ನವದೆಹಲಿ:ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಂಗಳವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಅವರ ಹಕ್ಕುಗಳನ್ನು ಒದಗಿಸಲು ದುರಹಂಕಾರ ಬಿಡುವಂತೆ ಕಿಡಿಕಾರಿದರು.
ಕೇಂದ್ರದ ನೂತನ ಕೃಷಿ-ಮಾರುಕಟ್ಟೆ ಕಾನೂನುಗಳ ವಿರುದ್ಧ ಪಂಜಾಬ್ ಮತ್ತು ಹರಿಯಾಣ ಮೂಲದ ರೈತರು ದೆಹಲಿ ಗಡಿಯ ಸಿಂಗು, ಟಿಕ್ರಿ ಮತ್ತು ಗಾಜಿಪುರ ಪ್ರದೇಶದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜಧಾನಿ ಪ್ರವೇಶಿಸದಂತೆ ಕೇಂದ್ರವು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.
ಉತ್ತಮ ಬೆಲೆಗೆ ತಮ್ಮ ಬೆಳೆಗಳನ್ನು ಮಾರಾಟ ಮಾಡುವ ಸ್ವಾತಂತ್ರ್ಯವನ್ನು ರೈತರಿಗೆ ನೀಡುವ ಇತ್ತೀಚಿನ ಕಾನೂನುಗಳ ವಿರುದ್ಧ ತಪ್ಪು ಮಾಹಿತಿ ಅಭಿಯಾನ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಕೃಷಿ ಸುಧಾರಣೆಗಳನ್ನು ನಿನ್ನೆಯಷ್ಟೇ ಸಮರ್ಥಿಸಿಕೊಂಡಿದ್ದರು.
ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: 20 ಹೊಸ ಮಾರ್ಗಗಳಲ್ಲಿ ಸ್ಪೈಸ್ ಜೆಟ್ ಹಾರಾಟ
ಅನ್ನದಾನ ಮಾಡುವ ರೈತರು ಬೀದಿಗಿಳಿದು ಧರಣಿ ನಡೆಸುತ್ತಿದ್ದಾರೆ. ಟಿವಿಯಲ್ಲಿ 'ಸುಳ್ಳಿನ' ಭಾಷಣ ಮಾಡಲಾಗುತ್ತಿದೆ. ನಾವೆಲ್ಲರೂ ರೈತರ ಕಠಿಣ ಶ್ರಮಕ್ಕೆ ಋಣಿಯಾಗಿದ್ದೇವೆ ಎಂದು ಟ್ವೀಟ್ ಮೂಲಕ ರಾಹುಲ್ ಗಾಂಧಿ ಇಂದು ಪ್ರತ್ಯುತ್ತರ ನೀಡಿದ್ದಾರೆ.
ಈ ವ್ಯಾಜ್ಯವು ಅವರಿಗೆ ನ್ಯಾಯ ಮತ್ತು ಹಕ್ಕುಗಳನ್ನು ನೀಡುವುದರ ಮೂಲಕವೇ ಮುಕ್ತಾಯವಾಗುತ್ತದೆ. ಅವರನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕವಾಗಲ್ಲಿ ಅಥವಾ ಅವರು ವಿರುದ್ಧ ಅಶ್ರವಾಯು ಬಳಸುವ ಮೂಲಕವಾಗಲಿ ಅಥವಾ ಲಾಠಿಗಳಿಂದ ಹೊಡೆಯುವ ಮೂಲಕವಾಗಲಿ ಅಲ್ಲ ಎಂದು ಹಿಂದಿಯಲ್ಲಿ ಬರೆದುಕೊಂಡಿದ್ದಾರೆ.
ಎಚ್ಚರಗೊಂಡು ದುರಹಂಕಾರದ ಕುರ್ಚಿಯಿಂದ ಕೆಳಗಿಳಿದು ರೈತರಿಗೆ ಅವರ ಹಕ್ಕುಗಳನ್ನು ನೀಡುವ ಬಗ್ಗೆ ಯೋಚಿಸಿ ಎಂದು ರಾಹುಲ್ ಗಾಂಧಿ ಪ್ರಧಾನಿ ಮೋದಿ ಹೆಸರು ಉಲ್ಲೇಖಿಸದೆ ಒತ್ತಾಯಿಸಿದ್ದಾರೆ.