ಕರ್ನಾಟಕ

karnataka

ETV Bharat / bharat

ಗೋವಾದಲ್ಲಿ ಮಹಿಳಾ ಮತದಾರರೇ ಮೇಲುಗೈ : ತಕ್ಕ ಪ್ರಾತಿನಿಧ್ಯ ಕೊಡದ ಪಕ್ಷಗಳು! - ಗೋವಾದಲ್ಲಿ ಅರ್ಹ ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ

ಗೋವಾದಲ್ಲಿ ಎನ್‌ಸಿಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿವೆ. ಎನ್‌ಸಿಪಿ 13 ಮತ್ತು ಶಿವಸೇನೆ 9 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಎನ್‌ಸಿಪಿ ಮಹಾರಾಷ್ಟ್ರದಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಸರುವಾಸಿಯಾಗಿದೆ. ಆದರೆ, ಗೋವಾದಲ್ಲಿ ಮಾತ್ರ ಮಹಿಳೆಗೆ ಪ್ರಾತಿನಿಧ್ಯ ನೀಡಿಲ್ಲ. ಶಿವಸೇನೆ ಕೂಡ ಎನ್‌ಸಿಪಿ ಮಾರ್ಗವನ್ನೇ ಅನುಸರಿಸಿದೆ..

ಗೋವಾದಲ್ಲಿ ಮಹಿಳಾ ಮತದಾರರೇ ಮೇಲುಗೈ
ಗೋವಾದಲ್ಲಿ ಮಹಿಳಾ ಮತದಾರರೇ ಮೇಲುಗೈ

By

Published : Feb 4, 2022, 8:28 PM IST

ಪಣಜಿ: ಗೋವಾದಲ್ಲಿ ಅರ್ಹ ಮಹಿಳಾ ಮತದಾರರು ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದನ್ನು ಪ್ರಮುಖವಾಗಿರಿಕೊಂಡು ಎಲ್ಲಾ ರಾಜಕೀಯ ಪಕ್ಷಗಳ ಹಿರಿಯ ನಾಯಕರು ಗೋವಾದಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ಭಾಗವಾಗಿ ರ್ಯಾಲಿಗಳನ್ನು ನಡೆಸಲು ಪ್ರಾರಂಭಿಸಿದ್ದಾರೆ. ಹಾಗೆ ಮಹಿಳಾ ಮತ ಬ್ಯಾಂಕ್ ಮೇಲೆ ಕೇಂದ್ರೀಕರಿಸಿದ್ದಾರೆ.

ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸಂಸದ ಸಂಜಯ್ ರಾವತ್, ಸಚಿವ ಆದಿತ್ಯ ಠಾಕ್ರೆ ಅವರಂತಹ ದೊಡ್ಡ ನಾಯಕರು ಸಹ ಪ್ರಚಾರದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ.

ಗೋವಾದಲ್ಲಿ ಇವರೆಲ್ಲರೂ ಮಹಿಳಾ ಸಬಲೀಕರಣದ ಬಗ್ಗೆ ಹೆಚ್ಚು ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಆದರೆ, ಗೋವಾ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರಿಗೆ ಸ್ಥಾನಮಾನ ನೀಡುವುದನ್ನು ಎಲ್ಲರೂ ಮರೆತಿದ್ದಾರೆ ಎಂದೇ ಹೇಳಬಹುದು.

ಮಹಿಳೆಯ ನೇತೃತ್ವ ವಹಿಸಿರುವ ಟಿಎಂಸಿ ಕೂಡ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ನೀಡುವುದರಲ್ಲಿ ವಿಫಲವಾಗಿದೆ. ಎಲ್ಲ ಪಕ್ಷಗಳಲ್ಲಿ ಶೇ.2ರಿಂದ 2.5ರಷ್ಟು ಮಹಿಳಾ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಿದ್ದು, ಈ ವಿಷಯ ಚರ್ಚಾರ್ಹವಾಗಿದೆ.

ಗೋವಾದಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಾಗಿದ್ದಾರೆ. ಚುನಾವಣಾ ಆಯೋಗದ ಪ್ರಕಾರ ಗೋವಾದಲ್ಲಿ 5,93,960 ಮಹಿಳಾ ಮತದಾರರು ಮತ್ತು 5,62,500 ಪುರುಷ ಮತದಾರರು ಸೇರಿದಂತೆ ಒಟ್ಟು 11,56,460 ಮತದಾರರಿದ್ದಾರೆ. ಪುರುಷರಿಗಿಂತ 31,460 ಮಹಿಳಾ ಮತದಾರರು ಹೆಚ್ಚಿದ್ದಾರೆ. ಇಷ್ಟೆಲ್ಲಾ ಬಲವಿದ್ದರೂ ಸಹ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಹೆಚ್ಚಿನ ಮನ್ನಣೆ ನೀಡಿಲ್ಲ.

