ತಂದೆ-ತಾಯಿ ಇಡೀ ಜೀವನವನ್ನು ತಮ್ಮ ಮಕ್ಕಳ ಅಗತ್ಯತೆ ಮತ್ತು ಸಂತೋಷಕ್ಕಾಗಿ ಮುಡಿಪಾಗಿಡುತ್ತಾರೆ. ಪೋಷಕರೇ ಮಗುವಿನ ಭವಿತವ್ಯಕ್ಕೆ ಭದ್ರ ಅಡಿಪಾಯ ಹಾಕುತ್ತಾರೆ. ಇಂಥ ನಿಸ್ವಾರ್ಥ ಬದ್ಧತೆ ಮತ್ತು ಅಪಾರ ಪ್ರೀತಿಯನ್ನು ಗುರುತಿಸಿ ಸ್ಮರಿಸಿ ಗೌರವಿಸಲು ಜೂನ್ 1 ಅನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (ಯುಎಸ್‌ಎ) ಜಾಗತಿಕ ಪೋಷಕರ ಜಾಗತಿಕ ದಿನವಾಗಿ ಆಚರಿಸುತ್ತದೆ. ಈ ದಿನವನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2012 ರಲ್ಲಿ ನಿರ್ಣಯದೊಂದಿಗೆ ಅಂಗೀಕರಿಸಿತು. ದೈನಂದಿನ ಜಗತ್ತಿನಲ್ಲಿ ಪೋಷಕರ ಪ್ರಮುಖ ಪಾತ್ರದ ಮಹತ್ವ ತಿಳಿಸುವುದೇ ಈ ದಿನ ಉದ್ದೇಶ.
ಪೋಷಕರ ಜಾಗತಿಕ ದಿನ ಹೆಚ್ಚಿನ ಪ್ರಾಮುಖ್ಯತೆ ಹೊಂದಿದೆ. ಇದು ಪಾಲನೆ ಮತ್ತು ಪೋಷಕ-ಮಕ್ಕಳ ಬಾಂಧವ್ಯ ವರ್ಧನೆಯ ಪ್ರಮುಖ ವಿಷಯವನ್ನು ತಿಳಿಸುತ್ತದೆ. ಇದನ್ನು ಹೆಚ್ಚು ವ್ಯಾಪಕವಾಗಿ ಗುರುತಿಸಬೇಕು ಮತ್ತು ಆಚರಿಸಬೇಕಿದೆ. ಪೋಷಕರನ್ನು ಗೌರವಿಸುವುದು, ಆರೋಗ್ಯಕರ ಮತ್ತು ಜವಾಬ್ದಾರಿಯುತ ಪೋಷಕರ ಪ್ರಾಮುಖ್ಯತೆಯನ್ನು ಚರ್ಚಿಸುವ ಮೂಲಕ ಮಕ್ಕಳ ಕಡೆಗೆ ಪೋಷಕರ ಅವಿರತ ಪ್ರಯತ್ನಗಳು ಮತ್ತು ತಮ್ಮ ಚಿಕ್ಕ ಮಕ್ಕಳ ಕಡೆಗೆ ಅವರು ಮಾಡುವ ಸಮರ್ಪಣೆ, ತ್ಯಾಗವನ್ನು ಗುರುತಿಸುವುದು ಮುಂತಾದ ಹಲವು ಅಂಶಗಳಿಗೆ ಗಮನ ನೀಡುತ್ತದೆ.
ಪೋಷಕರ ಜಾಗತಿಕ ದಿನವು ತಮ್ಮ ಮಕ್ಕಳಿಗೆ ಪೋಷಕರ ಬದ್ಧತೆಯನ್ನು ಪ್ರಶಂಸಿಸಲು ಮತ್ತು ಅವರ ಪೋಷಕರೊಂದಿಗೆ ಅವರ ಸಂಬಂಧವನ್ನು ಪೋಷಿಸುವ ಗುರಿ ಹೊಂದಿದೆ. ಮಕ್ಕಳಿಗಾಗಿ ಹೆತ್ತವರ ನಿಸ್ವಾರ್ಥ ಮತ್ತು ದಣಿವರಿಯದ ಪ್ರಯತ್ನವನ್ನು ಶ್ಲಾಘಿಸುವ ದಿನ. ನಮ್ಮ ಜೀವನವನ್ನು ರೂಪಿಸಲು ಅವರು ಮಾಡುವ ತ್ಯಾಗ ಮತ್ತು ಪ್ರಪಂಚದ ಕಠೋರ ವಾಸ್ತವಗಳಿಂದ ನಮ್ಮನ್ನು ರಕ್ಷಿಸಲು ಅವರು ಧೈರ್ಯದಿಂದ ಎದುರಿಸುವ ಸಮಸ್ಯೆಗಳನ್ನು ಗುರುತಿಸಲು ಮತ್ತು ಪ್ರಶಂಸಿಸಲು ಇದೊಂದು ಸುದಿನ. ಚಿಕ್ಕ, ನಿಷ್ಕಪಟ ಮಕ್ಕಳಂತೆ, ನಮ್ಮ ಬಾಲ್ಯವನ್ನು ಸಾಧ್ಯವಾದಷ್ಟು ಸಂತೋಷಪಡಿಸಲು ಪೋಷಕರು ಪ್ರತಿದಿನ ಅನುಭವಿಸುವ ಕಷ್ಟಗಳನ್ನು ಮತ್ತು ಅವರು ಸಾಧ್ಯವಾದಷ್ಟು ಕಾಲ ನಮ್ಮನ್ನು ರಕ್ಷಿಸಲು ಅವರ ಹೋರಾಟವನ್ನು ಸಾಮಾನ್ಯವಾಗಿ ಮರೆತುಬಿಡುತ್ತೇವೆ.