ಪಣಜಿ, ಗೋವಾ: ವಿಧಾನಸಭಾ ಚುನಾವಣೆಯ ಮತ ಎಣಿಕೆಯಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು 436 ಮತಗಳ ಹಿನ್ನಡೆಯಲ್ಲಿದ್ದರು, ಇದೀಗ ಅಲ್ಪ ಮತಗಳ ಮುನ್ನಡೆ ಸಾಧಿಸುವಲ್ಲಿ ಯಶ ಕಂಡಿದ್ದಾರೆ. ಸಂಕೇಲಿಮ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಹಿಂದಿನ ಎರಡು ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು.
Goa Result: ಹಿನ್ನಡೆಯಲ್ಲಿದ್ದ ಗೋವಾ ಸಿಎಂ ಪ್ರಮೋದ್ ಸಾವಂತ್ಗೆ 130 ಮತಗಳ ಮುನ್ನಡೆ - ಗೋವಾದಲ್ಲಿ ಚುನಾವಣಾ ಫಲಿತಾಂಶ
ಗೋವಾದಲ್ಲಿ ಸಿಎಂ ಅವರು 436 ಮತಗಳ ಹಿನ್ನಡೆಯಲ್ಲಿದ್ದು, ಈಗ 130 ಮತಗಳಿಂದ ಮತ್ತೆ ಮುನ್ನಡೆ ಗಳಿಸಿದ್ದಾರೆ. ಬಿಜೆಪಿ 20 ಮತ್ತು ಕಾಂಗ್ರೆಸ್ 12 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.
Goa Result: ಗೋವಾ ಸಿಎಂ ಪ್ರಮೋದ್ ಸಾವಂತ್ಗೆ 436 ಮತಗಳ ಹಿನ್ನಡೆ
ಈಗ ಸದ್ಯದ ಟ್ರೆಂಡ್ನಂತೆ ಗೋವಾದಲ್ಲಿ ಬಿಜೆಪಿ 20, ಕಾಂಗ್ರೆಸ್ 12, ಟಿಎಂಸಿ, 4, ಆಪ್ 1 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಇದರ ಜೊತೆಗೆ ಆಪ್ನ ಅಮಿತ್ ಪಾಲೇಕರ್, ಕಿರಣ್ ಕಾಲೇಕರ್ ಹಿನ್ನಡೆಯಲ್ಲಿದ್ದಾರೆ. ಕಾಂಗ್ರೆಸ್ನ ಮೈಖಲ್ ಲೋಬೋ, ಬಬುಷ್ ಮೊನ್ಸೆರೆಟ್ಟಿ ಮುನ್ನಡೆಯಲ್ಲಿದ್ದಾರೆ.
ಇದನ್ನೂ ಓದಿ:Punjab Result: ಒಂದು ಕಾಲದಲ್ಲಿ ಪಂಜಾಬ್ ಆಳಿದ್ದ ಅಕಾಲಿದಳಕ್ಕೆ ಕೇವಲ ಕೆಲವೇ ಕ್ಷೇತ್ರದಲ್ಲಿ ಮುನ್ನಡೆ
Last Updated : Mar 10, 2022, 10:49 AM IST