ಕರ್ನಾಟಕ

karnataka

ETV Bharat / bharat

Gold Price: ಎರಡನೇ ದಿನವೂ ಇಳಿಕೆ ಕಂಡ ಚಿನ್ನದ ಬೆಲೆ - Gold price today

ಗುರುವಾರ ಚಿನ್ನದ ಬೆಲೆಯಲ್ಲಿ ಸ್ವಲ್ಪಮಟ್ಟದ ಇಳಿಕೆಯಾಗಿದ್ದು, ಆ ಇಳಿಕೆ ಇಂದಿಗೂ ಮುಂದುವರೆದಿದೆ.

Gold and Silver rate in India
Gold Price: ಎರಡನೇ ದಿನವೂ ಇಳಿಕೆ ಕಂಡ ಚಿನ್ನದ ಬೆಲೆ

By

Published : Aug 27, 2021, 11:56 AM IST

ನವದೆಹಲಿ:ಕಳೆದ ಕೆಲವು ದಿನಗಳಿಂದ ಸ್ವಲ್ಪ ಮಟ್ಟದ ಏರಿಕೆ ಕಂಡಿದ್ದ ಚಿನ್ನದ ಬೆಲೆ ಗುರುವಾರ ಇಳಿಕೆಯಾಗಿದ್ದು, ಆ ಇಳಿಕೆ ಇಂದಿಗೂ ಮುಂದುವರೆದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆ ಕಾರಣದಿಂದ ಭಾರತದಲ್ಲಿ ಆಭರಣ ಚಿನ್ನದ ಬೆಲೆ 10 ಗ್ರಾಮ್​ಗೆ 270 ರೂಪಾಯಿ ಇಳಿಕೆಯಾಗಿದೆ.

ಚಿನ್ನ ಮತ್ತು ಬೆಳ್ಳಿಯ ಬೆಲೆ

ಗುರುವಾರ 10 ಗ್ರಾಮ್ ಆಭರಣ​​ ಚಿನ್ನದ ಬೆಲೆ 160 ರೂಪಾಯಿ ಇಳಿಕೆಯಾಗಿತ್ತು. ಈಗ 10 ಗ್ರಾಮ್​​ ಚಿನ್ನದ ಮೇಲೆ 270 ರೂಪಾಯಿ ಇಳಿಕೆ ಕಂಡಿದೆ. ಇದರಿಂದಾಗಿ 22 ಕ್ಯಾರೆಟ್​​ನ ಚಿನ್ನದ ಬೆಲೆ 10 ಗ್ರಾಮ್​ಗೆ​​ 46,350 ರೂಪಾಯಿಯಷ್ಟಾಗಿದೆ.

ಇದೇ ರೀತಿ 10 ಗ್ರಾಮ್​​ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಇಂದು 10 ಗ್ರಾಮ್ 22 ಕ್ಯಾರೆಟ್​​ ಚಿನ್ನದ ಬೆಲೆ 48,220 ರೂಪಾಯಿಯಿದೆ.

ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ(10 ಗ್ರಾಮ್​ಗೆ)

  • ಬೆಂಗಳೂರು- 44,200 ರೂಪಾಯಿ
  • ಚೆನ್ನೈ- 44,560 ರೂಪಾಯಿ
  • ನವದೆಹಲಿ- 46,350 ರೂಪಾಯಿ
  • ಕೋಲ್ಕತಾ- 46,600 ರೂಪಾಯಿ
  • ಮುಂಬೈ- 46,220 ರೂಪಾಯಿ
  • ಹೈದರಾಬಾದ್​- 44,200 ರೂಪಾಯಿ

ಬೆಳ್ಳಿಯ ಬೆಲೆ:ಭಾರತೀಯ ಮಾರುಕಟ್ಟೆಯಲ್ಲಿ ಬೆಳ್ಳಿಯ ಬೆಲೆ ಇಂದು ಇಳಿಕೆ ಕಂಡಿದೆ. ನೂರು ಗ್ರಾಮ್​ ಬೆಳ್ಳಿಗೆ 6,320 ರೂಪಾಯಿ ಇದ್ದು, ಒಂದು ಕೆಜಿ ಬೆಳ್ಳಿಗೆ 63,200 ರೂಪಾಯಿಯಷ್ಟಾಗಿದೆ.

ಇದನ್ನೂ ಓದಿ:ಆಫ್ಘನ್​ ನೆಲದಲ್ಲಿ ಅಮೆರಿಕ ಸೇನೆ ಅನುಭವಿಸಿದ ಕರಾಳ ದಿನಗಳ ಕಾಲಾನುಕ್ರಮ

ABOUT THE AUTHOR

...view details