ಲಖನೌ (ಉತ್ತರ ಪ್ರದೇಶ): ಕಸದ ಬಡ್ಡಿಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆರು ಚಿನ್ನದ ಗಟ್ಟಿಗಳು ಪತ್ತೆಯಾಗಿರುವ ಘಟನೆ ಲಖನೌದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ. ಡಸ್ಟ್ಬಿನ್ನಲ್ಲಿ ಈ ಚಿನ್ನವನ್ನು ಎಸೆದವರ ಪತ್ತೆಗಾಗಿ ಕಸ್ಟಮ್ಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಆರು ಚಿನ್ನದ ಗಟ್ಟಿಗಳನ್ನು ಕಪ್ಪು ಟೇಪ್ನಿಂದ ಸುತ್ತಿ, ಪ್ಲಾಸ್ಟಿಕ್ ಕವರ್ನಲ್ಲಿ ಬಚ್ಚಿಟ್ಟು ವಲಸೆ ವಿಭಾಗದ ಸಮೀಪದ ಡಸ್ಟ್ಬಿನ್ನಲ್ಲಿ ಹಾಕಲಾಗಿದೆ. ಇದರ ಮಾರುಕಟ್ಟೆ ಮೌಲ್ಯ ಅಂದಾಜು 36.60 ಲಕ್ಷ ರೂ. ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.