ಕರ್ನಾಟಕ

karnataka

ETV Bharat / bharat

ತಮಿಳುನಾಡು ಚುನಾವಣೆಯಲ್ಲಿ ಸೋತ 'ಬಂಗಾರದ ಮನುಷ್ಯ'... ಬಿದ್ದ ಮತಗಳೆಷ್ಟು? - ಪಶ್ಚಿಮ ಬಂಗಾಳ ಚಿನ್ನದ ಮನುಷ್ಯ

ಕೆಜಿ ಗಟ್ಟಲೇ ಬಂಗಾರ ಹಾಕಿಕೊಂಡು ಪ್ರಸಿದ್ಧಿಯಾಗಿದ್ದ ಹರಿ ನಾಡಾರ್ ತಮಿಳುನಾಡಿನ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಅವರು ಎದುರಾಳಿ ಅಭ್ಯರ್ಥಿ ವಿರುದ್ಧ ಎಷ್ಟು ಮತ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

Gold man hari nadar
Gold man hari nadar

By

Published : May 3, 2021, 6:14 PM IST

ತಿರುನೆಲ್ವೀಲಿ(ತಮಿಳುನಾಡು): ತಮಿಳುನಾಡು ವಿಧಾನಸಭೆಯ 234 ಕ್ಷೇತ್ರಗಳ ಫಲಿತಾಂಶ ಬಹಿರಂಗಗೊಂಡಿದ್ದು,ಡಿಎಂಕೆ ಮೈತ್ರಿ 150ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿ, ಅಧಿಕಾರ ರಚನೆ ಮಾಡುವ ಉತ್ಸಾಹದಲ್ಲಿದೆ.

ಇದರ ಮಧ್ಯೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮೈಮೇಲೆ ಹತ್ತಾರು ಕೆಜಿ ಚಿನ್ನಾಭರಣ ತೊಟ್ಟು ನಾಮಪತ್ರ ಸಲ್ಲಿಕೆ ಮಾಡಲು ಬಂದಿದ್ದ ಹರಿನಂದನ್​​ ಸೋಲು ಕಂಡಿದ್ದಾರೆ. ಡಿಎಂಕೆ ಅಭ್ಯರ್ಥಿಗೆ ಟಫ್​​​​ ಫೈಟ್​ ನೀಡಿರುವ ಇವರು ತಿರುನೆಲ್ವೀಲಿ ಜಿಲ್ಲೆಯ ಆಲಂಗುಲಂ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಚುನಾವಣೆಯಲ್ಲಿ 37 ಸಾವಿರದ 603 ಮತ ಪಡೆದು ಕೊಂಡಿದ್ದಾರೆ.

ಚುನಾವಣೆ ಸೋತ ಹರಿ ನಂದನ್​

ಇದನ್ನೂ ಓದಿ: ಕೆಜಿ ಗಟ್ಟಲೇ ಬಂಗಾರ ಹಾಕಿಕೊಂಡು ಪ್ರಸಿದ್ಧಿಯಾಗಿದ್ದ ಹರಿ ನಾಡಾರ್​ ರಾಜಕೀಯಕ್ಕೆ ಎಂಟ್ರಿ!

ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಎಐಎಡಿಎಂಕೆ ಪಕ್ಷದ ಅಭ್ಯರ್ಥಿ ಮನೋಜ್​ ಪಾಂಡಿಯನ್​ 73, 846 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಡಿಎಂಕೆ ಅಭ್ಯರ್ಥಿ ಹಾಗೂ ಹಾಲಿ ಶಾಸಕ ಪೊಗೋತಿ ಅಲ್ಲಾಡಿ ಅರುಣ್​ 69,325 ಮತ ಪಡೆದುಕೊಂಡಿದ್ದಾರೆ. 2019ರಲ್ಲಿ ತಮ್ಮದೇ ತಿರುನೆಲ್ವೇಲಿ ಜಿಲ್ಲೆಯ ನಂಗುನೇರಿ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿದರು. ಈ ವೇಳೆ 4,243 ಮತ ಪಡೆದು ಸೋಲು ಕಂಡಿದ್ದರು.

ABOUT THE AUTHOR

...view details