ಕರ್ನಾಟಕ

karnataka

By

Published : Oct 17, 2021, 4:41 PM IST

ETV Bharat / bharat

ಏಪ್ರಿಲ್-ಸೆಪ್ಟೆಂಬರ್‌ನಲ್ಲಿ ಭಾರೀ ಏರಿಕೆ ಕಂಡ ಚಿನ್ನದ ಆಮದು

ರತ್ನಗಳು ಮತ್ತು ಆಭರಣಗಳ ರಫ್ತು ಉತ್ತೇಜನ ಮಂಡಳಿ (GJEPC) ಅಧ್ಯಕ್ಷ ಕಾಲಿನ್ ಶಾ ಈ ಸಂಬಂಧ ಪ್ರತಿಕ್ರಿಯಿಸಿದ್ದಾರೆ. ಹಬ್ಬದ ಸೀಸನ್ ಇದ್ದುದ್ದರಿಂದ ದೇಶದಲ್ಲಿ ಹೆಚ್ಚಿನ ಬೇಡಿಕೆ ಉಂಟಾಗಿತ್ತು. ಈ ಹಿನ್ನೆಲೆ ಹೆಚ್ಚಿನ ಚಿನ್ನದ ಆಮದನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ..

ಏಪ್ರಿಲ್-ಸೆಪ್ಟೆಂಬರ್‌ನಲ್ಲಿ ಭಾರೀ ಏರಿಕೆ ಕಂಡ ಚಿನ್ನದ ಆಮದು
ಏಪ್ರಿಲ್-ಸೆಪ್ಟೆಂಬರ್‌ನಲ್ಲಿ ಭಾರೀ ಏರಿಕೆ ಕಂಡ ಚಿನ್ನದ ಆಮದು

ನವದೆಹಲಿ: ದೇಶದಲ್ಲಿ ಚಿನ್ನದ ಆಮದುಗಳು ಏಪ್ರಿಲ್-ಸೆಪ್ಟೆಂಬರ್ 2021ರ ಅವಧಿಯಲ್ಲಿ ಸುಮಾರು 24 ಬಿಲಿಯನ್ ಯುಎಸ್ ಡಾಲರ್‌ಗೆ ಹೆಚ್ಚಾಗಿದೆ. ಈ ಮೂಲಕ ಚಾಲ್ತಿ ಖಾತೆ ಕೊರತೆಯ ಮೇಲೆ ಪರಿಣಾಮ ಬೀರಲಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಹಳದಿ ಲೋಹದ ಆಮದು 6.8 ಬಿಲಿಯನ್ ಯುಎಸ್ ಡಾಲರ್ ಆಗಿತ್ತು ಎಂದು ಅಂಕಿ-ಅಂಶಗಳು ತೋರಿಸಿವೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಚಿನ್ನದ ಆಮದು 5.11 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 601.4 ಮಿಲಿಯನ್ ಡಾಲರ್‌ಗೆ ಏರಿಕೆಯಾಗಿತ್ತು.

ಮತ್ತೊಂದೆಡೆ ಬೆಳ್ಳಿಯ ಆಮದುಗಳು ಈ ಆರ್ಥಿಕ ವರ್ಷದ ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಶೇ.15.5ರಷ್ಟು ಇಳಿಕೆಯಾಗಿ 619.3 ಮಿಲಿಯನ್ ಯುಎಸ್ ಡಾಲರ್‌ಗಳಿಗೆ ಇಳಿದಿದೆ. ಆದಾಗ್ಯೂ, ಸೆಪ್ಟೆಂಬರ್‌ನಲ್ಲಿ ಈ ಆಮದುಗಳು ಯುಎಸ್​ಡಿ 552.33 ದಶಲಕ್ಷಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್ 2020ರಲ್ಲಿ ಯುಎಸ್​ಡಿ 9.23 ದಶಲಕ್ಷದಷ್ಟಿತ್ತು.

