ಕರ್ನಾಟಕ

karnataka

ಕಾಳಿ ದೇವಿ ಮೂರ್ತಿ ಕಣ್ಣಲ್ಲಿ ನಿರಂತರವಾಗಿ ಸುರಿಯುತ್ತಿರುವ ನೀರು: ಓಡೋಡಿ ಬಂದ ಭಕ್ತರು

ದಕ್ಷಿಣ ಒಡಿಶಾದ ರಾಯಗಡ ಜಿಲ್ಲೆಯ ಕೊಲ್ನಾರಾ ಬ್ಲಾಕ್‌ನ ಪೈಕಪದದಲ್ಲಿರುವ ಪ್ರಸಿದ್ಧ ಪೌರಾಣಿಕ ಶಕ್ತಿ ಪೀಠದ ದಕ್ಷಿಣ ಕಾಳಿ ದೇವಿ ಮೂರ್ತಿಯ ಕಣ್ಣಿಂದ ನೀರು ಬರುತ್ತಿದೆ.

By

Published : Mar 20, 2021, 8:52 AM IST

Published : Mar 20, 2021, 8:52 AM IST

ಕಾಳಿ ದೇವಿ ಮೂರ್ತಿ ಕಣ್ಣಲ್ಲಿ  ನೀರು
ಕಾಳಿ ದೇವಿ ಮೂರ್ತಿ ಕಣ್ಣಲ್ಲಿ ನೀರು

ರಾಯಗಡ: ಇದನ್ನು ಅಚ್ಚರಿ ಅಂತ ಕರೆಯುತ್ತಿರೋ, ಪವಾಡ ಅಂತ ಕರೆಯುತ್ತಿರೋ ಅಥವಾ ಕೆಟ್ಟ ಘಟನೆಯ ಸೂಚನೆ ಅಂತ ಕರೆಯುತ್ತಿರೋ ಗೊತ್ತಿಲ್ಲ. ಆದರೆ ಇಂಥದ್ದೊಂದು ವಿಚಿತ್ರ ಘಟನೆಗೆ ಒಡಿಶಾದ ರಾಯಗಡ ಮೂಲದ ದೇವಾಲಯ ಸಾಕ್ಷಿಯಾಗಿದೆ.

ಕಾಳಿ ದೇವಿ ಮೂರ್ತಿ ಕಣ್ಣಲ್ಲಿ ನೀರು

ರಾಯಗಡ ಮೂಲದ ಮಾ-ದಕ್ಷಿಣ ಕಾಳಿ ದೇವಿಯ ಕಣ್ಣಿನಿಂದ ಕಣ್ಣೀರು ಸುರಿಯುತ್ತಿದೆ. ಹೌದು, ದಕ್ಷಿಣ ಒಡಿಶಾದ ರಾಯಗಡ ಜಿಲ್ಲೆಯ ಕೊಲ್ನಾರಾ ಬ್ಲಾಕ್‌ನ ಪೈಕಪದದಲ್ಲಿರುವ ಪ್ರಸಿದ್ಧ ಪೌರಾಣಿಕ ಶಕ್ತಿ ಪೀಠದ ದಕ್ಷಿಣ ಕಾಳಿ ದೇವಸ್ಥಾನದಲ್ಲಿ ಇಂತಹ ದೃಶ್ಯ ಕಂಡುಬಂದಿದೆ. ಕಳೆದ ಸಂಕ್ರಾಂತಿ ಹಬ್ಬದಿಂದ ದೇವಿಯ ಮೂರ್ತಿಯ ಕಣ್ಣಿಂದ ನೀರು ಬರುತ್ತಿದೆ. ದೇವಾಲಯದ ಅರ್ಚಕರು ಎಲ್ಲಾ ರೀತಿಯ ಪೂಜೆ ಸಲ್ಲಿಸಿದ ನಂತರವೂ ದೇವತೆಯ ಕಣ್ಣಿನಿಂದ ಕಣ್ಣೀರು ಸುರಿಸುವುದು ನಿಂತಿಲ್ಲ. ದೇವತೆ ಧರಿಸಿರುವ ಉಡುಪುಗಳು ಒದ್ದೆಯಾಗುತ್ತಿದ್ದು, ಇದರಿಂದಾಗಿ ದೇವಾಲಯದ ಅರ್ಚಕರು, ವ್ಯವಸ್ಥಾಪನಾ ಸಮಿತಿಯ ಸದಸ್ಯರು ಸೇರಿದಂತೆ ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.

ಕಳೆದ ಸಂಕ್ರಾಂತಿ ದಿನದಂದು ಮುಂಜಾನೆ ದೇವಾಲಯದ ಬಾಗಿಲು ತೆರೆದ ಪೂಜಾರಿ ಸಂಪ್ರದಾಯದಂತೆ ಪಟಲೇಶ್ವರನಿಗೆ (ಶಿವ) ಮೊದಲು ಪೂಜೆ ಮಾಡಿದರು. ಅಲ್ಲಿ ಪೂಜೆ ಮುಗಿದ ನಂತರ ಪೂಜಾರಿ ಮಾ ದಕ್ಷಿಣ ಕಾಳಿಯ ದೇವಾಲಯದ ದ್ವಾರವನ್ನು ತೆರೆದು ಬೆಳಗ್ಗೆ 7:30 ಕ್ಕೆ ಅಲ್ಲಿ ಸಹ ಪೂಜೆ ಸಲ್ಲಿಸಿ, ನಂತರ ಮತ್ತೆ ಪೂಜೆ ನಡೆಸಲು ಹತ್ತಿರದ ಜಗನ್ನಾಥ ದೇವಸ್ಥಾನಕ್ಕೆ ಹೋದರು. ನಂತರ ಮತ್ತೆ ಕಾಳಿ ದೇವಾಲಯದ ಗರ್ಭಗುಡಿಗೆ ಪ್ರವೇಶಿಸಿದಾಗ ದೇವಿಯು ಧರಿಸಿದ್ದ ಉಡುಗೆ ಸಂಪೂರ್ಣವಾಗಿ ಒದ್ದೆಯಾಗಿರುವುದನ್ನು ಗಮನಿಸಿದ್ದಾರೆ.

ಈ ವಿಷಯವನ್ನು ಕೂಡಲೇ ದೇವಾಲಯದ ವ್ಯವಸ್ಥಾಪಕ ಸಮಿತಿಯ ಸದಸ್ಯರಿಗೆ ಹಾಗೂ ಗ್ರಾಮಸ್ಥರಿಗೆ ತಿಳಿಸಿದ್ದು ನಂತರ ದೇವಿಯ ಕಣ್ಣಲ್ಲಿ ನೀರು ಬರುವುದನ್ನು ಎಲ್ಲರೂ ಸಹ ಗಮನಿಸಿದ್ದಾರೆ. ಈ ಸುದ್ದಿ ಎಲ್ಲ ಕಡೆ ಹರಡಿದ್ದು, ಜನ ಮರಳೋ ಜಾತ್ರೆ ಮರಳೋ ಎಂಬಂತೆ ತಾಯಿಯನ್ನು ನೋಡಲು ಭಕ್ತರು ಮುಗಿಬಿದ್ದಿದ್ದಾರೆ. ಜೊತೆಗೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಸಹ ಈ ಹಿನ್ನೆಲೆ ವಿಶೇಷ ಪೂಜೆ ನಡೆಸಲು ಮುಂದಾಗಿದೆ.

ABOUT THE AUTHOR

...view details