ಕರ್ನಾಟಕ

karnataka

ETV Bharat / bharat

ಪ್ರಧಾನಿ ಮೋದಿಗೆ ಒಂದು ಅವಕಾಶ ನೀಡಿ, ಮುಂದಿನ 5 ವರ್ಷಗಳಲ್ಲಿ 'ಗೋಲ್ಡನ್​ ಬಂಗಾಳ': ಅಮಿತ್​ ಶಾ ಭರವಸೆ - ಅಮಿತ್​ ಶಾ ಇತ್ತೀಚಿನ ಸುದ್ದಿ

ಎರಡು ದಿನಗಳ ಕಾಲ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿದ್ದ ಅಮಿತ್ ಶಾ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ್ದು, ಪ್ರಧಾನಿ ಮೋದಿಗೆ ಒಂದು ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

Amit Shah
Amit Shah

By

Published : Nov 6, 2020, 7:45 PM IST

ಕೋಲ್ಕತ್ತಾ: ಎರಡು ದಿನಗಳ ಕಾಲ ಪಶ್ಚಿಮ ಬಂಗಾಳದ ಪ್ರವಾಸ ಕೈಗೊಂಡಿದ್ದ ಅಮಿತ್​ ಶಾ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಒಂದು ಅವಕಾಶ ನೀಡಿ ಎಂದು ಬಂಗಾಳ ಜನರಲ್ಲಿ ಬಿಜೆಪಿ ಚಾಣಕ್ಯ ಮನವಿ ಮಾಡಿಕೊಂಡರು.

ಮುಂದಿನ ವರ್ಷ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಎರಡು ದಿನಗಳ ಪ್ರವಾಸ ಕೈಗೊಂಡಿದ್ದ ಅಮಿತ್​ ಶಾ ಪಕ್ಷ ಸಂಘಟನೆ ಕೆಲಸ ಮಾಡಿದರು. ಇದಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, 2010ರಲ್ಲಿ ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿಗೆ ರಾಜ್ಯದ ಅಧಿಕಾರದ ಚುಕ್ಕಾಣಿ ನೀಡಿತು. ಆದರೆ 10 ವರ್ಷಗಳ ಕೆಳಗೆ ಅವರು ನೀಡಿರುವ ಎಲ್ಲ ಭರವಸೆ ವಿಫಲವಾಗಿವೆ. ಇದರಿಂದ ಜನರು ಹತಾಶೆಗೊಳಗಾಗಿದ್ದಾರೆ ಎಂದರು.

ಅಮಿತ್​ ಶಾ ಸುದ್ದಿಗೋಷ್ಠಿ

ಕೋವಿಡ್​-19 ಹಾಗೂ ಪ್ರವಾಹ ಪರಿಹಾರ ಕಾರ್ಯದ ಸಮಯದಲ್ಲಿ ತೃಣಮೂಲ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿದ್ದು, ರಾಜ್ಯದಲ್ಲಿ ಮೂರು ರೀತಿಯ ಕಾನೂನು ಮಾಡಿದ್ದಾರೆ. ಒಂದು ಮಮತಾ ಬ್ಯಾನರ್ಜಿ ಸೋದರಳಿಯನಿಗೋಸ್ಕರ, ಇನ್ನೊಂದು ತಮ್ಮ ವೋಟ್​ ಬ್ಯಾಂಕ್​ಗೆ, ಇನ್ನೊಂದು ಸಾಮಾನ್ಯ ಬಂಗಾಳಿ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿ ರಾಜಕೀಯ ಕಾರ್ಯಕರ್ತರ ಹತ್ಯೆಯ ವಿಷಯ ಬಂದಾಗ ಪಶ್ಚಿಮ ಬಂಗಾಳ ದೇಶದಲ್ಲಿ ಮುನ್ನಡೆ ಸಾಧಿಸಿದೆ. ಕಳೆದ ಒಂದು ವರ್ಷದಲ್ಲಿ 100 ಬಿಜೆಪಿ ಕಾರ್ಯಕರ್ತರನ್ನ ಹತ್ಯೆ ಮಾಡಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಗಳಿಸಿ ಸರ್ಕಾರ ರಚನೆ ಮಾಡಲಿದೆ. ಲೋಕಸಭೆ ಚುನಾವಣೆಯಲ್ಲಿ ಜನರು ನಮಗೆ ಆಶೀರ್ವಾದ ಮಾಡಿರುವ ರೀತಿಯಲ್ಲಿ ಇಲ್ಲೂ ಮಾಡುತ್ತಾರೆ ಎಂದಿದ್ದಾರೆ.

ABOUT THE AUTHOR

...view details