ಚಿನ್ನದ ಆಮದುಗಳಲ್ಲಿನ ಗಮನಾರ್ಹ ಏರಿಕೆಯು ದೇಶದ ವ್ಯಾಪಾರ ಕೊರತೆ, ಆಮದು ಮತ್ತು ರಫ್ತುಗಳ ನಡುವಿನ ವ್ಯತ್ಯಾಸ ಹೆಚ್ಚಿಸಿದೆ. ಈ ಆರ್ಥಿಕ ವರ್ಷದ ಸೆಪ್ಟೆಂಬರ್‌ನಲ್ಲಿ 22.6 ಶತಕೋಟಿ ಡಾಲರ್‌ಗೆ ಹೋಲಿಸಿದರೆ, ಹಿಂದಿನ ವರ್ಷದ ಅವಧಿಯಲ್ಲಿ 2.96 ಬಿಲಿಯನ್ ಯುಎಸ್‌ಡಿ ಇತ್ತು.

ಏಪ್ರಿಲ್-ಸೆಪ್ಟೆಂಬರ್‌ನಲ್ಲಿ ಭಾರೀ ಏರಿಕೆ ಕಂಡ ಚಿನ್ನದ ಆಮದು

ಚಿನ್ನವನ್ನು ಅತಿ ಹೆಚ್ಚು ಆಮದು ಮಾಡಿಕೊಳ್ಳುವ ದೇಶ ಭಾರತವಾಗಿದೆ. ಇದು ಮುಖ್ಯವಾಗಿ ಆಭರಣ ಉದ್ಯಮದ ಬೇಡಿಕೆಯನ್ನು ಪೂರೈಸುತ್ತದೆ. ದೇಶವು ವಾರ್ಷಿಕವಾಗಿ 800-900 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ.

ರತ್ನಗಳು ಮತ್ತು ಆಭರಣಗಳ ರಫ್ತು ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ 19.3 ಬಿಲಿಯನ್ ಯುಎಸ್ ಡಾಲರ್‌ಗೆ ಏರಿಕೆಯಾಗಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 8.7 ಬಿಲಿಯನ್ ಯುಎಸ್ ಡಾಲರ್ ಆಗಿತ್ತು.

ರತ್ನಗಳು ಮತ್ತು ಆಭರಣಗಳ ರಫ್ತು ಉತ್ತೇಜನ ಮಂಡಳಿ (GJEPC) ಅಧ್ಯಕ್ಷ ಕಾಲಿನ್ ಶಾ ಈ ಸಂಬಂಧ ಪ್ರತಿಕ್ರಿಯಿಸಿದ್ದಾರೆ. ಹಬ್ಬದ ಸೀಸನ್ ಇದ್ದುದ್ದರಿಂದ ದೇಶದಲ್ಲಿ ಹೆಚ್ಚಿನ ಬೇಡಿಕೆ ಉಂಟಾಗಿತ್ತು. ಈ ಹಿನ್ನೆಲೆ ಹೆಚ್ಚಿನ ಚಿನ್ನದ ಆಮದನ್ನು ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಭಾರತೀಯ ರಫ್ತು ಸಂಸ್ಥೆಗಳ ಒಕ್ಕೂಟ (ಎಫ್‌ಐಇಒ) ಮಹಾನಿರ್ದೇಶಕ ಅಜಯ್ ಸಹಾಯ್ ಕೂಡ ಈ ಬಗ್ಗೆ ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ. ಬೇಡಿಕೆಯು ಪ್ರಾಥಮಿಕವಾಗಿ ಚಿನ್ನದ ಆಮದನ್ನು ಹೆಚ್ಚಿಗೆ ಮಾಡುತ್ತಿದೆ ಎಂದಿದ್ದಾರೆ.

ಕೋವಿಡ್‌ನಿಂದಾಗಿ ಮದುವೆಗಳಿಗೆ ಕಡಿಮೆ ಖರ್ಚು ಮಾಡುವುದರಿಂದ ಉಳಿತಾಯ ಹಣವು ಚಿನ್ನದ ಖರೀದಿಗೆ ಹೋಗುತ್ತಿದೆ. ಕೋವಿಡ್‌ನ ಮೂರನೇ ತರಂಗದ ಬಗ್ಗೆ ಸಂಶಯವಿರುವ ಜನರು ಕೂಡ ಚಿನ್ನದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಮತ್ತಷ್ಟು, ಷೇರು ಮಾರುಕಟ್ಟೆಯಿಂದ ಲಾಭ ಪಡೆಯುವವರು ತಮ್ಮ ಹೂಡಿಕೆಯನ್ನು ವೈವಿಧ್ಯಗೊಳಿಸುತ್ತಿದ್ದಾರೆ ಎಂದು ಸಹಾಯ್​ ತಿಳಿಸಿದ್ದಾರೆ.

ABOUT THE AUTHOR

...view details