ಕರ್ನಾಟಕ

karnataka

ETV Bharat / bharat

ಪೋರ್ಚುಗೀಸರಿಂದ ಧ್ವಂಸಗೊಂಡ ದೇಗುಲಗಳ ಜೀರ್ಣೋದ್ಧಾರಕ್ಕೆ ಗೋವಾ ಸರ್ಕಾರ ನಿರ್ಧಾರ - temples restore

ನಾವು ಗೋವಾದ ಇತಿಹಾಸವನ್ನು ಮರೆಯಲು ಸಾಧ್ಯವಿಲ್ಲ. ಪೋರ್ಚುಗೀಸರ ಆಳ್ವಿಕೆಯಲ್ಲಿ ನಾಶವಾದ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.

Chief Minister Pramod Sawant
ಮುಖ್ಯಮಂತ್ರಿ ಪ್ರಮೋದ್ ಸಾವಂತ್

By

Published : Jul 22, 2022, 1:03 PM IST

ಪಣಜಿ(ಗೋವಾ):ಪೋರ್ಚುಗೀಸರ ಆಳ್ವಿಕೆಯಲ್ಲಿ ನಾಶವಾದ ಅಥವಾ ಹಾನಿಗೊಳಗಾದ ದೇವಾಲಯಗಳ ಜೀರ್ಣೋದ್ಧಾರ ಕಾರ್ಯವನ್ನು ಗೋವಾ ಸರ್ಕಾರ ಮಾಡಲಿದೆ ಎಂದು ಸಿಎಂ ಪ್ರಮೋದ್ ಸಾವಂತ್ ರಾಜ್ಯ ವಿಧಾನಸಭೆಗೆ ತಿಳಿಸಿದರು.

ರಾಜ್ಯ ದಾಖಲೆಗಳು ಮತ್ತು ಪುರಾತತ್ವ ಇಲಾಖೆ ದೇವಾಲಯಗಳ (ದೇವಾಲಯದ ಅವಶೇಷಗಳ) ಸಮೀಕ್ಷೆಯನ್ನು ಪ್ರಾರಂಭಿಸಿದೆ. ನಾವು ಗೋವಾದ ಇತಿಹಾಸವನ್ನು ಮರೆಯಲು ಸಾಧ್ಯವಿಲ್ಲ. ಪೋರ್ಚುಗೀಸರ ಆಳ್ವಿಕೆಯಲ್ಲಿ ನಾಶವಾದ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡುವುದು ಸರ್ಕಾರದ ಉದ್ದೇಶವಾಗಿದೆ ಎಂದು ಅವರು​​ ಹೇಳಿದರು.

ಸಮಾಜ ಕಲ್ಯಾಣ ಸಚಿವ ಸುಭಾಷ್ ಫಾಲ್ ದೇಸಾಯಿ ಮಾತನಾಡಿ, ಯಾವ ದೇವಾಲಯಗಳನ್ನು ಜೀರ್ಣೋದ್ಧಾರ ಮಾಡಬೇಕೆಂದು ಸರ್ಕಾರ ಇನ್ನೂ ನಿರ್ಧರಿಸಿಲ್ಲ. ಇಲಾಖೆಯಲ್ಲಿ ಯಾವುದೇ ದೇವಾಲಯಗಳ ಪಟ್ಟಿ ಲಭ್ಯವಿಲ್ಲವಾದರೂ, ಸಾರ್ವಜನಿಕ ವೇದಿಕೆಗಳಲ್ಲಿ ದಾಖಲೆಗಳಿವೆ ಎಂದಿದ್ದಾರೆ. ನಾಲ್ಕು ಶತಮಾನಗಳಿಗೂ ಹೆಚ್ಚು ಕಾಲ ನಡೆದ ಪೋರ್ಚುಗೀಸ್ ವಸಾಹತುಶಾಹಿ ಆಳ್ವಿಕೆಯಲ್ಲಿ ದೇವಾಲಯಗಳ ನವೀಕರಣಕ್ಕಾಗಿ ಬಜೆಟ್​​ನಲ್ಲಿ ಸರ್ಕಾರ 20 ಕೋಟಿ ರೂ. ಮೀಸಲಿಟ್ಟಿದೆ.

ಇದನ್ನೂ ಓದಿ:ತಪ್ಪು ಮಾಹಿತಿ ನೀಡುವ ಗರ್ಭಪಾತದ ವಿಡಿಯೋಗಳನ್ನು ಡಿಲೀಟ್ ಮಾಡಲಿದೆ ಯೂಟ್ಯೂಬ್

ABOUT THE AUTHOR

...view details