ಕರ್ನಾಟಕ

karnataka

ETV Bharat / bharat

ಗೋವಾದಲ್ಲಿ ಜೂನ್​ 7 ರವರೆಗೆ ಕೊರೊನಾ ಕರ್ಫ್ಯೂ ವಿಸ್ತರಣೆ

ಕೊರೊನಾ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಗೋವಾ ಸರ್ಕಾರವು ಜೂನ್ 7 ರವರೆಗೆ ಕರ್ಫ್ಯೂ ವಿಸ್ತರಿಸಿದೆ. ಗೋವಾದಲ್ಲಿ ಪ್ರಸ್ತುತ 15,326 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ಮತ್ತು ಕೋವಿಡ್​​ ಸಂಬಂಧಿತ ತೊಂದರೆಗಳಿಂದ 2,570 ಜನರು ಸಾವನ್ನಪ್ಪಿದ್ದಾರೆ.

goa
goa

By

Published : May 29, 2021, 5:26 PM IST

ಪಣಜಿ:ಕೊರೊನಾ ನಿಯಂತ್ರಿಸುವ ಸಲುವಾಗಿ ಹೇರಲಾಗಿರುವ ಕರ್ಫ್ಯೂವನ್ನು ಗೋವಾ ಸರ್ಕಾರವು ಜೂನ್ 7 ರವರೆಗೆ ವಿಸ್ತರಿಸಿದೆ ಎಂದು ಮುಖ್ಯಮಂತ್ರಿ ಕಚೇರಿ ಶನಿವಾರ ತಿಳಿಸಿದೆ.

"2021 ರ ಜೂನ್ 7 ರಂದು ಬೆಳಗ್ಗೆ 7 ಗಂಟೆಯವರೆಗೆ ಕರ್ಫ್ಯೂ ವಿಸ್ತರಿಸಲು ಗೋವಾ ಸರ್ಕಾರ ನಿರ್ಧರಿಸಿದೆ. ಅದಕ್ಕೆ ಸಂಬಂಧಿಸಿದ ಆದೇಶಗಳನ್ನು ಆಯಾ ಜಿಲ್ಲಾಧಿಕಾರಿಗಳು ಹೊರಡಿಸಬೇಕು" ಎಂದು ಗೋವಾ ಸಿಎಂ ಕಚೇರಿ ಟ್ವೀಟ್ ಮಾಡಿದೆ.

ಮೇ 17 ರಂದು ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ತೀವ್ರ ಏರಿಕೆ ಹಿನ್ನೆಲೆ ಗೋವಾ ಸಿಎಂ ಪ್ರಮೋದ್​ ಸಾವಂತ್ ಗೋವಾದಲ್ಲಿ ಮೇ 9 ರಿಂದ ಮೇ 23 ರವರೆಗೆ ರಾಜ್ಯ ಮಟ್ಟದ ಕರ್ಫ್ಯೂ ಘೋಷಿಸಿದ್ದರು. ನಂತರ ಕರ್ಫ್ಯೂ ಅನ್ನು ಮೇ 31 ಕ್ಕೆ ವಿಸ್ತರಿಸಲಾಗಿತ್ತು. ಇದೀಗ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆ ಜೂನ್​​ 7 ರವರೆಗೆ ವಿಸ್ತರಣೆ ಮಾಡಲಾಗಿದೆ.

ಕರ್ಫ್ಯೂ ಅವಧಿಯಲ್ಲಿ ಅಗತ್ಯ ವಸ್ತುಗಳು, ಕಿರಾಣಿ ಅಂಗಡಿಗಳು, ಮದ್ಯದಂಗಡಿಗಳನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ರವರೆಗೆ ತೆರೆದಿರಲು ಅವಕಾಶವಿದೆ. ಮೆಡಿಕಲ್​ ಮತ್ತು ರೆಸ್ಟೋರೆಂಟ್​​ಗಳು ಬೆಳಗ್ಗೆ 7 ರಿಂದ ಸಂಜೆ 7 ರವರೆಗೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ.

ಗೋವಾದಲ್ಲಿ ಪ್ರಸ್ತುತ 15,326 ಸಕ್ರಿಯ ಪ್ರಕರಣಗಳಿದ್ದು, ಕೋವಿಡ್ ಮತ್ತು ಕೋವಿಡ್​​ ಸಂಬಂಧಿತ ತೊಂದರೆಗಳಿಂದ 2,570 ಜನರು ಸಾವನ್ನಪ್ಪಿದ್ದಾರೆ. ಒಟ್ಟಾರೆಯಾಗಿ ಇಲ್ಲಿವರೆಗೆ ಗೋವಾದಲ್ಲಿ 1,53,456 ಜನರಿಗೆ ಕೊರೊನಾ ಪಾಸಿಟಿವ್​ ಬಂದದ್ದು ವರದಿಯಾಗಿದೆ.

ABOUT THE AUTHOR

...view details