ಕರ್ನಾಟಕ

karnataka

ETV Bharat / bharat

ಹಿರಿಯ ಕಾಂಗ್ರೆಸ್‌ ನಾಯಕನಿಗೆ 'ಜೀವಮಾನ ಸಂಪುಟ ದರ್ಜೆ​​ ಸ್ಥಾನಮಾನ' ನೀಡಿದ ಬಿಜೆಪಿ ಸರ್ಕಾರ - ಕಾಂಗ್ರೆಸ್​ ಶಾಸಕನಿಗೆ ಜೀವಮಾನ ಕ್ಯಾಬಿನೆಟ್​​ ಸ್ಥಾನಮಾನ

ಗೋವಾದಲ್ಲಿ ವಿವಿಧ ಅವಧಿಯಲ್ಲಿ ನಾಲ್ಕು ಸಲ ಮುಖ್ಯಮಂತ್ರಿಯಾಗಿ, ಶಾಸಕರಾಗಿ ಹಾಗೂ ಸ್ಪೀಕರ್​ ಆಗಿ ಸೇವೆ ಸಲ್ಲಿಕೆ ಮಾಡಿರುವ ಪ್ರತಾಪ್​​ ಸಿಂಗ್​ ರಾಣೆ ಅವರಿಗೆ ಪ್ರಮೋದ್ ಸಾವಂತ್​ ನೇತೃತ್ವದ ಸರ್ಕಾರ ಮಹತ್ವದ ಗೌರವ ಸಲ್ಲಿಕೆ ಮಾಡಿದೆ.

Goa Ex-Chief Minister Pratapsingh Rane
Goa Ex-Chief Minister Pratapsingh Rane

By

Published : Jan 7, 2022, 4:36 PM IST

ಪಣಜಿ(ಗೋವಾ):ಗೋವಾ ಕಾಂಗ್ರೆಸ್​​ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಪ್ರತಾಪ್​​ ಸಿಂಗ್​ ರಾಣೆ ಅವರಿಗೆ ಗೋವಾ ಬಿಜೆಪಿ ಸರ್ಕಾರ ಮಹತ್ವದ ಗೌರವ ಸಲ್ಲಿಕೆ ಮಾಡಿದೆ. ಅವರಿಗೆ 'ಜೀವಮಾನ ಸಂಪುಟ ದರ್ಜೆ​​ ಸ್ಥಾನಮಾನ' ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಖುದ್ದಾಗಿ ಮುಖ್ಯಮಂತ್ರಿ ಪ್ರಮೋದ್​ ಸಾವಂತ್​ ಮಾಹಿತಿ ಹಂಚಿಕೊಂಡಿದ್ದಾರೆ.

ಶಾಸಕರಾಗಿ ವಿಧಾನಸಭೆಯಲ್ಲಿ 50 ವರ್ಷಗಳ ಕಾಲ ಪೂರೈಕೆ ಮಾಡಿರುವ ಗೋವಾ ಮಾಜಿ ಮುಖ್ಯಮಂತ್ರಿ ಪ್ರತಾಪ್​ ಸಿಂಗ್​ ರಾಣೆ ಸದ್ಯ ಪೋರಿಯಮ್​ ವಿಧಾನಸಭೆ ಕ್ಷೇತ್ರದಿಂದ ಕಾಂಗ್ರೆಸ್​ ಶಾಸಕರಾಗಿ, ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಮೋದ್​ ಸಾವಂತ್​​​ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಗೋವಾ ಮಾಜಿ ಮುಖ್ಯಮಂತ್ರಿಯಾಗಿರುವ ಪ್ರತಾಪ್​​ ಸಿಂಗ್​ ರಾಣೆ ಅವರಿಗೆ ಕ್ಯಾಬಿನೆಟ್​​ ಸಚಿವ ಸ್ಥಾನಮಾನ ನೀಡಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ:ಯುಪಿಯಲ್ಲಿ PRD ಸಿಬ್ಬಂದಿಗೆ ಬರೋಬ್ಬರಿ 20 ರೂ. ಕರ್ತವ್ಯ ಭತ್ಯೆ ಹೆಚ್ಚಳ!

ಶಾಸಕರಾಗಿ, ಮಾಜಿ ಮುಖ್ಯಮಂತ್ರಿ ಹಾಗೂ ಗೋವಾ ವಿಧಾನಸಭೆ ಮಾಜಿ ಸ್ಪೀಕರ್​​ ಆಗಿ ರಾಣೆ ಸೇವೆ ಸಲ್ಲಿಸಿದ್ದು, ರಾಜಕೀಯದಲ್ಲಿ 50 ವರ್ಷಗಳ ಕಾಲ ಪೂರೈಕೆ ಮಾಡಿದ್ದಾರೆ. 87 ವರ್ಷದ ರಾಣೆ 1987ರಿಂದ 2007ರವರೆಗೆ ನಾಲ್ಕು ಅವಧಿಯಲ್ಲಿ ವಿವಿಧ ಸಂದರ್ಭಗಳಲ್ಲಿ ಗೋವಾ ಸಿಎಂ ಆಗಿದ್ದರು.

ABOUT THE AUTHOR

...view details