ನವದೆಹಲಿ:ಕಳೆದ ಕೆಲ ದಿನಗಳ ಹಿಂದೆ ಫೇಸ್ಬುಕ್(Facebook), ಇನ್ಸ್ಸ್ಟಾಗ್ರಾಂ(Instagram) ಹಾಗೂ ವ್ಯಾಟ್ಸ್ಆ್ಯಪ್(WhatsApp) ಸೇವೆ ಸ್ಥಗಿತಗೊಂಡು ಕೋಟ್ಯಂತರ ಜನರು ಸಮಸ್ಯೆ ಎದುರಿಸಿದ್ದರು. ಇದೀಗ ಗೂಗಲ್ ಒಡೆತನದ Gmail ಕೂಡ ಜಾಗತಿಕ ಮಟ್ಟದಲ್ಲಿ ಸ್ಥಗಿತಗೊಂಡಿದೆ.
ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ Gmail ಸೇವೆ ಸ್ಥಗಿತಗೊಂಡಿದ್ದು, ಬಳಕೆದಾರರು ಸಂದೇಶ ಕಳುಹಿಸಲು ಹಾಗೂ ಸ್ವೀಕರಿಸುವಾಗ ಸಮಸ್ಯೆ ಎದುರಿಸಿದ್ದಾರೆ. ನನಗೆ ಇ-ಮೇಲ್ ಕಳುಹಿಸಲು ಹಾಗೂ ಸ್ವೀಕಾರ ಮಾಡಲು ತೊಂದರೆಯಾಗುತ್ತಿದೆ ಎಂದು ಅನೇಕರು ಬರೆದುಕೊಂಡಿದ್ದರೆ, ಕೆಲವರಿಗೆ ಲಾಗಿನ್ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ.