ಕರ್ನಾಟಕ

karnataka

ETV Bharat / bharat

ಕೇಂದ್ರ V/S ಟ್ವಿಟರ್: ನಿಯಮ ಅನುಸರಿಸಲು ಕೊನೆಯ ನೋಟಿಸ್ ನೀಡಿದ ಸರ್ಕಾರ..! - ಸೋಷಿಯಲ್ ಮೀಡಿಯಾ ನಿಯಮ

ಒಂದು ವೇಳೆ ಟ್ವಿಟರ್ ನಿಯಮ ಅನುಸರಿಸದಿದ್ದರೆ ಐಟಿ ಕಾಯ್ದೆ 2000ರ 79 ರಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದೆ. ನೋಟಿಸ್ ನಿಯಮಗಳನ್ನು ಅನುಸರಿಸಲು ಯಾವುದೇ ನಿರ್ದಿಷ್ಟ ಗಡುವನ್ನು ನೀಡಿಲ್ಲ.

ಕೇಂದ್ರ V/S ಟ್ವಿಟರ್
ಕೇಂದ್ರ V/S ಟ್ವಿಟರ್

By

Published : Jun 5, 2021, 4:45 PM IST

ನವದೆಹಲಿ: ಸೋಷಿಯಲ್ ಮೀಡಿಯಾ ಕಂಪನಿಗಳಿಗೆ ದೇಶದ ಹೊಸ ನಿಯಮಗಳನ್ನು ಅನುಸರಿಸಲು ಮುಂದಾಗಬೇಕು ಮತ್ತು ಈ ಸಂಬಂಧ ಭಾರತ ಮೂಲದ ಅಧಿಕಾರಿಗಳನ್ನು ನೇಮಕ ಮಾಡುವಂತೆ ಕೇಂದ್ರ ಸರ್ಕಾರ ಟ್ವಿಟರ್‌ಗೆ ಇಂದು ಕೊನೆಯ ನೋಟಿಸ್ ನೀಡಿದೆ.

ಈ ಹೊಸ ನಿಯಮ 2021 ರ ಮೇ 26 ರಿಂದ ಜಾರಿಗೆ ಬಂದಿದೆ. ಆದರೂ ಟ್ವಿಟರ್, ಐಟಿ ಕಾಯ್ದೆಯ ಹೊಸ ನಿಯಮಗಳನ್ನು ಪಾಲಿಸದ ಕಾರಣ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಐಟಿ ಸಚಿವಾಲಯ ಎಚ್ಚರಿಕೆ ನೀಡಿದೆ. ಒಂದು ವೇಳೆ ನಿಯಮ ಅನುಸರಿಸದಿದ್ದರೆ ಐಟಿ ಕಾಯ್ದೆ 2000ರ 79 ರಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದೆ. ನೋಟಿಸ್ ನಿಯಮಗಳನ್ನು ಅನುಸರಿಸಲು ಯಾವುದೇ ನಿರ್ದಿಷ್ಟ ಗಡುವನ್ನು ನೀಡಿಲ್ಲ.

ನಿಯಮಗಳನ್ನು ಅನುಸರಿಸಲು ಟ್ವಿಟರ್ ನಿರಾಕರಿಸಿದ್ದರಿಂದ ಮೈಕ್ರೋಬ್ಲಾಗಿಂಗ್ ಸೈಟ್ ನ ಬದ್ಧತೆ ಮತ್ತು ಅದರಲ್ಲಿ ದೇಶದ ಜನರಿಗೆ ಸುರಕ್ಷತೆಯ ಅಭಿಪ್ರಾಯವೊಂದನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನದ ಕೊರತೆ ಕಂಡುಬಂದಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ.

ಇದನ್ನೂ ಓದಿ:ವೆಂಕಯ್ಯ ನಾಯ್ಡು ಬಳಿಕ RSS ಮುಖ್ಯಸ್ಥನ ಟ್ವಿಟರ್​ ಖಾತೆಯಿಂದ ಬ್ಲೂ ಬ್ಯಾಡ್ಜ್ ಮಾಯ

ನಿನ್ನೆಯಷ್ಟೇ ಭಾರತದ ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ವೈಯಕ್ತಿಕ ಟ್ವಿಟರ್​​ನ ನೀಲಿ ಬ್ಯಾಡ್ಜ್​ ತೆಗೆದು ಹಾಕಿತ್ತು. ಅಷ್ಟೇ ಅಲ್ಲ ಆರ್​ಎಸ್​ಎಸ್​ ಮುಖ್ಯಸ್ಥರರ ಬ್ಯಾಡ್ಜ್​ ಅನ್ನು ಟ್ವಿಟರ್​ ತೆಗೆದು ಹಾಕಿತ್ತು. ಈ ಬೆನ್ನಲ್ಲೇ ಹೊಸ ಐಟಿ ನಿಯಮಗಳನ್ನ ಟ್ವಿಟರ್ ಕಟ್ಟುನಿಟ್ಟಾಗಿ ಪಾಲಿಸುವಂತೆ ಅಂತಿಮ ನೋಟಿಸ್ ಅನ್ನು ಕೇಂದ್ರ ಸರ್ಕಾರ ನೀಡಿದೆ.

ABOUT THE AUTHOR

...view details