ಕರ್ನಾಟಕ

karnataka

ETV Bharat / bharat

ಚಿನ್ನ ಖರೀದಿದಾರರಿಗೆ ಶುಭಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ - ಚಿನ್ನ ಖರೀದಿ

ದೇಶಾದ್ಯಂತ ಚಿನ್ನದ ಬೆಲೆ ಕಡಿಮೆಯಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿಯೂ 24 ಕ್ಯಾರೆಟ್ ಚಿನ್ನ ಪ್ರತೀ 10 ಗ್ರಾಂನ ಬೆಲೆ 47,210 ರೂ. ಆಗಿದೆ. ಇನ್ನು 22 ಕ್ಯಾರೆಟ್ ಬೆಲೆ ಪ್ರತಿ 10 ಗ್ರಾಂಗೆ 46,210 ರೂ. ಇದೆ.

Gold
ಚಿನ್ನ

By

Published : Aug 23, 2021, 8:54 AM IST

Updated : Aug 23, 2021, 9:03 AM IST

ನವದೆಹಲಿ:ಮಲ್ಟಿ ಕಮೊಡಿಟಿ ಎಕ್ಸ್‌ಚೇಂಜ್​ನಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 47,174 ರೂ. ಆಗಿದೆ. ಕಳೆದ ಕೆಲವು ವಾರಗಳಲ್ಲಿ ಚಿನ್ನದ ಬೆಲೆ 50,000 ರೂ. ಗಡಿ ದಾಟಿತ್ತು. 2021ರಲ್ಲಿ ಇಲ್ಲಿಯವರೆಗೆ ಒಟ್ಟಾರೆ ಚಿನ್ನದ ಬೆಲೆ 4,000 ರೂ.ಗಿಂತಲೂ ಹೆಚ್ಚು ಇಳಿಕೆ ಕಂಡಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ

ಚಿನ್ನದ ಬೆಲೆ ಇಳಿಕೆಯಿಂದಾಗಿ ಹಳದಿ ಲೋಹದ ಹೂಡಿಕೆದಾರರಿಗೆ ಉತ್ತಮ ಅವಕಾಶ ಒದಗಿ ಬಂದಂತಾಗಿದೆ. ಆದರೆ ಮುಂದಿನ ಕೆಲವು ವಾರಗಳಲ್ಲಿ ಚಿನ್ನದ ಬೆಲೆ ಮತ್ತೆ 50,000 ರೂ. ಮುಟ್ಟಬಹುದು ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ.

-ನವದೆಹಲಿಯಲ್ಲಿಯೂ 24 ಕ್ಯಾರೆಟ್ ಚಿನ್ನ ಪ್ರತೀ 10 ಗ್ರಾಂನ ಬೆಲೆ 47,210 ರೂ. ಆಗಿದೆ. ಇನ್ನು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 46,210 ರೂ. ಇದೆ.

- ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 44,140 ರೂ. ಮತ್ತು 24 ಕ್ಯಾರೆಟ್​ ಚಿನ್ನಕ್ಕೆ 48,160 ರೂ ಆಗಿದೆ. ಬೆಳ್ಳಿ ಬೆಲೆ ಪ್ರತಿ ಕೆಜಿಗೆ 62,200 ರೂ. ಆಗಿದೆ.

-ದೇಶದ ಆರ್ಥಿಕ ರಾಜಧಾನಿ ಎಂದೇ ಖ್ಯಾತಿ ಪಡೆದ ಮುಂಬೈಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 46,200 ರೂ ಮತ್ತು 24 ಗ್ರಾಂ ಚಿನ್ನಕ್ಕೆ 47,200 ರೂ ಆಗಿದೆ.

- ಕೋಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನಕ್ಕೆ 46,490 ರೂ. ಮತ್ತು 24 ಕ್ಯಾರೆಟ್​ ಚಿನ್ನಕ್ಕೆ 49,190 ರೂ. ಆಗಿದೆ.

-ಚೆನ್ನೈನಲ್ಲಿ 22 ಕ್ಯಾರೆಟ್​ ಚಿನ್ನಕ್ಕೆ 44,460 ರೂ.ಗೆ ಮತ್ತು 24 ಕ್ಯಾರೆಟ್ ಚಿನ್ನಕ್ಕೆ 48,700 ರೂ. ಆಗಿ ಮಾರಾಟವಾಗುತ್ತಿದೆ.

- ಹೈದರಾಬಾದ್​ನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 44,140 ರೂ, 24 ಕ್ಯಾರೆಟ್ ಚಿನ್ನದ ಬೆಲೆ 48,160 ರೂ. ಆಗಿದೆ.

- ರಾಜಸ್ಥಾನದ ಜೈಪುರದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 46,300 ರೂ. ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 48,690 ರೂ.ಗೆ ಮಾರಾಟವಾಗುತ್ತಿದೆ.

- ಲಖನೌನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ 46,290 ರೂ. ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 50,610 ರೂ. ಆಗಿದೆ.

Last Updated : Aug 23, 2021, 9:03 AM IST

ABOUT THE AUTHOR

...view details