ಕರ್ನಾಟಕ

karnataka

ETV Bharat / bharat

ಜುವೆಲ್ಲರಿ ಎಕ್ಸಿಬಿಷನ್​​ನಲ್ಲಿ ಚಿನ್ನದ ಮಾಸ್ಕ್​​​: ಕೇವಲ 2 ದಿನದಲ್ಲಿ 10 ಕೆಜಿ ಬಂಗಾರ ಮಾರಾಟ

ಜ್ಯೂವೆಲ್ಲರಿ ಎಕ್ಸಿಬಿಷನ್​ನಲ್ಲಿ ದಾಖಲೆಯ 55 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮಾರಾಟಗೊಂಡಿದ್ದು, ಪ್ರದರ್ಶನದ ವೇಳೆ ಬಂಗಾರದ ಮಾಸ್ಕ್​ ಎಲ್ಲರ ಗಮನ ಸೆಳೆದಿವೆ.

GOLD MASK FOR FACE
GOLD MASK FOR FACE

By

Published : Apr 26, 2022, 9:42 PM IST

ಪಾಟ್ನಾ(ಬಿಹಾರ): ಪಾಟ್ನಾದಲ್ಲಿ ನಡೆದ ಚಿನ್ನದ ಆಭರಣ ಪ್ರದರ್ಶನದಲ್ಲಿ ಬಂಗಾರದ ಮಾಸ್ಕ್​ ಎಲ್ಲರ ಗಮನ ಸೆಳೆದಿದ್ದು, ಕೇವಲ ಎರಡು ದಿನಗಳಲ್ಲಿ ದಾಖಲೆಯ 55 ಕೋಟಿ ರೂಪಾಯಿ ಮೌಲ್ಯದ 10 ಕೆಜಿ ಚಿನ್ನ ಮಾರಾಟವಾಗಿದೆ. ಪಾಟ್ನಾದ ಜ್ಞಾನ ಭವನದಲ್ಲಿ ನಡೆದ ಮೂರು ದಿನಗಳ ಕಾಲ ಜುವೆಲ್ಲರಿ ಎಕ್ಸಿಬಿಷನ್​ ಆಯೋಜನೆ ಮಾಡಲಾಗಿತ್ತು. ಕೊನೆಯ ದಿನವಾದ ಇಂದು ಹೆಚ್ಚಿನ ಜನರು ಇಲ್ಲಿಗೆ ಭೇಟಿ ನೀಡಿದ್ದು, ತಮ್ಮಿಷ್ಟದ ಆಭರಣ ಖರೀದಿ ಮಾಡಿದ್ದಾರೆ.

ಜ್ಯೂವೆಲ್ಲರಿ ಎಕ್ಸಿಬಿಷನ್​​ನಲ್ಲಿ ಚಿನ್ನದ ಮಾಸ್ಕ್

ಆಲ್ ಇಂಡಿಯಾ ಜ್ಯುವೆಲ್ಲರ್ಸ್ ಮತ್ತು ಗೋಲ್ಡ್ ಸ್ಮಿತ್ಸ್‌ ಫೆಡರೇಶನ್​ ಆಭರಣ ಪ್ರದರ್ಶನ ಆಯೋಜನೆ ಮಾಡಲಾಗಿತ್ತು. ಏಪ್ರಿಲ್ 24 ರಿಂದ 26ರವರೆಗೆ ನಡೆದ ಮೂರು ದಿನಗಳ ಆಭರಣ ಪ್ರದರ್ಶನದಲ್ಲಿ ದೇಶಾದ್ಯಂತದ ಆಭರಣ ವ್ಯಾಪಾರಿಗಳು ಆಗಮಿಸಿದರು. ಜ್ಯೂವೆಲ್ಲರಿ ಎಕ್ಸಿಬಿಷನ್​ನಲ್ಲಿ 75 ಸಾವಿರ ರೂಪಾಯಿ ಮೌಲ್ಯದ ಮಾಸ್ಕ್​ ಎಲ್ಲರ ಗಮನ ಸೆಳೆದಿದೆ.

ಕೇವಲ 2 ದಿನದಲ್ಲಿ 10 ಕೆಜಿ ಬಂಗಾರ ಮಾರಾಟ

ಇದನ್ನೂ ಓದಿ:'ನಾನು 2 ತಿಂಗಳ ಗರ್ಭಿಣಿ, ಅಪ್ಪ ನನ್ನನ್ನು ಕೊಲ್ಲಲು ಬಯಸಿದ್ದಾರೆ, ಓಡಿಹೋಗಿ ಮದುವೆಯಾಗಿರುವೆ'

ಎಐಜೆಜಿಎಫ್ ರಾಜ್ಯ ಅಧ್ಯಕ್ಷ ಅಶೋಕ್ ವರ್ಮಾ ಮಾತನಾಡಿ, ಕಳೆದ ಎರಡು ದಿನಗಳ ಆಭರಣ ಪ್ರದರ್ಶನದಲ್ಲಿ 10 ಕೆಜಿ ಚಿನ್ನ ಮಾರಾಟವಾಗಿದ್ದು, ಸುಮಾರು 55 ಕೋಟಿ ವ್ಯವಹಾರ ಆಗಿದೆ. ಕೊನೆಯ ದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಚಿನ್ನ, ಬೆಳ್ಳಿ ಖರೀದಿ ಮಾಡಿದ್ದಾರೆಂದು ತಿಳಿಸಿದ್ದಾರೆ. ಸಾರ್ವಜನಿಕರ ಬೇಡಿಕೆ ಗಮನದಲ್ಲಿಟ್ಟುಕೊಂಡು ಗರಿಷ್ಠ 4 ಗ್ರಾಂನಿಂದ 10 ಗ್ರಾಂ ವರೆಗಿನ ಆಭರಣ ಸಿದ್ಧಪಡಿಸಲಾಗಿದ್ದು, ಪ್ರಮುಖವಾಗಿ ಮದುವೆ ಸಮಾರಂಭಗಳಲ್ಲಿ ಹಾಕಿಕೊಳ್ಳುವ ನೆಕ್ಲೇಸ್​​ಗಳು ಹೆಚ್ಚಾಗಿ ಖರೀದಿಯಾಗಿವೆ ಎಂದರು.

ಪಾಟ್ನಾದಲ್ಲಿ ಜ್ಯೂವೆಲ್ಲರಿ ಎಕ್ಸಿಬಿಷನ್​

ABOUT THE AUTHOR

...view details