ಪಣಜಿ(ಗೋವಾ):ಅತಿ ಸಣ್ಣ ರಾಜ್ಯ ಗೋವಾದಲ್ಲಿ ಮತ ಎಣಿಕೆ ಭರದಿಂದ ನಡೆಯುತ್ತಿದೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರ ನೇತೃತ್ವದ ತೃಣಮೂಲ ಕಾಂಗ್ರೆಸ್ ಗೋವಾದಲ್ಲಿ ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹೌದು, ಚುನಾವಣಾ ಮತ ಎಣಿಕೆಯ ಈಗಿನ ಟ್ರೆಂಡ್ ಪ್ರಕಾರ ಕಾಂಗ್ರೆಸ್ 20 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 16 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಮೂಲಕ ಬಹುಮತ ಯಾವುದೇ ಪಕ್ಷಕ್ಕೆ ದೊರಕದಿರುವ ಸಾಧ್ಯತೆ ದಟ್ಟವಾಗಿದ್ದು, ಟಿಎಂಸಿ ಕೇವಲ 4 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೂ ಕಿಂಗ್ ಮೇಕರ್ ಆಗಬಹುದು ಎಂದು ಹೇಳಲಾಗುತ್ತಿದೆ.
ಈಗ ಸದ್ಯಕ್ಕೆ ಕಾಂಗ್ರೆಸ್ನ ಮೈಕಲ್ ಲೊಬೋ ಮತ್ತು ಬಿಜೆಪಿಯ ಬಬುಷ್ ಮೊನ್ಸೆರಟ್ಟೆ ಮುನ್ನಡೆಯಲ್ಲಿದ್ದಾರೆ. ಬಿಜೆಪಿಯ ಪ್ರಮೋದ್ ಸಾವಂತ್ ಮುನ್ನಡೆಯಲ್ಲಿದ್ದಾರೆ.