ಪಾಟ್ನಾ(ಬಿಹಾರ): ಸಲಿಂಗಿಗಳ ಹಕ್ಕು ಕಾಪಾಡಲು 2018ರಲ್ಲೇ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಹಾಕಿದೆ. ಇದರ ಹೊರತಾಗಿ ಕೂಡ ದೇಶದಲ್ಲಿ ಸಲಿಂಗಕಾಮ ಒಪ್ಪಿಕೊಳ್ಳುತ್ತಿಲ್ಲ. ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಇದೀಗ, ಬಿಹಾರದ ಯುವತಿಯರಿಬ್ಬರು ತಮಗೆ ರಕ್ಷಣೆ ನೀಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪರಸ್ಪರ ಪ್ರೀತಿಸುತ್ತಿರುವುದಾಗಿ ಹೇಳಿಕೊಂಡಿರುವ ಹುಡುಗಿಯರಿಬ್ಬರು ಕಳೆದ ಗುರುವಾರ ತಡರಾತ್ರಿ ಬಿಹಾರದ ಪಾಟ್ನಾದಲ್ಲಿರುವ ಮಹಿಳಾ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಇಲ್ಲಿ ಪ್ರಕರಣ ಸ್ವೀಕಾರ ಮಾಡಲು ನಿರಾಕರಣೆ ಮಾಡಿರುವ ಕಾರಣ ಎಸ್ಎಸ್ಪಿ ಮಾನವಜಿತ್ ಸಿಂಗ್ ಅವರ ನಿವಾಸಕ್ಕೆ ತೆರಳಿ ರಕ್ಷಣೆ ಕೋರಿದ್ದಾರೆ.
ಏನಿದು ಪ್ರಕರಣ:ಇಂದ್ರಪುರಿ ನಿವಾಸಿ ತನಿಷ್ಕ ಶ್ರೀ ಹಾಗೂ ಪಾಟ್ನಾದ ಸಹರ್ಸಾ ನಿವಾಸಿ ಶ್ರೇಯಾ ಘೋಷ್ ಒಟ್ಟಿಗೆ ಇರಲು ಮುಂದಾಗಿದ್ದಾರೆ. ಆದರೆ, ಇದಕ್ಕೆ ಇಬ್ಬರ ಕುಟುಂಬದ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ತನಿಷ್ಕ ಶ್ರೀಯನ್ನ ಗೃಹಬಂಧನದಲ್ಲಿರಿಸಲಾಗಿದೆ. ಜೊತೆಗೆ ಆಕೆಯ ಬಳಿಯ ಮೊಬೈಲ್ ಸಹ ಕಸಿದುಕೊಂಡು, ಮನೆಯಿಂದ ಹೊರಹೋಗದಂತೆ ತಾಕೀತು ಮಾಡಿದ್ದಾರೆ. ಆದರೆ, ಸಿನಿಮಾ ನೋಡುವ ನೆಪದಲ್ಲಿ ಇಬ್ಬರೂ ಮತ್ತೆ ಭೇಟಿಯಾಗಿದ್ದಾರೆ.