ಗೆಲ್ಲುವ ಸಾಮರ್ಥ್ಯವೇ ಮಾನದಂಡ -ಅನಿಲ್ ಲಾಡ್

ಹಿರಿಯ ಪತ್ರಕರ್ತ ಅನಿಲ್ ಲಾಡ್ ಈ ಸಂಬಂಧ ಮಾತನಾಡಿ, ಚುನಾವಣೆಯಲ್ಲಿ ಗೆಲ್ಲಲು ಎಲ್ಲ ಪಕ್ಷಗಳು ಸಜ್ಜಾಗಿದ್ದು, ಗೋವಾದಲ್ಲಿ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ಅವುಗಳ ಆದ್ಯತೆಯಾಗಿದೆ. ಕೆಲವು ಪಕ್ಷಗಳು ಮಹಿಳಾ ಅಭ್ಯರ್ಥಿಗಳಿಗೆ ಪ್ರಾತಿನಿಧ್ಯವನ್ನು ನೀಡಿವೆ. ಕಾರಣ, ಕೇವಲ ಮೀಸಲಾತಿ ಅಥವಾ ಅವರ ಪತಿ ನಿರ್ದಿಷ್ಟ ಕ್ಷೇತ್ರದಲ್ಲಿ ಪ್ರಭಾವಿಯಾಗಿದ್ದರಿಂದ. ಗೋವಾ ವಿಧಾನಸಭೆಯಲ್ಲಿ ಅವರಿಗೆ ಸೂಕ್ತ ಪ್ರಾತಿನಿಧ್ಯ ನೀಡಿದ ಬಗ್ಗೆ ಯಾವ ಪಕ್ಷವೂ ಕೂಡ ತೃಪ್ತಿದಾಯಕ ಮನಸ್ಥಿತಿ ಹೊಂದಿಲ್ಲ.

ಯಾವ ಪಕ್ಷಗಳಲ್ಲಿ ಎಷ್ಟು ಪ್ರಾತಿನಿದ್ಯ?:

ಆಡಳಿತಾರೂಢ ಭಾರತೀಯ ಜನತಾ ಪಕ್ಷವು 40 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಅವರಲ್ಲಿ 3 ಮಹಿಳೆಯರು ಮಾತ್ರ ಇದ್ದಾರೆ. ಕಾಂಗ್ರೆಸ್ 37 ಸ್ಥಾನಗಳಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದು, ಅದರ ಮಿತ್ರ ಪಕ್ಷ ಗೋವಾ ಫಾರ್ವರ್ಡ್ ಪಾರ್ಟಿ 3 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಆದರೆ, ಕಾಂಗ್ರೆಸ್ ಕೇವಲ 2 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ 39 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದು, ಅದರಲ್ಲಿ 3 ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿದೆ. ಮಮತಾ ಬ್ಯಾನರ್ಜಿ ಅವರ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ತನ್ನ ಮಿತ್ರ ಪಕ್ಷವಾದ ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿಯೊಂದಿಗೆ 26 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಆದರೆ, ತೃಣಮೂಲ ಕಾಂಗ್ರೆಸ್ 4 ಮಹಿಳೆಯರಿಗೆ ಉಮೇದುವಾರಿಕೆ ನೀಡಿದೆ. ಇತರ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಇದು ಅತಿ ಹೆಚ್ಚು. ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷವು ಓರ್ವಮಹಿಳೆಯನ್ನೂ ಸಹ ಕಣಕ್ಕಿಳಿಸಿಲ್ಲ.

ಗೋವಾದಲ್ಲಿ ಎನ್‌ಸಿಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿವೆ. ಎನ್‌ಸಿಪಿ 13 ಮತ್ತು ಶಿವಸೇನೆ 9 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ. ಎನ್‌ಸಿಪಿ ಮಹಾರಾಷ್ಟ್ರದಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಸರುವಾಸಿಯಾಗಿದೆ. ಆದರೆ, ಗೋವಾದಲ್ಲಿ ಮಾತ್ರ ಮಹಿಳೆಗೆ ಪ್ರಾತಿನಿಧ್ಯ ನೀಡಿಲ್ಲ. ಶಿವಸೇನೆ ಕೂಡ ಎನ್‌ಸಿಪಿ ಮಾರ್ಗವನ್ನೇ ಅನುಸರಿಸಿದೆ.

2002ರಲ್ಲಿ ರಾಜಕೀಯ ಪಕ್ಷಗಳು 11 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಇವರಲ್ಲಿ ಒಬ್ಬ ಮಹಿಳೆ ಮಾತ್ರ ಆಯ್ಕೆಯಾಗಿದ್ದರು. 2007ರಲ್ಲಿ 14 ಹಾಗೂ 2012ರಲ್ಲಿ 10 ಮಹಿಳೆಯರಿಗೆ ಉಮೇದುವಾರಿಕೆ ನೀಡಲಾಗಿತ್ತು. ಎರಡೂ ಬಾರಿಯೂ ಓರ್ವ ಮಹಿಳೆ ಮಾತ್ರ ಆಯ್ಕೆಯಾಗಿದ್ದರು. ನಂತರ 2017ರಲ್ಲಿ 19 ಮಹಿಳೆಯರಿಗೆ ಉಮೇದುವಾರಿಕೆ ನೀಡಲಾಗಿದ್ದು, 2 ಮಹಿಳೆಯರು ಆಯ್ಕೆಯಾಗಿದ್ದರು.

ABOUT THE AUTHOR

...view details