ಹೈದರಾಬಾದ್ :ಕೊರೊನಾ ವೈರಸ್ ತನ್ನ ಓಟವನ್ನು ಮುಂದುವರೆಸಿದೆ. ಈ ಸಾಂಕ್ರಾಮಿಕವು ಪ್ರಪಂಚದಾದ್ಯಂತ 7,32,12,302ಕ್ಕೂ ಹೆಚ್ಚು ಜನರಿಗೆ ತಗುಲಿದೆ. 16,28,442ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈವರೆಗೆ 5,13,53,862ಕ್ಕೂ ಹೆಚ್ಚು ಜನ ಚೇತರಿಸಿಕೊಂಡಿದ್ದಾರೆ.
1,69,42,980 ಕ್ಕಿಂತ ಹೆಚ್ಚು ಪ್ರಕರಣ ಮತ್ತು 3,08,091 ಕ್ಕಿಂತ ಹೆಚ್ಚು ಸಾವುನೋವುಗಳೊಂದಿಗೆ ಯುಎಸ್ ಕೋವಿಡ್ಗೆ ಹೆಚ್ಚು ನಲುಗಿದ ರಾಷ್ಟ್ರವಾಗಿದೆ. ಯುಎಸ್ನ ಫೆಡರಲ್ ಆರೋಗ್ಯ ಅಧಿಕಾರಿಗಳು ರಾಷ್ಟ್ರದ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನ ಹೆಚ್ಚಿಸಲು ಹಾಗೂ 2ನೇ ಹಂತದ ಕೋವಿಡ್ ವ್ಯಾಕ್ಸಿನ್ ಪರಿಶೀಲಿಸುತ್ತಿರುವುದರಿಂದ ಯುಎಸ್ನ ನೂರಾರು ಆಸ್ಪತ್ರೆಗಳು ಇಂದು ತಮ್ಮ ಸಿಬ್ಬಂದಿಗೆ ಲಸಿಕೆ ನೀಡಲು ಪ್ರಾರಂಭಿಸಿವೆ.