ನವದೆಹಲಿ:ಪ್ರಾಣಿಗಳಿಗೂ ಭಾವನೆಗಳಿರುತ್ತವೆ. ತನ್ನನ್ನು ಸಾಕಿದ ಮಾಲೀಕನ ಜೊತೆ ಅವಿನಾಭಾವ ಸಂಬಂಧ ಹೊಂದಿರುತ್ತವೆ ಎಂಬುದನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಸಾಕ್ಷೀಕರಿಸುತ್ತದೆ.
ಮಾಲೀಕರೊಬ್ಬರು ಮೇಕೆಯನ್ನು ಮಾರಾಟ ಮಾಡಿದ್ದು, ಈ ವೇಳೆ ಅದು ಮನುಷ್ಯನಂತೆ ಹೆಗಲ ಮೇಲೆ ಮುಖವಿಟ್ಟು ರೋಧಿಸುತ್ತಿರುವುದು ಕಂಡುಬಂದಿದೆ. ಇದು ಸಾಕುಪ್ರಾಣಿಗಳು ತನ್ನ ಯಜಮಾನನ ಮೇಲೆ ಹೊಂದಿರುವ ಪ್ರೀತಿ, ಭಾವನೆಯನ್ನು ವ್ಯಕ್ತಪಡಿಸುತ್ತದೆ.
ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ನಿಖರತೆ ಇಲ್ಲವಾದರೂ, ಈದ್ ಹಬ್ಬದ ವೇಳೆ ಮೇಕೆಯನ್ನು ಮಾರಾಟ ಮಾಡಲಾಗಿದೆ. ಈ ಸಂದರ್ಭದಲ್ಲಿ ಅದು ಮಾಲೀಕನಿಂದ ದೂರವಾಗುತ್ತಿರುವ ಆತಂಕದಲ್ಲಿ ಅಳುತ್ತಿತ್ತು. ಮಾಲೀಕನೂ ಕಣ್ಣೀರು ಸುರಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.