ಹೈದರಾಬಾದ್ : ಜಾಗತಿಕ ಕೊರೊನಾ ಸೋಂಕಿತರ ಸಂಖ್ಯೆ 7,90,86,170 ಆಗಿದ್ದು, ಇದುವರೆಗೆ 17,38,168 ಕ್ಕೂ ಹೆಚ್ಚು ಜನರು ಸೋಂಕಿಗೆ ಬಲಿಯಾಗಿದ್ದಾರೆ. ಇದುವರೆಗೆ ಒಟ್ಟು 5,56,74,767 ಕ್ಕೂ ಹೆಚ್ಚು ಜನರು ಚೇತರಿಸಿಕೊಂಡಿದ್ದಾರೆ.
ಅಮೆರಿಕದಲ್ಲಿ ಕೋವಿಡ್ ಹೆಚ್ಚಿನ ಪರಿಣಾಮ ಬೀರಿದ್ದು, ಇದುವರೆಗೆ 1,89,17,152 ಕ್ಕಿಂತ ಹೆಚ್ಚು ಪ್ರಕರಣಗಳು ಮತ್ತು 3,34,218 ಕ್ಕಿಂತ ಹೆಚ್ಚು ಸಾವು ನೋವು ವರದಿಯಾಗಿದೆ.
ಜಾಗತಿಕ ಕೋವಿಡ್ ಸೋಂಕಿತ ಸಂಖ್ಯೆ ಓದಿ : ಕೋವಿಡ್ ಪೀಡಿತ ಉದ್ಯೋಗಿಯ ನಿರ್ಲಕ್ಷ್ಯಕ್ಕೆ 7 ಅಮಾಯಕರು ಬಲಿ, 300ಕ್ಕೂ ಹೆಚ್ಚು ಮಂದಿ ಕ್ವಾರಂಟೈನ್!
ಭಾರತದಲ್ಲಿ ಬುಧವಾರದಿಂದ ಗುರುವಾರದೊಳಗೆ 24 ಗಂಟೆಯಲ್ಲಿ 24,712 ಹೊಸ ಕೋವಿಡ್ ಕೇಸ್ಗಳು ಪತ್ತೆಯಾಗಿವೆ. 312 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 1,01,23,778 ಹಾಗೂ ಮೃತರ ಸಂಖ್ಯೆ 1,46,756ಕ್ಕೆ ಏರಿಕೆಯಾಗಿದೆ. ಮಂಗಳವಾರಕ್ಕಿಂತ ಶೇ. 3 ರಷ್ಟು ಪ್ರಕರಣಗಳು ಹೆಚ್ಚಳವಾಗಿವೆ.
ಜಗತ್ತಿನಾದ್ಯಂತ ಕೋವಿಡ್ ಹೊಸ ರೂಪ ತಾಳಿರುವ ಆತಂಕ ಆವರಿಸಿದೆ. ಬ್ರಿಟನ್ನಲ್ಲಿ ಹೊಸ ಕೋವಿಡ್ ತಳಿಯು ಅಟ್ಟಹಾಸ ಮೆರೆಯುತ್ತಿದೆ. ಹೆಮ್ಮಾರಿಯ ಹೊಸ ಸ್ವರೂಪವು ಪ್ರವೇಶಿಸದಂತೆ ತಡೆಯಲು ವಿವಿಧ ರಾಷ್ಟ್ರಗಳು ಕಠಿಣ ಮುನ್ನೆಚ್ಚರಿಕ ಕ್ರಮಗಳನ್ನು ಕೈಗೊಂಡಿವೆ.