ಕರ್ನಾಟಕ

karnataka

ETV Bharat / bharat

ಶ್ರೀಕೃಷ್ಣ ಜ್ಯುವೆಲರಿ ಅಂಗಡಿ-ಕಚೇರಿಗಳ ಮೇಲೆ ED ದಾಳಿ - ಜಾರಿ ನಿರ್ದೇಶನಾಲಯ

2019ರ ಅಕ್ರಮ ಚಿನ್ನ ಸಾಗಣೆ ಆರೋಪ ಪ್ರಕರಣ ಸಂಬಂಧ ಹೈದರಾಬಾದ್‌ನಾದ್ಯಂತದ ಇರುವ ಶ್ರೀಕೃಷ್ಣ ಜ್ಯುವೆಲರ್ಸ್ ಗ್ರೂಪ್​ನ ಅಂಗಡಿ ಹಾಗೂ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಶ್ರೀಕೃಷ್ಣ ಜ್ಯುವೆಲರಿ ಅಂಗಡಿ-ಕಚೇರಿಗಳ ಮೇಲೆ ED ದಾಳಿ
ಶ್ರೀಕೃಷ್ಣ ಜ್ಯುವೆಲರಿ ಅಂಗಡಿ-ಕಚೇರಿಗಳ ಮೇಲೆ ED ದಾಳಿ

By

Published : Oct 7, 2021, 2:36 PM IST

ಹೈದರಾಬಾದ್‌ (ತೆಲಂಗಾಣ):ಅಕ್ರಮ ಚಿನ್ನ ಸಾಗಣೆ ಆರೋಪ ಪ್ರಕರಣ ಸಂಬಂಧ ಇದೀಗ ಜಾರಿ ನಿರ್ದೇಶನಾಲಯ (ಇಡಿ) ಹೈದರಾಬಾದ್‌ನಾದ್ಯಂತದ ಇರುವ ಶ್ರೀಕೃಷ್ಣ ಜ್ಯುವೆಲರ್ಸ್ ಗ್ರೂಪ್​ನ ಅಂಗಡಿ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದೆ.

2019ರಲ್ಲಿ 330 ಕೋಟಿ ರೂ. ಮೌಲ್ಯದ ಸುಮಾರು 1,100 ಕೆಜಿ ಚಿನ್ನವನ್ನು ಯಾವುದೇ ದಾಖಲೆಗಳಿಲ್ಲದೆ ಸ್ಥಳೀಯ ಮಾರುಕಟ್ಟೆಗೆ ಅಕ್ರಮವಾಗಿ ಸಾಗಿಸಿದ ಆರೋಪದ ಮೇಲೆ ಹೈದರಾಬಾದ್​ನ ನಾಲ್ವರು ಆಭರಣ ವ್ಯಾಪಾರಿಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಹೈದರಾಬಾದ್ ಘಟಕವು ಬಂಧಿಸಿತ್ತು. ಈ ಪೈಕಿ ಶ್ರೀಕೃಷ್ಣ ಜ್ಯುವೆಲರಿ ಎಂಡಿ ಪ್ರದೀಪ್ ಕುಮಾರ್ ಕೂಡ ಅರೆಸ್ಟ್ ಆಗಿದ್ದರು.

ಇದನ್ನೂ ಓದಿ:ಬಿಎಸ್​ವೈ ಆಪ್ತನ ಮನೆ ಸೇರಿ ಬೆಂಗಳೂರಿನ ಹಲವೆಡೆ IT ದಾಳಿ: ಕಾಂಟ್ರಾಕ್ಟರ್ಸ್​, ಉದ್ಯಮಿಗಳಿಗೆ ಆಘಾತ

ಆಭರಣ ವಿಶೇಷ ಆರ್ಥಿಕ ವಲಯದಿಂದ (SEZ) ಚಿನ್ನದ ಆಭರಣಗಳನ್ನು ತಯಾರಿಸಲು ಮತ್ತು ಅದನ್ನು ರಫ್ತು ಮಾಡಲು ಪರವಾನಗಿ ಪಡೆದಿದ್ದ ಶ್ರೀ ಕೃಷ್ಣ ಜ್ಯುವೆಲರ್ಸ್ ಗ್ರೂಪ್, ಅಕ್ರಮವಾಗಿ ಚಿನ್ನ ಸಾಗಾಟ ಮಾಡಿರುವುದು ಬಯಲಿಗೆ ಬಂದಿತ್ತು ಎನ್ನಲಾಗ್ತಿದೆ.

ಪ್ರಕರಣ ಸಂಬಂಧ ಇಂದು ಬೇರೆ ಬೇರೆ ತಂಡಗಳಾಗಿ ಬಂದ ಇಡಿ ಅಧಿಕಾರಿಗಳು, ಏಕಕಾಲದಲ್ಲಿ ಹೈದರಾಬಾದ್​ ಬಂಜಾರಾ ಹಿಲ್ಸ್​ನಲ್ಲಿರುವ ಕೃಷ್ಣ ಜ್ಯುವೆಲರ್ಸ್ ಪ್ರಧಾನ ಕಚೇರಿ ಸೇರಿದಂತೆ ಇತರ ಅಂಗಡಿಗಳು ಮತ್ತು ಕಚೇರಿಗಳಲ್ಲಿ ಶೋಧ ನಡೆಸುತ್ತಿದ್ದಾರೆ.

ABOUT THE AUTHOR

...view details