ಪಣಜಿ, ಗೋವಾ: ವಿಧಾನಸಭಾ ಚುನಾವಣೆ ಮತ ಎಣಿಕೆ ಗೋವಾದಲ್ಲಿ ನಡೆಯುತ್ತಿದ್ದು, ಈಗಾಗಲೇ ಕೆಲವು ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಿದೆ. ಗೋವಾ ಸಿಎಂ ಪ್ರಮೋದ್ ಸಾವಂತ್ ಮತ್ತು ತಿವಿಮ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನೀಲಕಂಠ ಹಳರನಾಕರ್ ಜಯಗಳಿಸಿದ್ದಾರೆ.
ಪರ್ಯಾನ್ ಕ್ಷೇತ್ರದಿಂದ ಬಿಜೆಪಿಯ ದಿವ್ಯಾ ರಾಣೆ, ಮಡಗಾಂವ್ ಕ್ಷೇತ್ರದಿಂದ ಕಾಂಗ್ರೆಸ್ನ ದಿಗಂಬರ್ ಕಾಮತ್ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಪ್ರತಾಪ್ ಸಿಂಗ್ ರಾಣೆ ಅವರ ಅಳಿಯನಾದ ಬಿಜೆಪಿ ಅಭ್ಯರ್ಥಿ ಡಾ.ದಿವ್ಯ ರಾಣೆ ಅವರು ವಾಲ್ಪೈ ಕ್ಷೇತ್ರದಿಂದ ಸ್ಪರ್ಧಿಸಿದ್ದರು.