ನವದೆಹಲಿ: ದೇಶದಲ್ಲಿ ಕಳೆದ ನಾಲ್ಕು ತಿಂಗಳಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ನಿರಂತರವಾಗಿ ಇಳಿಕೆ ಕಂಡು ಬರುತ್ತಿದೆ. ಆಗಸ್ಟ್‌ನಲ್ಲಿಯೂ ಸಹ ಚಿನ್ನದ ಬೆಲೆ ಅತ್ಯಂತ ಕಡಿಮೆಯಾಗಿದೆ. ಹೀಗಾಗಿ ಚಿನ್ನಾಭರಣ ಖರೀದಿ ಮಾಡಲು ಇದು ಒಳ್ಳೆಯ ಟೈಂ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಹ ಚಿನ್ನದ ಬೆಲೆ ಸ್ಥಿರವಾಗಿದೆ. ಈ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನಾಭರಣದ ಮೇಲಿನ ಹೂಡಿಕೆ ಹೆಚ್ಚು ಮಾಡಲು ಸಾಕಷ್ಟು ಅವಕಾಶ ನೀಡಲಾಗಿದೆ.
ಇಂದಿನ ಚಿನ್ನ ಮತ್ತು ಬೆಳ್ಳಿ ದರ ಭಾರತದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನದ ದರ?:
ಚೆನ್ನೈನಲ್ಲಿ 10 ಗ್ರಾಂ (22 ಕ್ಯಾರೆಟ್) ಚಿನ್ನದ ಬೆಲೆ 43,720 ರೂ. ಇದ್ದು, ಮುಂಬೈನಲ್ಲಿ 45,280 ರೂ. ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 45,500 ರೂ ಆಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 43,350 ರೂಪಾಯಿ ನಿಗದಿಯಾಗಿದ್ದು, 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರೆಟ್) ಬೆಲೆ 47,300 ರೂಪಾಯಿ ದಾಖಲಾಗಿದೆ. ಮತ್ತು ಒಂದು ಕೆ.ಜಿ ಬೆಳ್ಳಿ ದರ 62,500 ರೂ ಇದೆ.
ಹೈದರಾಬಾದ್‌ನಲ್ಲಿ (22 ಕ್ಯಾರೆಟ್)ನ 10 ಗ್ರಾಂಗೆ 43,350 ರೂ. ಮತ್ತು 24 ಕ್ಯಾರೆಟ್ಗೆ 47,300 ರೂ. ಚಿನ್ನದ ದರವಿದೆ.
ಕೇರಳದಲ್ಲಿ 10 ಗ್ರಾಂ (22 ಕ್ಯಾರೆಟ್) ಚಿನ್ನಕ್ಕೆ 43,350 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನಕ್ಕೆ 47,300 ರೂ ನಿಗದಿಯಾಗಿದೆ.
ವಿಶಾಖಪಟ್ಟಣಂನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 43.350 ರೂ. ಮತ್ತು 24 ಕ್ಯಾರೆಟ್ ಚಿನ್ನಕ್ಕೆ 47.300 ರೂ ಇದ್ದು, ಒಂದು ಕೆ.ಜಿ ಬೆಳ್ಳಿಗೆ 67,900 ರೂ. ನಿಗದಿಯಾಗಿದೆ.