ಅನಂತನಾಗ್, ಜಮ್ಮು-ಕಾಶ್ಮೀರ್:ಪ್ಲಾಸ್ಟಿಕ್ಗಳು ಪರ್ವತಗಳ ಎತ್ತರದಿಂದ ಸಮುದ್ರದ ಆಳಕ್ಕೆ ತಲುಪಿದೆ. ಅಂಟಾರ್ಟಿಕಾದ ಮಂಜುಗಡ್ಡೆಯಲ್ಲೂ ಪ್ಲಾಸ್ಟಿಕ್ ಪತ್ತೆಯಾಗಿದೆ. ನಾವು ಉಸಿರಾಡುವ ಗಾಳಿಯಲ್ಲಿ ಪ್ಲಾಸ್ಟಿಕ್ನ ಉಪಸ್ಥಿತಿಯೂ ಇದೆ. ಅದು ನಮ್ಮ ಶ್ವಾಸಕೋಶವನ್ನು ತಲುಪುತ್ತಿದೆ. ಪ್ಲಾಸ್ಟಿಕ್ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ನಮಗೆಲ್ಲ ಗೊತ್ತಿದ್ದರೂ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡುತ್ತಿಲ್ಲ. ಜಮ್ಮು ಮತ್ತು ಕಾಶ್ಮೀರದ ಹಳ್ಳಿಯೊಂದು ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಹೋರಾಡಲು ವಿಶಿಷ್ಟ ಅಭಿಯಾನವನ್ನು ಪ್ರಾರಂಭಿಸಿದೆ. ಈ ಗ್ರಾಮದಲ್ಲಿ ಪ್ಲಾಸ್ಟಿಕ್ ಬದಲು ಚಿನ್ನ ಸಿಗುತ್ತದೆ.
ದಕ್ಷಿಣ ಅನಂತನಾಗ್ ಜಿಲ್ಲೆಯ ಹಿಲ್ಲರ್ ಶಹಾಬಾದ್ ಬ್ಲಾಕ್ನ ಸಾದೇವಾರ ಗ್ರಾಮದ ನಿವಾಸಿಯಾದ ಸರಪಂಚ್ ಫಾರೂಕ್ ಅಹ್ಮದ್ ಗನೈ ಅವರು ತಮ್ಮ ಪ್ರದೇಶವನ್ನು ಪ್ಲಾಸ್ಟಿಕ್ ತ್ಯಾಜ್ಯದಿಂದ ಸ್ವಚ್ಛಗೊಳಿಸುವ ವಿಶಿಷ್ಟ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಗ್ರಾಮ ಪಂಚಾಯಿತಿಯ ಸರಪಂಚರು ಪ್ಲಾಸ್ಟಿಕ್ ಮಾಲಿನ್ಯವನ್ನು ಎದುರಿಸಲು ವಿಶಿಷ್ಟ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿರುವ ಫಾರೂಕ್ ಅಹಮದ್ ಗನೈ ಅವರು ‘ಪ್ಲಾಸ್ಟಿಕ್ ನೀಡಿ ಚಿನ್ನ ತೆಗೆದುಕೊಳ್ಳಿ’ ಎಂಬ ಅಭಿಯಾನ ಆರಂಭಿಸಿದರು. ಫಾರೂಕ್ ಗ್ರಾಮಸ್ಥರಿಗೆ ಪ್ಲಾಸ್ಟಿಕ್ ಸಂಗ್ರಹಿಸಲು ಪ್ರೇರಣೆ ನೀಡಿದರು.
