ನವದೆಹಲಿ:ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆಯಲ್ಲಿ ಏರಿಕೆ ಕಂಡ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿಯೂ ಹಳದಿ ಲೋಹದ ದರದಲ್ಲಿ ಏರಿಕೆ ಕಂಡಿದೆ.
ಬುಧವಾರ ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನ 154 ರೂ. ಏರಿಕೆ ಕಂಡು 46,969 ಕ್ಕೆ ತಲುಪಿದೆ. ಇನ್ನು ಬೆಳ್ಳಿ ಕೂಡ ಕೆಜಿಗೆ 352 ರೂಪಾಯಿ ಹೆಚ್ಚಳ ಕಂಡು 60,725 ರೂ.ಗೆ ಮಾರಾಟ ಕಂಡಿದೆ. ನಿನ್ನೆಯಷ್ಟೇ 10 ಗ್ರಾಂ ಚಿನ್ನ 46,815 ರೂಪಾಯಿ ಇದ್ದರೆ, ಕೆ.ಜಿ. ಬೆಳ್ಳಿ 60,373 ರೂಪಾಯಿಗೆ ಮಾರಾಟವಾಗಿತ್ತು.