ಕರ್ನಾಟಕ

karnataka

ಚಿನ್ನದ ಹಾಲ್​​ಮಾರ್ಕಿಂಗ್​​ಗೆ ಗಡುವು ವಿಸ್ತರಣೆ ಇಲ್ಲ.. ಶುದ್ಧ ಚಿನ್ನ ಮಾರಾಟ ಕಡ್ಡಾಯ: ಬಿಐಎಸ್​​​​

By

Published : Aug 21, 2021, 5:36 PM IST

ದೇಶದಲ್ಲಿ ಇನ್ನು ಮುಂದೆ ಬಿಐಎಸ್ ಪ್ರಾಮಾಣಿಕರಿಸಿದ ಶುದ್ಧ ಚಿನ್ನವನ್ನು ಮಾತ್ರ ಮಾರಾಟ ಮಾಡುವ ಆದೇಶ ನೀಡಲಾಗಿದ್ದು, ಇದಕ್ಕಾಗಿ ಹಾಲ್​ಮಾರ್ಕಿಂಗ್ ಪ್ರಕ್ರಿಯೆಗೆ ಅವಕಾಶ ನೀಡಲಾಗಿತ್ತು. ಈ ಕಾನೂನಿನ ವಿರುದ್ಧ ಚಿನ್ನ ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದ್ದರು. ಆದರೆ ಇದೀಗ ಈ ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಬಿಐಎಸ್ ಸಂಸ್ಥೆ ತಿಳಿಸಿದೆ.

gold-hallmarking-no-extension-of-huid-scheme-will-ensure-credibility-says-bis
ಚಿನ್ನ ಹಾಲ್​​ಮಾರ್ಕಿಂಗ್​​ಗೆ ಗಡುವು ವಿಸ್ತರಣೆಯಿಲ್ಲ

ನವದೆಹಲಿ: ಬಿಐಎಸ್​​ (ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್​) ಮಾನ್ಯತೆ ಪಡೆದಿರುವ ಚಿನ್ನ ಹಾಲ್​ಮಾರ್ಕಿಂಗ್ ಕೇಂದ್ರಗಳಲ್ಲಿ ಅಗತ್ಯ ಸಮಯಕ್ಕೆ ಪ್ರಮಾಣ ಪತ್ರ ಸಿಗುತ್ತಿಲ್ಲ ಎಂದು ಆರೋಪಿಸಿದ್ದ ಚಿನ್ನದ ವ್ಯಾಪಾರಿಗಳ ದೂರನ್ನು ಬಿಐಎಸ್​​​​​ ತಿರಸ್ಕರಿಸಿದೆ. ಕಳೆದ 50 ದಿನಗಳಲ್ಲಿ 1 ಕೋಟಿ ಚಿನ್ನಾಭರಣಗಳು ಹಾಲ್​​ಮಾರ್ಕ್ ಆಗಿದ್ದು, ವಿಳಂಬವಾಗುತ್ತಿದೆ ಎಂದು ವ್ಯಾಪಾರಸ್ಥರು ಹೇಳಿದ್ದರು.

ಅಲ್ಲದೇ ಚಿನ್ನದ ಮಳಿಗೆಯಲ್ಲಿ ಹಾಲ್​ಮಾರ್ಕ್​ ಚಿನ್ನ ಮಾತ್ರ ಮಾರಾಟ ಮಾಡುವ ಆದೇಶ ನೀಡಲಾಗಿದ್ದು, ಎಲ್ಲ ಚಿನ್ನವನ್ನು ಬಿಐಎಸ್​​​​ ಹಾಲ್​ಮಾರ್ಕ್​ ಮಾಡಿಸಲು ಗಡುವು ನೀಡಲಾಗಿದೆ. ಈ ಗಡುವನ್ನು ವಿಸ್ತರಿಸಲಾಗುವುದಿಲ್ಲ ಎಂದು ಬಿಐಎಸ್​​ನ ಮುಖ್ಯಸ್ಥ ಪ್ರಮೋದ್ ಕುಮಾರ್ ತಿವಾರಿ ಸ್ಪಷ್ಟಪಡಿಸಿದ್ದಾರೆ.

