ಮಧ್ಯಪ್ರದೇಶ: ಕೆಲವೊಮ್ಮೆ ವಿಚಿತ್ರ ಘಟನೆಗಳು ನಮ್ಮನ್ನು ಚಕಿತಗೊಳಿಸುತ್ತವೆ. ಅಸಹಜ ರೀತಿಯ ದೃಶ್ಯಗಳು ನಂಬಲಸಾಧ್ಯ ಎನ್ನುವಂತೆ ಮಾಡುತ್ತವೆ. ಇದಕ್ಕೆ ಹೊಸ ನಿದರ್ಶನವೆಂಬಂತೆ, ಮಧ್ಯಪ್ರದೇಶದಲ್ಲಿ ಮೇಕೆಯೊಂದು ಹೆಚ್ಚೂ ಕಡಿಮೆ ಮನುಷ್ಯನ ಮುಖವನ್ನೇ ಹೋಲುವ ಮರಿಗೆ ಜನ್ಮ ನೀಡಿದೆ.!
ವಿದಿಶಾದ ಸಿರೊಂಜ್‌ನ ಸೆಮಲ್ಖೇಡಿ ಗ್ರಾಮದಲ್ಲಿ ಘಟನೆ ನಡೆದಿದೆ. ಮರಿಯ ಸಂಪೂರ್ಣ ರೂಪ ಮಾನವನಂತಿದೆ. ಅಷ್ಟೇ ಏಕೆ? ಧ್ವನಿ ಕೂಡ ಮನುಷ್ಯನ ಧ್ವನಿಯಂತಿದೆ!. ವಿಚಿತ್ರ ಕರುವನ್ನು ನೋಡಲು ಅಲ್ಲಿ ಜನ ಸೇರುತ್ತಿದ್ದಾರೆ.