ಕರ್ನಾಟಕ

karnataka

ETV Bharat / bharat

ಚಿನ್ನದ ಆಮದಿನಲ್ಲಿ ಶೇ.24 ರಷ್ಟು ಗಮನಾರ್ಹ ಇಳಿಕೆ - ಭಾರತ ಚಿನ್ನದ ಆಮದಿನಲ್ಲಿ ಗಮನಾರ್ಹ ಕುಸಿತ

ಕಳೆದ ವರ್ಷ ಭಾರತದ ಚಿನ್ನದ ಆಮದು ಪ್ರಮಾಣ 46.2 ಬಿಲಿಯನ್ ಡಾಲರ್ ಮೌಲ್ಯದಷ್ಟಿತ್ತು. ಆಮದು ಬೆಳವಣಿಗೆ ದರ ಆಗಸ್ಟ್ 2022 ರಿಂದ ಪ್ರಸಕ್ತ ವರ್ಷದ ಫೆಬ್ರವರಿ ತಿಂಗಳವರೆಗೆ ಋಣಾತ್ಮಕ ಬೆಳವಣಿಗೆ ದಾಖಲಿಸಿದೆ.

gold
ಚಿನ್ನ

By

Published : May 7, 2023, 1:13 PM IST

ನವದೆಹಲಿ: ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆ 2022-23ರಲ್ಲಿ ಚಾಲ್ತಿ ಖಾತೆ ಕೊರತೆ ಮೇಲೆ ಪ್ರಭಾವ ಬೀರುವ ಭಾರತದ ಚಿನ್ನದ ಆಮದು ಪ್ರಮಾಣ ಶೇ 24.15 ರಷ್ಟು ಕುಸಿದು 35 ಶತಕೋಟಿ ಡಾಲರ್‌ಗೆ ತಲುಪಿದೆ ಎಂದು ವಾಣಿಜ್ಯ ಸಚಿವಾಲಯದ ತಿಳಿಸಿದೆ. 2021-22ರಲ್ಲಿ ಹಳದಿ ಲೋಹದ ಆಮದು 46.2 ಬಿಲಿಯನ್ ಡಾಲರ್ ಮೌಲ್ಯದ್ದಾಗಿತ್ತು. ದೇಶದ ಆಮದು ಬೆಳವಣಿಗೆ ದರವು ಆಗಸ್ಟ್ 2022 ರಿಂದ ಪ್ರಸಕ್ತ ವರ್ಷದ ಫೆಬ್ರವರಿ ತಿಂಗಳವರೆಗೆ ಋಣಾತ್ಮಕ ವಲಯದಲ್ಲಿದೆ. ಇದು ಮಾರ್ಚ್ 2023 ರಲ್ಲಿ ಅಮೆರಿಕ 3.3 ಶತಕೋಟಿ ಡಾಲರ್‌ಗೆ ಏರಿದೆ. ಹಿಂದಿನ ತಿಂಗಳ 1 ಶತಕೋಟಿ ಡಾಲರ್‌ಗೆ ಹೋಲಿಸಿದರೆ, ಕಳೆದ ಹಣಕಾಸು ವರ್ಷದಲ್ಲಿ ಬೆಳ್ಳಿಯ ಆಮದು ಶೇ 6.12 ರಷ್ಟು ಏರಿಕೆಯಾಗಿ 5.29 ಶತಕೋಟಿ ಡಾಲರ್‌ಗೆ ತಲುಪಿದೆ.

ಚಿನ್ನದ ಆಮದಿನಲ್ಲಿ ಗಮನಾರ್ಹ ಕುಸಿತ ಕಂಡಿರುವ ಭಾರತ ವ್ಯಾಪಾರ ಕೊರತೆಯನ್ನು ಕಡಿಮೆ ಮಾಡಲು ಅನುಕೂಲಕರ ಆಗಿಲ್ಲ. ಇದಕ್ಕೆ ಕಾರಣ ಆಮದು ಮತ್ತು ರಫ್ತು ನಡುವಿನ ವ್ಯತ್ಯಾಸ. ಉದ್ಯಮದ ತಜ್ಞರ ಪ್ರಕಾರ, ಚಿನ್ನದ ಮೇಲಿನ ಹೆಚ್ಚಿನ ಆಮದು ಸುಂಕ ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆಗಳು ಆಮದು ಕುಸಿತಕ್ಕೆ ಕಾರಣವಾಗಿವೆ ಎಂದು ಹೇಳಿದ್ದಾರೆ.

