ಕರ್ನಾಟಕ

karnataka

ETV Bharat / bharat

ಹೊಟ್ಟೆಯೊಳಗೆ ಇದ್ದ ಗ್ಲಾಸ್ ಹೊರತೆಗೆದ ವೈದ್ಯರು: ಅಷ್ಟಕ್ಕೂ ಅದು ದೇಹ ಸೇರಿದ್ದೇಗೆ!? - piqued the curiosity of medical experts and laypeople alike

ನಾವು ವಿಚಾರಿಸಿದ ಮಾಹಿತಿ ಪ್ರಕಾರ, ರೋಗಿಯು ಚಹಾ ಕುಡಿಯುವಾಗ ಟಂಬ್ಲರ್ ಅನ್ನು ನುಂಗಿದ್ದಾನೆ ಎಂದು ಹೇಳಿದ್ದಾರೆ. ಆದರೆ, ಅದನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಆಗುವುದಿಲ್ಲ. ಯಾಕೆಂದ್ರೆ ಅದನ್ನು ನುಂಗಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಹೊಟ್ಟೆಯೊಳಗೆ ಸೇರಿಕೊಂಡ ಗ್ಲಾಸ್ ಲೋಟವನ್ನು ಹೊರತೆಗೆದ ವೈದ್ಯರು
ಹೊಟ್ಟೆಯೊಳಗೆ ಸೇರಿಕೊಂಡ ಗ್ಲಾಸ್ ಲೋಟವನ್ನು ಹೊರತೆಗೆದ ವೈದ್ಯರು

By

Published : Feb 20, 2022, 9:51 PM IST

ಮುಜಾಫರ್‌ಪುರ(ಬಿಹಾರ): ತೀವ್ರ ಮಲಬದ್ಧತೆ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದ 55 ವರ್ಷದ ವ್ಯಕ್ತಿಯೊಬ್ಬರಿಗೆ ಇಲ್ಲಿನ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ ಅವರ ಕರುಳಿನಿಂದ ಗಾಜಿನ ಟಂಬ್ಲರ್ ಅನ್ನು ಹೊರತೆಗೆದಿದ್ದಾರೆ. ಪಟ್ಟಣದ ಮಾದಿಪುರ ಪ್ರದೇಶದಲ್ಲಿನ ಈ ಆಸ್ಪತ್ರೆಯಲ್ಲಿ ಈ ವಿಭಿನ್ನ ಘಟನೆ ಬೆಳಕಿಗೆ ಬಂದಿದೆ.

ಶಸ್ತ್ರಚಿಕಿತ್ಸಕರ ತಂಡದ ಡಾ. ಮಖ್ದುಲುಲ್ ಹಕ್ ಅವರ ಪ್ರಕಾರ, ರೋಗಿಯು ಪಕ್ಕದ ವೈಶಾಲಿ ಜಿಲ್ಲೆಯ ಮಹುವಾದಿಂದ ಬಂದವರು ಮತ್ತು ಅವರ ಅಲ್ಟ್ರಾಸೌಂಡ್ ಮತ್ತು ಎಕ್ಸ್-ರೇ ವರದಿಗಳ ಪ್ರಕಾರ ಅವರ ಕರುಳಿನಲ್ಲಿ ಗಂಭೀರವಾಗಿ ದೋಷಪೂರಿತ ವಸ್ತು ಇದೆ ಎಂದು ತೋರಿಸಿತು. ಗಾಜಿನ ಟಂಬ್ಲರ್ ಒಳಗೆ ಹೇಗೆ ಸೇರಿಕೊಂಡಿತು ಎಂಬುದು ಪ್ರಸ್ತುತ ನಿಗೂಢವಾಗಿದೆ ಎಂದು ಮಾಹಿತಿ ನೀಡಿದರು.

