ಕರ್ನಾಟಕ

karnataka

ETV Bharat / bharat

ಯುವತಿಯರಿಗೆ ಡ್ರಗ್ಸ್​ ನೀಡಿ, ಲೈಂಗಿಕ ದೌರ್ಜನ್ಯ; ಮುಂಬೈ ಗ್ಯಾಂಗ್​ ಬಂಧನ

ಪೆಡ್ಲರ್​ಗಳ ಸಹಾಯದಿಂದ ಡ್ರಗ್ಸ್​ ತಂದು ಮಾರಾಟ - ಯುವತಿಯನ್ನು ಬಂಧಿಸಿದ ಹೈದರಾಬಾದ್​ ನಾರ್ಕೋಟಿಕ್​ ಅಧಿಕಾರಿಗಳು- ತನಿಖೆಗೆ ಮುಂದಾದಾಗ ಬಯಲಾಯ್ತು ಬೃಹತ್​ ಜಾಲ

By

Published : Feb 15, 2023, 12:18 PM IST

Girls are given drugs and sexually assaulted
ಯುವತಿಯರಿಗೆ ಡ್ರಗ್ಸ್​ ನೀಡಿ, ಲೈಂಗಿಕ ದೌರ್ಜನ್ಯ

ಹೈದರಾಬಾದ್​(ತೆಲಂಗಾಣ): ಮುಂಬೈನಲ್ಲಿ ಯುವತಿಯರಿಗೆ ಡ್ರಗ್ಸ್​ ನೀಡಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಗ್ಯಾಂಗ್​​ವೊಂದನ್ನು ಹೈದರಾಬಾದ್​ನ ನಾರ್ಕೋಟಿಕ್​ ಜಾರಿ ನಿರ್ದೇಶನಾಲಯ ದಳ (ಎಚ್​ಎನ್​ಯು) ಬಂಧಿಸಿದೆ. ಜತಿನ್​ ಬಾಲಚಂದ್ರ ಭಲೆರಾಂ (36), ಜಾವೇದ್​ ಶಂಶೇರ್​ ಆಲಿ ಸಿದ್ಧಿಕಿ (34), ಜುನೈದ್​ ಶೇಕ್​ ಶಂಶುದ್ದಿನ್​(28) ಮತ್ತು ವಿಕಾಸ್​ ಮೋಹನ್​ ಕುಮಾರ್​ ಆಲಿಯಾಸ್​​ ವಿಕ್ಕಿ(28) ಬಂಧಿತರು.

ಇವರೆಲ್ಲಾ ಮುಂಬೈನವರಾಗಿದ್ದು, ಇವರ ಬಳಿ ಇದ್ದ 204ಗ್ರಾಂ ಮಾದಕ ವಸ್ತುವನ್ನು ಅನ್ನು ವಶಕ್ಕೆ ಪಡೆಯಲಾಗಿದೆ. ಮಹಿಳೆಯೊಬ್ಬಳು ಡ್ರಗ್ಸ್​ ಮಾರಾಟ ಮಾಡುತ್ತಿದ್ದರ ತನಿಖೆಗೆ ಮುಂದಾದಾಗ ಈ ಗ್ಯಾಂಗ್​ ಪತ್ತೆಯಾಗಿದೆ ಎಂಬ ಮಾಹಿತಿಯನ್ನು ಬಂಜಾರ ಹಿಲ್ಸ್​ ಪೊಲೀಸ್​ ಕಮಾಂಡ್​ ಕಂಟ್ರೋಲ್​ ಕೇಂದ್ರದಲ್ಲಿ ಎಚ್​ಎನ್​ಯು ಡಿಸಿಪಿ ಗುಮ್ಮಿ ಚಕ್ರವರ್ತಿ ಅವರೊಂದಿಗೆ ನಡೆಸಿದ ಜಂಟಿ ಮಾಧ್ಯಮಗೋಷ್ಟಿಯಲ್ಲಿ ನಗರ ಪೊಲೀಸ್​ ಕಮಿಷನರ್​​ ಸಿ ವಿ ಆನಂದ್​ ತಿಳಿಸಿದರು.

ಯುವತಿಯರಗೆ ಡ್ರಗ್ಸ್​ ಮಾರಾಟ: ಜತೀನ್​ ವಿಮಾ ಏಜೆಂಟ್​ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದು, ಈತ ಕೆಜಿಗೆ 10 ಲಕ್ಷ ರೂ.ನಂತೆ ನಿಷೇಧಿತ ಮಾದಕ ವಸ್ತುವನ್ನು ಡ್ರಗ್​ ಡೀಲರ್​ನಿಂದ ಪಡೆದಿದ್ದ. ಇದನ್ನು 5 ಮತ್ತು 10 ಗ್ರಾಂ ನಂತೆ ವಿಂಗಡಿಸಿ 20 ಲಕ್ಷ ಮೌಲ್ಯಕ್ಕೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ. ಮತ್ತೊಬ್ಬ ಆರೋಪಿ ಜಾವೇದ್ ಜೊತೆ ಪಾರ್ಟಿಗಳನ್ನು ಆಯೋಜಿಸುವಾಗ ಹುಡುಗಿಯರಿಗೆ ಇದನ್ನು ನೀಡುತ್ತಿದ್ದ. ಈ ಡ್ರಗ್ಸ್​ ನೀಡಿದಾಗ ಅವರನ್ನು ಲೈಂಗಿಕವಾಗಿ ದೌರ್ಜನ್ಯಕ್ಕೆ ಒಳಪಡಿಸಲಾಗುತ್ತಿತ್ತು. ಜತೀನ್​ನ 81 ಗ್ರಾಹಕರು ಮತ್ತು ಜಾವೇದ್​ನ 30 ಗ್ರಾಹಕರು ಯುವತಿಯರಾಗಿದ್ದರು ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಇದೇ ಪ್ರದೇಶದ ವಿಕಾಸ್​​, ದಿನೇಶ್​​ ಮತ್ತು ಜುನೈದ್​ ಶೇಕ್​ ಶಂಶುದ್ದಿನ್​ ಇವರಿಂದ ಬಲ್ಕ್​ನಲ್ಲಿ ಡ್ರಗ್ಸ್​ ಪಡೆದು ಗ್ರಾಹಕರಿಗೆ ನೀಡುತ್ತಿದ್ದರು ಎಂಬುದನ್ನು ಪೊಲೀಸರು ವಿವರಿಸಿದ್ದಾರೆ.

