ಬೆಲೆ 44,450 ರೂಪಾಯಿಯಷ್ಟಿದೆ. ಮಂಗಳವಾರ 10 ಗ್ರಾಮ್ ಆಭರಣ ಚಿನ್ನದ ಬೆಲೆ 46,260 ರೂಪಾಯಿಯಷ್ಟಿತ್ತು.