ನಾವು ವಿಚಾರಿಸಿದ ಮಾಹಿತಿ ಪ್ರಕಾರ, ರೋಗಿಯು ಚಹಾ ಕುಡಿಯುವಾಗ ಟಂಬ್ಲರ್ ಅನ್ನು ನುಂಗಿದ್ದಾನೆ ಎಂದು ಹೇಳಿದ್ದಾರೆ. ಆದರೆ, ಅದನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ಆಗುವುದಿಲ್ಲ. ಯಾಕೆಂದ್ರೆ ಅದನ್ನು ನುಂಗಲು ಸಾಧ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಅಭಿಮತ- ಭಾರತದಲ್ಲಿ ಚೈನೀಸ್ ಆ್ಯಪ್‌ಗಳಿಗೆ ನಿಷೇಧ.. ಡ್ರ್ಯಾಗನ್‌ಗೆ ನಡುಕ?

ಆರಂಭದಲ್ಲಿ ಎಂಡೋಸ್ಕೋಪಿಕ್ ವಿಧಾನದ ಮೂಲಕ ಗುದನಾಳದಿಂದ ಗಾಜನ್ನು ಹೊರತೆಗೆಯಲು ಪ್ರಯತ್ನಿಸಲಾಯಿತು. ಆದರೆ ಅದು ಕೆಲಸ ಮಾಡಲಿಲ್ಲ. ಆದ್ದರಿಂದ ನಾವು ಅವನ ಹೊಟ್ಟೆಯನ್ನು ಕುಯ್ದು ಅವನ ಕರುಳಿನ ಭಾಗವನ್ನು ಛೇದನ ಮಾಡಿದ ನಂತರ ಟಂಬ್ಲರ್​​ಅನ್ನು ಹೊರತೆಗೆಯಬೇಕಾಯಿತು. ರೋಗಿಯು ಸ್ಥಿರವಾಗಿದ್ದಾನೆ. ಶಸ್ತ್ರಚಿಕಿತ್ಸೆಯ ನಂತರ ಕೊಲೊನ್ ಅನ್ನು ಹೊಲಿಯಲಾಗುತ್ತದೆ ಮತ್ತು ಫಿಸ್ತುಲ್ಲಾ ತೆರೆಯುವಿಕೆಯನ್ನು ರಚಿಸಲಾಗಿದ್ದು, ಅದರ ಮೂಲಕ ಅವರು ಮಲವನ್ನು ಹೊರಹಾಕಿ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಡಾ. ಹಕ್ ಮಾಹಿತಿ ನೀಡಿದರು.

ಅವರ ಕೊಲೊನ್ ಕೆಲವು ತಿಂಗಳುಗಳಲ್ಲಿ ಗುಣವಾಗುವ ನಿರೀಕ್ಷೆಯಿದೆ ನಂತರ ನಾವು ಫಿಸ್ತಲ್ಲಾವನ್ನು ಮುಚ್ಚುತ್ತೇವೆ ಮತ್ತು ಅವರ ಕರುಳುಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ ಎಂದಿದ್ದಾರೆ.

ಮಾನವ ಅಂಗರಚನಾಶಾಸ್ತ್ರದ ಬಗ್ಗೆ ಹೇಳುವುದಾದರೆ, ಗಾಜಿನ ಟಂಬ್ಲರ್ ಅಲ್ಲಿ ಸೇರಿಕೊಳ್ಳಲು ಒಂದೇ ಒಂದು ಮಾರ್ಗವಿದೆ. ಅದನ್ನು ಗುದದ್ವಾರದ ಮೂಲಕ ದೇಹಕ್ಕೆ ನೂಕಬಹುದು. ಆದರೆ ಈ ಬಗ್ಗೆ ನಾವು ಸತ್ಯಗಳನ್ನು ಹುಡುಕಲು ಅವರನ್ನು ಹೆಚ್ಚು ಪ್ರಶ್ನೆ ಮಾಡಿದರೆ ರೋಗಿಯ ಖಾಸಗೀತನಕ್ಕೆ ಧಕ್ಕೆ ಮಾಡಿದಂತೆ. ವೈದ್ಯರಾಗಿ ನಾವು ಅವರ ಗೌಪ್ಯತೆಯನ್ನು ರಕ್ಷಿಸಲು ಕರ್ತವ್ಯ ಬದ್ಧರಾಗಿದ್ದೇವೆ ಎಂದು ಇದೇ ವೇಳೆ ಹೇಳಿದರು.

ABOUT THE AUTHOR

...view details