ಕರ್ನಾಟಕ

karnataka

ETV Bharat / bharat

ಗೋವಿಂದ್​ ಸಾಗರದಲ್ಲಿ ನೀರು ಪಾಲಾದ ಏಳು ಯುವಕರು.. ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ! - ಬಾನೂರು ಗ್ರಾಮದಲ್ಲಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಕೋಲ್ಕಾ ಗ್ರಾಮದ ಗೋವಿಂದ್​ ಸಾಗರ್ ಸರೋವರದಲ್ಲಿ ನೀರುಪಾಲಾಗಿದ್ದ ಏಳು ಯುವಕರ ಮೃತದೇಹಗಳು ಪತ್ತೆಯಾಗಿದ್ದು, ಮೃತ ಸಂಬಂಧಿಕರ ರೋದನೆ ಮುಗಿಲು ಮುಟ್ಟಿದೆ.

Gobind Sagar Lake Accident  7 youths of banur died due to drowning in gobind sagar lake  Himachal Pradesh crime news  ಗೋವಿಂದ್​ ಸಾಗರದಲ್ಲಿ ನೀರು ಪಾಲಾದ ಏಳು ಯುವಕರು  ಬಾನೂರು ಗ್ರಾಮದಲ್ಲಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ  ಹಿಮಾಚಲ ಪ್ರದೇಶ ಅಪರಾಧ ಸುದ್ದಿ
ಗೋವಿಂದ್​ ಸಾಗರದಲ್ಲಿ ನೀರು ಪಾಲಾದ ಏಳು ಯುವಕರು

By

Published : Aug 2, 2022, 9:12 AM IST

ಮೊಹಾಲಿ/ಉನಾ:ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಕೋಲ್ಕಾ ಗ್ರಾಮದ ಗೋವಿಂದ್ ಸಾಗರ್ ಸರೋವರದಲ್ಲಿ ನೀರುಪಾಲಾಗಿದ್ದ ಪಂಜಾಬ್‌ನ ಏಳು ಯುವಕರ ಮೃತದೇಹಗಳು ಪತ್ತೆಯಾಗಿವೆ. ಬಳಿಕ ಮೃತದೇಹಗಳನ್ನು ಉನಾದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಮೃತರ ಸಂಬಂಧಿಕರೂ ರೋದನೆ ಮುಗಿಲು ಮುಟ್ಟಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು.

ಈ ಅವಘಡದ ನಂತರ ಬಾನೂರಿನಲ್ಲಿ ಶೋಕ ಮಡುಗಟ್ಟಿದೆ. ಮೃತ 7 ಯುವಕರ ಕುಟುಂಬದ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳೀಯ ಪುರಸಭಾ ಸದಸ್ಯೆ ಮಾತನಾಡಿ, ಮಾತಾ ನೈನಾ ದೇವಿಯ ದರ್ಶನಕ್ಕೆ ಬಾನೂರು ನಗರದಿಂದ ಯುವಕರು ಆಗಮಿಸಿದ್ದರು.

ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಕಾರಣ ಯುವಕರು ಮೊದಲು ಬಾಬಾ ಬಾಲಕನಾಥ ದೇವಸ್ಥಾನಕ್ಕೆ ಬಂದು ವಾಪಸ್​ ಬರುವಾಗ ನೈನಾ ದೇವಿಯ ದರ್ಶನ ಪಡೆಯಬಹುದೆಂದು ಭಾವಿಸಿದ್ದರು. ಆದರೆ ಮಾರ್ಗಮಧ್ಯೆ ಗೋವಿಂದ್ ಸಾಗರ್ ಕೆರೆಯ ಬಳಿ ಸ್ನಾನಕ್ಕೆಂದು ತೆರಳಿದ್ದಾಗ ಈ ದುರಂತ ಸಂಭವಿಸಿದೆ ಎಂದು ಹೇಳಿದರು.

ಗೋವಿಂದ್​ ಸಾಗರದಲ್ಲಿ ಸ್ನಾನಕ್ಕೆತರಳಿದ್ದಾಗ ಯುವಕನೊಬ್ಬ ಮುಳುಗಲು ಆರಂಭಿಸಿದ್ದಾನೆ. ಆತನನ್ನು ರಕ್ಷಿಸಲು 6 ಮಂದಿ ಸಾಗರಕ್ಕೆ ಇಳಿದಿದ್ದಾರೆ ಎನ್ನಲಾಗಿದೆ. ಎಲ್ಲರೂ ವಾಪಸ್ ಬಾರದೇ ನೀರುಪಾಲಾಗಿದ್ದಾರೆ. ಗೋವಿಂದ್​ ಸಾಗರ್ ಸರೋವರದಲ್ಲಿ ಮುಳುಗಿ ಸಾವನ್ನಪ್ಪಿದ ಎಲ್ಲಾ ಯುವಕರು ಪಂಜಾಬ್‌ನ ಮೊಹಾಲಿ ಜಿಲ್ಲೆಯ ಬಾನೂರ್ ಪ್ರದೇಶದ ನಿವಾಸಿಗಳು ಎಂದು ತಿಳಿದು ಬಂದಿದೆ.

ಮೃತರು ಲಾಲ್ ಚಂದ್ ಅವರ ಮಗ ರಾಮನ್, ಸುರ್ಜಿತ್ ರಾಮ್ ಅವರ ಮಗ ಪವನ್, ರಮೇಶ್ ಕುಮಾರ್ ಅವರ ಮಗ ಅರುಣ್, ಲಾಲ್ ಚಂದ್ ಅವರ ಮಗ ಲವ, ರಮೇಶ್ ಕುಮಾರ್ ಅವರ ಮಗ ಲಖ್ವೀರ್, ರಾಜು ಅವರ ಮಗ ವಿಶಾಲ್, ಅವತಾರ್ ಸಿಂಗ್ ಅವರ ಮಗ ಶಿವ ಎಂದು ಗುರುತಿಸಲಾಗಿದೆ.

ದುಃಖ ವ್ಯಕ್ತಪಡಿಸಿದ ನಾಯಕರು: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮನ್, ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್, ಕಾಂಗ್ರೆಸ್ ರಾಜಾ ವಾರಿಂಗ್ ಮತ್ತು ಕ್ಯಾಪ್ಟನ್ ಅಮರಿಂದರ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಈ ಘಟನೆ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿ ಸಂತಾಪ ಸೂಚಿಸಿದ್ದಾರೆ.

ಓದಿ:ಸಾಹಿಬ್​ ಗುರುದ್ವಾರದಲ್ಲಿ ಸಾವಿರಾರು ಭಕ್ತಾದಿಗಳಿಂದ ಗುರು ಗೋವಿಂದ್​​ ಸಿಂಗ್ ಜನ್ಮ ದಿನಾಚರಣೆ

ABOUT THE AUTHOR

...view details