ಈಟಿವಿ ಭಾರತದೊಂದಿಗೆ ಮಾತನಾಡಿದ ಫಾರೂಕ್ ಅಹ್ಮದ್, ಈ ಅಭಿಯಾನದಡಿ ಹೇಳಿದ ಗ್ರಾಮದಿಂದ 20 ಕ್ವಿಂಟಾಲ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವ ವ್ಯಕ್ತಿಗೆ 10 ಗ್ರಾಂ ಚಿನ್ನದ ನಾಣ್ಯವನ್ನು ನೀಡಲಾಗುವುದು. ತ್ಯಾಜ್ಯ ಸಂಗ್ರಹಣೆಗೆ ಯಾವುದೇ ಗುರಿ ಅಗತ್ಯವಿಲ್ಲ. ತಮ್ಮ ಕೈಲಾದಷ್ಟು ಪ್ರತಿಯೊಬ್ಬರೂ ಈ ಅಭಿಯಾನದಲ್ಲಿ ಪಾಲ್ಗೊಂಡು ಬಹುಮಾನ ಗೆಲ್ಲಬಹುದಾಗಿದೆ ಎಂದು ಹೇಳಿದರು.
ಪ್ಲಾಸ್ಟಿಕ್ ತ್ಯಾಜ್ಯದ ಬದಲಿಗೆ ಚಿನ್ನದ ನಾಣ್ಯಗಳ ನೀಡುವುದಕ್ಕೆ ಜಿಲ್ಲಾ ಅಭಿವೃದ್ಧಿ ಆಯುಕ್ತ ಡಾ.ಬಶರತ್ ಖಯೂಮ್ ಅವರ ಅನುಮೋದನೆ ದೊರೆತಿದೆ. ಈ ಬಗ್ಗೆ ಡಿಸಿಯವರೊಂದಿಗೆ ಚರ್ಚಿಸಿದ ಅವರು, ಈ ವಿಶಿಷ್ಟ ಅಭಿಯಾನಕ್ಕೆ ಡಿಸಿ ಅವರು ಫಾರೂಕ್ ಅವರನ್ನು ಶ್ಲಾಘಿಸಿದ್ದಾರೆ ಕೂಡಾ. ಜನವರಿ 7, 2023 ರಂದು ಗ್ರಾಮೀಣಾಭಿವೃದ್ಧಿ ಇಲಾಖೆ ಆಯೋಜಿಸಿದ್ದ ಸಮಾರಂಭದಲ್ಲಿ ಈ ಅಭಿಯಾನಕ್ಕೆ ಚಾಲನೆ ದೊರೆತಿದೆ.
ಅಭಿಯಾನದ ಪ್ರಾರಂಭ, ನಿರಂತರ ಸಾಮೂಹಿಕ ಮತ್ತು ವೈಯಕ್ತಿಕ ಸ್ವಚ್ಛತಾ ಅಭಿಯಾನಗಳು ಈ ಪ್ರದೇಶದಲ್ಲಿ ನಡೆಯುತ್ತಿವೆ. ಈ ಅಭಿಯಾನವನ್ನು ಯಶಸ್ವಿಗೊಳಿಸಲು ಫಾರೂಕ್ ಅಹಮದ್ ಅವರು ಕನಿಷ್ಠ 30 ಸ್ವಯಂಸೇವಕರೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇದರಲ್ಲಿ ಯುವ ಕ್ಲಬ್ಗಳು, ಔಕಾಫ್ ಸಂಸ್ಥೆಯ ಸ್ಥಳೀಯ ಸದಸ್ಯರು, ಹಿರಿಯ ನಾಗರಿಕರು ಮತ್ತು ನೀರಾವರಿ ನೌಕರರು ಸೇರಿದ್ದಾರೆ.
ಅಭಿಯಾನದ ವೇಳೆ ಕ್ಷೇತ್ರದ ರಸ್ತೆಗಳಲ್ಲದೇ ನದಿ-ಕಾಲುವೆಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಕಸ ಸಂಗ್ರಹಿಸಲು ಸಾಕಷ್ಟು ಸಂಗ್ರಹಣಾ ತಾಣಗಳಿವೆ. ಕಯಾಂ ಎಂಬಲ್ಲಿ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಅಷ್ಟೇ ಅಲ್ಲ ತ್ಯಾಜ್ಯವನ್ನು ಮರುಬಳಕೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಫಾರೂಕ್ ಹೇಳುತ್ತಾರೆ.