ಹೈದರಾಬಾದ್ :ಕೊರೊನಾ ವೈರಸ್ನ(Corona virus) ಮೊದಲನೇ ಹಾಗೂ ಎರಡನೇ ಅಲೆ ಹಾವಳಿಗೆ ಈಗಾಗಲೇ ಪ್ರಪಂಚ ತತ್ತರಿಸಿದೆ. ಇದರ ಬೆನ್ನಲ್ಲೇ ಮೂರನೇ ಅಲೆ(covid 3rd wave)ಯ ಆತಂಕವೂ ಶುರುವಾಗಿದೆ.
ಪ್ರಪಂಚದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮತ್ತೊಮ್ಮೆ ಶುರುವಾಗಿದೆ. ಡೆಡ್ಲಿ ವೈರಸ್ಗೆ ಜರ್ಮನ್ ಸೇರಿದಂತೆ ಅನೇಕ ಯುರೋಪ್ ರಾಷ್ಟ್ರಗಳು ತತ್ತರಿಸಿವೆ.
ಕಳೆದ ಒಂದೇ ವಾರದಲ್ಲಿ ದಾಖಲೆಯ 30 ಲಕ್ಷ ಜನರಲ್ಲಿ ಹೊಸದಾಗಿ ಕೋವಿಡ್ ಸೋಂಕು ಕಾಣಿಸಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(World Health organization) ಮಾಹಿತಿ ನೀಡಿದೆ. ನಿನ್ನೆ ಒಂದೇ ದಿನ ಜರ್ಮನಿಯಲ್ಲಿ 50 ಸಾವಿರ ಜನರಲ್ಲಿ ಕೊರೊನಾ ಕಾಣಿಸಿದ್ದು, ಇನ್ನಿಲ್ಲದ ಆತಂಕ ಮೂಡಿದೆ.
ಇದನ್ನೂ ಓದಿರಿ:ಜರ್ಮನಿಯಲ್ಲಿ ಒಂದೇ ದಿನ 50 ಸಾವಿರ ಕೋವಿಡ್ ಕೇಸ್; ಚೀನಾದಲ್ಲಿ ಮಾಲ್ಗಳು ಬಂದ್
ಇದರ ಜೊತೆಗೆ ಎರಡು ಡೋಸ್ ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡವರಲ್ಲೂ ಕೊರೊನಾ ಸೋಂಕು ಕಾಣಿಸುತ್ತಿರುವುದು ಇನ್ನಿಲ್ಲದ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.
ಪ್ರಮುಖವಾಗಿ ನಾರ್ವೆ,ಚೀನಾ, ಜರ್ಮನ್, ಡೆನ್ಮಾರ್ಕ್, ಇಂಗ್ಲೆಂಡ್, ಆಸ್ಟ್ರೇಲಿಯಾ ಹಾಗೂ ಡಚ್ ಸೇರಿದಂತೆ ಪ್ರಮುಖ ದೇಶಗಳಲ್ಲಿ ಕೊರೊನಾ ಹಾವಳಿ ಹೆಚ್ಚಾಗಿರುವ ಕಾರಣ ಕೆಲ ಪ್ರದೇಶಗಳಲ್ಲಿ ಲಾಕ್ಡೌನ್ ಘೋಷಣೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಕೆಲವು ಕಡೆ ಸಭೆ- ಸಮಾರಂಭ ರದ್ಧುಗೊಳಿಸಲಾಗುತ್ತಿದೆ.
ವಿಶೇಷವೆಂದರೆ ಜರ್ಮನಿಯಲ್ಲಿ ಶೇ.67ರಷ್ಟು ಜನರು ಕೋವಿಡ್ ವ್ಯಾಕ್ಸಿನ್ ಪಡೆದುಕೊಂಡಿದ್ದರೂ ಅವರಲ್ಲಿ ಕೊರೊನಾ ಸೋಂಕು ಕಾಣಿಸಿದೆ. ಇಂಗ್ಲೆಂಡ್ನಲ್ಲೂ 35 ಸಾವಿರ ಕೊರೊನಾ ಪ್ರಕರಣ ಕಾಣಿಸಿರುವುದು ಮೂರನೇ ಅಲೆ(COVID-19 third wave)ಯ ಆತಂಕ ಮೂಡಿಸಿದೆ.