ಭಾರತೀಯ ಚಿನಿವಾರ ಮಾರುಕಟ್ಟೆಯು ಬುಧವಾರದ ಚಿನ್ನ ಮತ್ತು ಬೆಳ್ಳಿಯ ಬೆಲೆಗಳನ್ನು ಬಿಡುಗಡೆ ಮಾಡಿದೆ. ಇಂದಿನ ದರಗಳನ್ನು ಗಮನಿಸಿದರೆ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಇಂದು ದೇಶದಲ್ಲಿ 24k ಶುದ್ಧತೆಯ ಹತ್ತು ಗ್ರಾಂ ಚಿನ್ನ 52,360 ರೂ.ಗೆ ಮಾರಾಟವಾಗುತ್ತಿದ್ದು, ಒಂದು ಕೆಜಿ ಬೆಳ್ಳಿಯ ದರ 57,800 ರೂ.ಗೆ ಮಾರಾಟವಾಗುತ್ತಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಳಿತ ಕಂಡು ಬರುತ್ತದೆ. ಹೀಗಾಗಿ ಮುಂಬೈ, ದೆಹಲಿ, ಹೈದರಾಬಾದ್ ಮತ್ತು ಕೋಲ್ಕತ್ತಾದಲ್ಲಿ ಸೇರಿದಂತೆ ಬಹುತೇಕ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 48,000 ರೂಪಾಯಿ ಮತ್ತು 24 ಕ್ಯಾರೆಟ್ 52,360 ಇದೆ. ಚೆನ್ನೈನಲ್ಲಿ 22k ಕ್ಯಾರೆಟ್ ಚಿನ್ನ 48,550 ರೂ. ಹಾಗೂ 24k ಕ್ಯಾರೆಟ್ ಚಿನ್ನ 52,960 ರೂ.ಗೆ ಮಾರಾಟವಾಗುತ್ತಿದೆ.