ಸಿಕ್ಕಿಬಿದ್ದಿದ್ದು ಹೇಗೆ: ಸನಾಖಾನ್​ (34) ಎಂಬ ಮುಂಬೈ ಮಹಿಳೆ ಐಟಿ ಕೆಲಸಕ್ಕೆ ಎಂದು ಕಳೆದ ವರ್ಷ ಏಪ್ರಿಲ್​ನಲ್ಲಿ ಕೊಂದಡಪುರ್​​ಗೆ ಬಂದಿದ್ದಳು. ಡ್ರಗ್ ಚಟಕ್ಕೆ ಒಳಗಾಗಿದ್ದ ಈಕೆ ವೀಕೆಂಡ್​​ನಲ್ಲಿ ಮಾದಕ ವಸ್ತುವಿಗಾಗಿ ಮುಂಬೈಗೆ ಹೋಗುತ್ತಿದ್ದಳು. ಈಕೆ ಗ್ರಾಂಗೆ ನೂರು ರೂಪಾಯಿಯಂತೆ 10 ರಿಂದ 12 ಗ್ರಾಂ ಮಾದಕ ವಸ್ತು ಖರೀದಿಸಿ 2000 ಗ್ರಾಂನಂತೆ ಇತರೆ ಮಹಿಳೆಯರಿಗೆ ಮಾರಾಟ ಮಾಡುತ್ತಿದ್ದಳು. ಕಳೆದ ತಿಂಗಳು 12 ಗ್ರಾಂ ಮಾದಕ ವಸ್ತು ಜೊತೆಗೆ ಮುಂಬೈನಿಂದ ಮರಳುತ್ತಿದ್ದ ಈಕೆಯನ್ನು ಸಿಕಂದರಾಬಾದ್​​ ರಾಣೆಯ ಗೋಪಾಲಪುರಂ ಪೊಲೀಸರು ವಶಕ್ಕೆ ಪಡೆದಿದ್ದರು.

ಗ್ರಾಹಕರ ಸೋಗಿನಲ್ಲಿ ಕಾರ್ಯಾಚರಣೆ: ಈಕೆ ನೀಡಿದ ಮಾಹಿತಿ ಅನುಸಾರ ಪೊಲೀಸರು ಗ್ರಾಹಕರ ಸೋಗಿನಲ್ಲಿ ಹೋಗಿ ಕಾರ್ಯಾಚಾರಣೆ ನಡೆಸಿದ್ದರು. ಇದರಲ್ಲಿ ದಿನೇಶ್​ ಮತ್ತು ಇತರೆ ಆರೋಪಿಯನ್ನು ಇತ್ತೀಚೆಗೆ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಸನಾಖಾನ್​ನಿಂದ ಸುಮಾರು 20 ಯುವತಿಯರು ಡ್ರಗ್ಸ್​ ಪಡೆಯುತ್ತಿದ್ದರು ಎಂಬ ವರದಿ ಇದೆ. ತನಿಖೆಯ ಸಮಯದಲ್ಲಿ ವಶಕ್ಕೆ ಪಡೆಯಲಾದ ಡ್ರಗ್ ದಂಧೆಗೆ ಸಂಬಂಧಿಸಿದ ಮಾಹಿತಿಯನ್ನು ಕೂಡ ಮುಂಬೈ ಪೊಲೀಸರೊಂದಿಗೆ ಹಂಚಿಕೊಳ್ಳಲಾಗಿದೆ. ಮುಂಬೈನಿಂದ ಮಾದಕ ವಸ್ತುಗಳ ಹರಿವು ಹೆಚ್ಚಾಗುತ್ತಿದ್ದು, ಹೈದರಾಬಾದ್ ಮತ್ತು ತೆಲಂಗಾಣಕ್ಕೆ ಡ್ರಗ್ಸ್ ಸರಬರಾಜನ್ನು ತಡೆಯಲು ಮುಂಬೈ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸುತ್ತೇವೆ ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಇದನ್ನೂ ಓದಿ: ಬಾಂಬ್​ ಸ್ಫೋಟ ಪ್ರಕರಣ: ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಎನ್​ಐಎ ಮಿಂಚಿನ ದಾಳಿ

ABOUT THE AUTHOR

...view details