ಕರ್ನಾಟಕ

karnataka

ETV Bharat / bharat

ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸುವುದೇ ನಿಷ್ಪ್ರಯೋಜಕ ಎಂದರು ಜಾವಡೇಕರ್ - ರಾಹುಲ್ ಗಾಂಧಿ ಹೇಳಿಕೆಗೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಪ್ರತಿಕ್ರಿಯೆ

ದೇಶದಲ್ಲಿ ಸದ್ದಾಂ ಹುಸೇನ್​, ಗಡಾಫಿ ಆಡಳಿತವಿದೆ ಎಂಬ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಜಾವಡೇಕರ್, ತುರ್ತು ವರ್ಷದಲ್ಲಿ ಮಾತ್ರ ನಾವು ಗಡಾಫಿ ಮತ್ತು ಸದ್ದಾಂ ಅವರಂತಹ ಸಮಯಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಹೇಳಿದ್ದಾರೆ.

Giving comment on Rahul Gandhi's opinion is worthless
ಕೇಂದ್ರ ಸಚಿವ ಜಾವಡೇಕರ್

By

Published : Mar 17, 2021, 12:52 PM IST

ನವದೆಹಲಿ: ರಾಹುಲ್ ಗಾಂಧಿಯವರ ಅಭಿಪ್ರಾಯದ ಬಗ್ಗೆ ಪ್ರತಿಕ್ರಿಯೆ ನೀಡುವುದು ನಿಷ್ಪ್ರಯೋಜಕವಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ವ್ಯಂಗ್ಯವಾಡಿದರು.

ಭಾರತದ ಪ್ರಜಾಪ್ರಭುತ್ವವನ್ನು ಗಡಾಫಿ ಮತ್ತು ಸದ್ದಾಂ ಹುಸೇನ್ ಅವರೊಂದಿಗೆ ಹೋಲಿಸುವುದು 80 ಕೋಟಿ ಮತದಾರರಿಗೆ ಮಾಡಿದ ಅವಮಾನ. ತುರ್ತು ವರ್ಷದಲ್ಲಿ ಮಾತ್ರ ನಾವು ಗಡಾಫಿ ಮತ್ತು ಸದ್ದಾಂ ಅವರಂತಹ ಸಮಯಕ್ಕೆ ಸಾಕ್ಷಿಯಾಗಿದ್ದೇವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಇದನ್ನೂ ಓದಿ:ದೇಶದಲ್ಲಿ ಸದ್ದಾಂ ಹುಸೇನ್​, ಗಡಾಫಿ ಆಡಳಿತವಿದೆ: ರಾಹುಲ್ ಗಾಂಧಿ ಕಿಡಿಕಿಡಿ

ದೇಶದಲ್ಲಿ ಸದ್ದಾಂ ಹುಸೇನ್ ಮತ್ತು ಲಿಬಿಯಾದ ಸರ್ವಾಧಿಕಾರಿ ಮುಹಮ್ಮರ್ ಗಡಾಫಿ ಹಾಗೆಯೇ ಸರ್ವಾಧಿಕಾರಿ ಧೋರಣೆ ಅನುಸರಿಸುವ ಮೂಲಕ ಚುನಾವಣೆಯಲ್ಲಿ ಜಯಗಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬ್ರೌನ್ ವಿಶ್ವವಿದ್ಯಾಲಯದ ಆನ್‌ಲೈನ್ ಸಂವಾದದಲ್ಲಿ ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು.

For All Latest Updates

TAGGED:

ABOUT THE AUTHOR

...view details