ಇತ್ತ ಹಾಲ್‌ಮಾರ್ಕಿಂಗ್ ಯುನಿಕ್ ಐಡಿ ಅಥವಾ ಹೆಚ್‌ಯುಐಡಿ ಎಂದು ಕರೆಯಲ್ಪಡುವ ವಿಶಿಷ್ಟ ಹಾಲ್‌ಮಾರ್ಕಿಂಗ್ ಐಡಿಯನ್ನು ಆಭರಣಗಳ ಮೇಲೆ ಕಡ್ಡಾಯವಾಗಿ ಹೊಂದಿರಬೇಕು ಎಂಬುದನ್ನು ವಿರೋಧಿಸಿ ಚಿನ್ನ ವ್ಯಾಪಾರಸ್ಥರು ಸೋಮವಾರ ಒಂದು ದಿನದ ಮುಷ್ಕರ ನಡೆಸಲು ಕರೆ ಕೊಟ್ಟಿದ್ದಾರೆ. ಈ ಮುಷ್ಕರಕ್ಕೆ ದೇಶದ ವಿವಿಧ ಚಿನ್ನ ಮಾರಾಟಗಾರರ ಸಂಘಗಳು ಬೆಂಬಲ ಸೂಚಿಸಿವೆ.

ಹಾಲ್​ಮಾರ್ಕ್​​ಗಾಗಿ ಬಿಐಎಸ್​ ಮಾನ್ಯತೆ ಪಡೆದಿರುವ ಕೇಂದ್ರಕ್ಕೆ ಕಳುಹಿಸಿದರೆ ಚಿನ್ನ ವಾಪಸ್​ ಕೊಡಲು 5-10 ದಿನಗಳ ಕಾಲ ಸಮಯ ಹಿಡಿಯುತ್ತಿದೆ. ಹೆಚ್​​ಯುಐಡಿಗೂ ಚಿನ್ನದ ಶುದ್ಧತೆಗೂ ಯಾವುದೇ ಸಂಬಂಧವಿಲ್ಲ ಎಂದು ಚಿನ್ನ ಮಾರಾಟಗಾರರ ವಾದವಾಗಿದೆ.

ಚಿನ್ನ ವ್ಯಾಪಾರಸ್ಥರು ಮಾತ್ರವಲ್ಲದೇ, ಹೋಲ್​ಸೆಲ್ ಮಾರಾಟಗಾರರು, ಕೊಳ್ಳುವವರ ಜೊತೆ ಸಭೆ ನಡೆಸಲಾಗಿದ್ದು, ಎಲ್ಲ ಸಮಸ್ಯೆಗಳ ಕುರಿತಂತೆ ಚರ್ಚೆ ನಡೆದಿದೆ. ಜೊತೆಗೆ ಹಾಲ್​​​​​ಮಾರ್ಕಿಂಗ್​​ ಸಾಮರ್ಥ್ಯದ ಬಗ್ಗೆಯೂ ಚರ್ಚೆಯಾಗಿದೆ ಎಂದು ಬಿಐಎಸ್​​ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದಕ್ಕೂ ಮೊದಲು ಲಾಕ್​​ಡೌನ್ ಘೋಷಣೆಯಾದ ಪರಿಣಾಮ ಹಾಲ್​​ಮಾರ್ಕ್ ಮಾಡಿಸುವ ದಿನಾಂಕ ಮುಂದೂಡಲಾಗಿತ್ತು. ಆದರೆ, ಇದೀಗ ದಿನಾಂಕ ಮುಂದೂಡಲು ಸಾಧ್ಯವಿಲ್ಲ ಎಂದು ಸಂಸ್ಥೆ ತಿಳಿಸಿದೆ. ದೇಶದಲ್ಲಿ ಜೂನ್​​ 16ರಿಂದ ಹಾಲ್​ಮಾರ್ಕ್​ ಚಿನ್ನಗಳನ್ನು ಮಾತ್ರ ಮಾರಾಟ ಮಾಡುವ ಕಾನೂನು ಜಾರಿಯಾಗಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿರುವ ಹಾಲ್​​ಮಾರ್ಕಿಂಗ್ ಇಲ್ಲದ ಚಿನ್ನಗಳಿಗೆ ಮಾರ್ಕಿಂಗ್ ಮಾಡಲು ಸೂಚಿಸಲಾಗಿತ್ತು.

ಓದಿ:Gold Price : ಇಂದಿನ ಚಿನ್ನ, ಬೆಳ್ಳಿಯ ದರ ಹೇಗಿದೆ?

ABOUT THE AUTHOR

...view details