ಭಾರತವು ಏಪ್ರಿಲ್-ಜನವರಿ 2023 ರ ಅವಧಿಯಲ್ಲಿ ಸುಮಾರು 600 ಟನ್ ಚಿನ್ನವನ್ನು ಆಮದು ಮಾಡಿಕೊಂಡಿದೆ. ಹೆಚ್ಚಿನ ಆಮದು ಸುಂಕದ ಕಾರಣದಿಂದಾಗಿ ಕಡಿಮೆಯಾಗಿದೆ. ದೇಶೀಯ ಉದ್ಯಮಕ್ಕೆ ಸಹಾಯ ಮತ್ತು ರಫ್ತುಗಳನ್ನು ಉತ್ತೇಜಿಸಲು ಸರ್ಕಾರವು ಸುಂಕದ ಭಾರ ಕಡಿಮೆ ಮಾಡಬೇಕು ಎಂದು ತಜ್ಞರು ಹೇಳಿದ್ದಾರೆ.

ಭಾರತವು ಜಗತ್ತಿನಲ್ಲಿ ಚಿನ್ನದ ಅತಿ ದೊಡ್ಡ ಆಮದುದಾರ ರಾಷ್ಟ್ರ. ಇದು ಮುಖ್ಯವಾಗಿ ಆಭರಣ ಉದ್ಯಮದ ಬೇಡಿಕೆ ಪೂರೈಸುತ್ತದೆ. ದೇಶವು ವಾರ್ಷಿಕವಾಗಿ 800-900 ಟನ್ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. 2022-23ರಲ್ಲಿ ರತ್ನಗಳು ಮತ್ತು ಆಭರಣಗಳ ರಫ್ತು ಶೇ 3 ರಷ್ಟು ಕುಸಿದು ಸುಮಾರು USD 38 ಶತಕೋಟಿಗೆ ತಲುಪಿದೆ. ಕಳೆದ ವರ್ಷ ಚಾಲ್ತಿ ಖಾತೆ ಕೊರತೆ ಅವಲೋಕಿಸಿದಾಗ ಕೇಂದ್ರವು ಚಿನ್ನದ ಆಮದು ಸುಂಕವನ್ನು ಶೇ 10.75 ರಿಂದ ಶೇ 15ಕ್ಕೆ ಹೆಚ್ಚಿಸಿತು.

ಭಾರತದಲ್ಲಿ ತಗ್ಗಿದ ಚಿನ್ನದ ಬೇಡಿಕೆ:ಸ್ಥಿರ ಹೂಡಿಕೆಗೆ ಜನರ ಮೊದಲ ಆದ್ಯತೆಯಾಗಿರುವ ಆಸ್ತಿಯೇ ಚಿನ್ನ. ಆದರೆ, ಈ ವರ್ಷ ಅಂದರೆ 2023ರ ಆರಂಭದಿಂದ ಭಾರತದಲ್ಲಿ ಚಿನ್ನದ ಬೇಡಿಕೆ ಕುಸಿತಗೊಂಡಿದೆ. ಜನವರಿಯಿಂದ ಮಾರ್ಚ್​ವರೆಗೆ ಶೇ 17ರಷ್ಟು ಚಿನ್ನ ಕುಸಿತಗೊಂಡಿದ್ದು, ಬಂಗಾರದ ಬೆಲೆ ಹೆಚ್ಚಳ ಇದಕ್ಕೆ ಕಾರಣ.

2023ರಲ್ಲಿ ಚಿನ್ನದ ಬೇಡಿಕೆ ಕುಸಿದಿರುವ ಕುರಿತು ವರ್ಲ್ಡ್​​ ಗೋಲ್ಡ್​ ಕೌನ್ಸಿಲ್​ ತಿಳಿಸಿದೆ. 2023ರ ಮೊದಲ ತ್ರೈಮಾಸಿಕ ವರದಿಯಲ್ಲಿ ಚಿನ್ನದ ಬೇಡಿಕೆ ಕುರಿತು ಇದು ವರದಿ ಮಾಡಿದೆ. 2023ರ ಮೊದಲ ತ್ರೈಮಾಸಿಕದಲ್ಲಿ ಚಿನ್ನದ ಬೇಡಿಕೆ ಮೌಲ್ಯ 56,220 ಕೋಟಿಯಾಗಿದ್ದು, ಹಿಂದಿನ ವರ್ಷದ ಅಂದರೆ 2022ರ ತ್ರೈಮಾಸಿಕಕ್ಕೆ ಹೋಲಿಕೆ ಮಾಡಿದಾಗ ಶೇ 9ರಷ್ಟು ಕಡಿಮೆಯಾಗಿದೆ. 2022ರ ಜನವರಿಯಿಂದ ಮಾರ್ಚ್​ವರೆಗೆ ಚಿನ್ನದ ಬೇಡಿಕೆ ಮೌಲ್ಯ 61,540 ಕೋಟಿ ಇತ್ತು.

ಇದನ್ನೂಓದಿ:ಅಡುಗೆ ಎಣ್ಣೆ ಬೆಲೆ ಇಳಿಕೆ: ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಕಂಪನಿಗಳಿಗೆ ಕೇಂದ್ರ ಸೂಚನೆ

ABOUT THE AUTHOR

...view details