ಕರ್ನಾಟಕ

karnataka

ETV Bharat / bharat

ಉತ್ತರಾಖಂಡದ ಭಾರತ-ಚೀನಾ ಗಡಿ ಬಳಿ ಹಿಮಸ್ಫೋಟ

ಚಮೋಲಿ ಜಿಲ್ಲೆಯ ಭಾರತ-ಚೀನಾ ಗಡಿಯಲ್ಲಿರುವ ಸುಮ್ನಾದ ಬಿಆರ್‌ಒ ಶಿಬಿರದ ಬಳಿ ಹಿಮಸ್ಫೋಟ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಬಿಆರ್‌ಒ ಕಮಾಂಡರ್ ಕರ್ನಲ್ ಮನೀಶ್ ಕಪಿಲ್ ಈ ಬಗ್ಗೆ ಖಚಿತಪಡಿಸಿದ್ದಾರೆ.

glacier-broken on the India-China border
ಉತ್ತಾರಾಖಂಡದ ಭಾರತ-ಚೀನಾ ಗಡಿ ಬಳಿ ಹಿಮಸ್ಪೋಟ

By

Published : Apr 24, 2021, 7:59 AM IST

ಚಮೋಲಿ ( ಉತ್ತರಾಖಂಡ) :ಚಮೋಲಿ ಜಿಲ್ಲೆಯ ಇಂಡೋ-ಚೀನಾ ಗಡಿ ಪ್ರದೇಶ ಸುಮ್ನಾದ ಬಾರ್ಡರ್ ರೋಡ್ಸ್ ಆರ್ಗನೈಜೇಷನ್ (ಬಿಆರ್‌ಒ) ಕ್ಯಾಂಪ್ ಬಳಿ ಮಲಾರಿ-ಸುಮ್ನಾ ರಸ್ತೆಯಲ್ಲಿ ಹಿಮಸ್ಫೋಟ ಸಂಭವಿಸಿದೆ.

ಬಾರ್ಡರ್ ರೋಡ್ಸ್ ಆರ್ಗನೈಜೇಷನ್ ಕಮಾಂಡರ್ ಕರ್ನಲ್ ಮನೀಶ್ ಕಪಿಲ್ ಈ ಘಟನೆ ಬಗ್ಗೆ ಖಚಿತಪಡಿಸಿದ್ದಾರೆ. ಕರ್ನಲ್ ಕಪಿಲ್ ಪರಿಸ್ಥಿತಿ ನಿಭಾಯಿಸಲು ಸ್ಥಳಕ್ಕೆ ಸೇನಾ ತಂಡಗಳನ್ನು ರವಾನಿಸಿದ್ದಾರೆ.

ಮಾಹಿತಿಯ ಪ್ರಕಾರ, ಈ ಘಟನೆ ನಡೆದ ಸ್ಥಳದ ಬಳಿ ಬಿಆರ್‌ಒ ಕಾರ್ಮಿಕರು ರಸ್ತೆ ನಿರ್ಮಾಣದಲ್ಲಿ ನಿರತರಾಗಿದ್ದರು. ಸದ್ಯ, ಅತಿಯಾದ ಹಿಮಪಾತದಿಂದಾಗಿ ಈ ಪ್ರದೇಶದಲ್ಲಿ ವೈರ್‌ಲೆಸ್ ಸೆಟ್‌ಗಳು ಕಾರ್ಯನಿರ್ವಹಿಸುತ್ತಿಲ್ಲ.

ಈ ನಡುವೆ, ಪೊಲೀಸ್ ಅಧಿಕಾರಿ ಯಶ್ವಂತ್ ಸಿಂಗ್ ಚೌಹಾನ್, ಹಿಮ ಸ್ಫೋಟದಂತ ಯಾವುದೇ ಘಟನೆ ನಡೆದಿಲ್ಲ ಎಂದು ತಿಳಿಸಿದ್ದಾರೆ. ನಿತಿ ಕಣಿವೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಹಿಮಪಾತವಾಗುತ್ತಿದೆ. ಜೋಶಿಮಠ -ಮಲಾರಿ ಹೆದ್ದಾರಿಯು ಹಿಮಾವೃತವಾಗಿದ್ದು, ಸೇನೆ ಮತ್ತು ಐಟಿಬಿಪಿ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.

ಘಟನೆ ಬಗ್ಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದು, ಸಹಾಯಕ್ಕಾಗಿ ಐಟಿಬಿಪಿ ಪಡೆಯನ್ನು ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ ಎಂದು ಉತ್ತರಾಖಂಡ ಸಿಎಂ ತಿರಥ್ ಸಿಂಗ್ ರಾವಥ್ ಹೇಳಿದ್ದಾರೆ. ಈ ಹಿಂದೆ ಚಮೋಲಿಯಲ್ಲಿ ಸಂಭವಿಸಿದ ಹಿಮ ಸ್ಫೋಟದಲ್ಲಿ 70ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು ಮತ್ತು 200 ಅಧಿಕ ಜನ ಕಾಣೆಯಾಗಿದ್ದಾರೆ.

ABOUT THE AUTHOR

...view details