ಛತರ್‌ಪುರ್(ಮಧ್ಯಪ್ರದೇಶ): ಮಧ್ಯಪ್ರದೇಶದ ಛತರ್‌ಪುರ್ ಜಿಲ್ಲೆಯಲ್ಲಿ ಮೇಕೆ ಹಾಲಿನ ಬೆಲೆ ಗಗನಕ್ಕೇರಿದೆ. 30 ರಿಂದ 40 ರೂಪಾಯಿಗೆ ಮಾರಾಟ ಆಗುತ್ತಿದ್ದ ಲೀಟರ್ ಮೇಕೆ ಹಾಲಿನ ಬೆಲೆ ಇದೀಗ 300 ರಿಂದ 400 ರೂಪಾಯಿಗೆ ಏರಿದೆ. ಇದಕ್ಕೆ ಕಾರಣ ಡೆಂಘೀ ಜ್ವರ.
ಈ ರಾಜ್ಯದಲ್ಲಿ ಲೀಟರ್ ಮೇಕೆ ಹಾಲಿಗೆ 400 ರೂಪಾಯಿ!: ಕಾರಣ ಇದೇ.. - ಡೆಂಗ್ಯೂ
ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಮೇಕೆ ಹಾಲಿಗೆ ಭಾರಿ ಬೇಡಿಕೆ ಬಂದಿದೆ. ವ್ಯಾಪಾರಿಗಳು ಲೀಟರ್ ಮೇಕೆ ಹಾಲನ್ನು 400 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ.
ಈ ರಾಜ್ಯದಲ್ಲಿ ಲೀಟರ್ ಮೇಕೆ ಹಾಲಿಗೆ 400 ರೂಪಾಯಿ!; ಕಾರಣ ಇದೇ..
ಮಧ್ಯಪ್ರದೇಶದಲ್ಲಿ ಡೆಂಘೀ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಛತರ್‌ಪುರ್ ಸಮೀಪದ ಜಿಲ್ಲೆಗಳಲ್ಲಿ ಡೆಂಘೀ ಜ್ವರ ತೀವ್ರತೆ ಹೆಚ್ಚಾಗಿದೆ. ಮೇಕೆ ಹಾಲು ಕುಡಿದರೆ ಡೆಂಘೀ ಗುಣವಾಗುತ್ತದೆ ಎಂದು ಈ ಭಾಗದ ಜನರು ನಂಬಿದ್ದಾರೆ. ಹೀಗಾಗಿ ಹಾಲಿನ ಬೇಡಿಕೆ ಹೆಚ್ಚಾಗಿದೆ. ಹಲವು ಕಡೆಗಳಲ್ಲಿ ಮೇಕೆ ಹಾಲು ಸಿಗುವುದು ಕೂಡ ಕಷ್ಟ ಎಂದು ಸ್ಥಳೀಯರು ಹೇಳುತ್ತಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ವೈದ್ಯರು, ಮೇಕೆ ಹಾಲು ಕುಡಿಯುವುದು ಡೆಂಘೀ ರೋಗಿಗಳಿಗೆ ಒಳ್ಳೆಯದು. ಆದರೆ ಇದು ಪರಿಹಾರವಲ್ಲ, ಇದು ಕೇವಲ ಪುರಾಣ ಎಂದಿದ್ದಾರೆ.